ಗೃಹಲಕ್ಷ್ಮಿ ಯೋಜನೆ (Gruha lakshmi scheme) ಆರಂಭದಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದರು ಕೂಡ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದಕ್ಕೆ ಕಾರಣ ಗೃಹಲಕ್ಷ್ಮಿ ಯೋಜನೆಯ 2,000 ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಇದುವರೆಗೆ ಹಣ ಜಮಾ ಆಗಿಲ್ಲ.
ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣ (women financial empowerment) ಕ್ಕಾಗಿ ಆರಂಭಗೊಂಡಿರುವ ಯೋಜನೆ ಆಗಿದ್ದು ಇದರಿಂದ ಸಾಕಷ್ಟು ಮಹಿಳೆಯರು ಪ್ರಯೋಜನ ಪಡೆದುಕೊಳ್ಳುತ್ತಿರುವುದಂತೂ ಸತ್ಯ
ಸಿಹಿ ಸುದ್ದಿ! ಏ.1ರಿಂದ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳು ವಿತರಣೆ
.ಐದು ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಸರ್ಕಾರ ಮಾಡಿದೆ. ಅಂದರೆ 10 ಸಾವಿರ ರೂಪಾಯಿಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ. ಈ ನಡುವೆ ಇದುವರೆಗೆ ಒಂದೇ ಕಂತಿನ ಹಣ ಬಿಡುಗಡೆಯಾಗಿ ಮುಂದೆ ಯಾವ ಕಂತಿನ ಹಣವು ಬಿಡುಗಡೆ ಆಗದೆ ಇರುವ, ಅಥವಾ ಕೇವಲ ಅರ್ಜಿ ಸಲ್ಲಿಸಿದ್ದು ಮಾತ್ರ ತಮ್ಮ ಖಾತೆಗೆ ಒಂದು ರೂಪಾಯಿ ಕೂಡ ಜಮಾ ಆಗಿಲ್ಲ (Money Deposit) ಎನ್ನುವಂತಹ ಮಹಿಳೆಯರ ಸಂಖ್ಯೆ ಸಾಕಷ್ಟಿದೆ.
*ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ
*ರೇಷನ್ ಕಾರ್ಡ್ ಅಪ್ಡೇಟ್ ಆಗಿಲ್ಲ
*NPCI ಆಗಿಲ್ಲ
*ತಾಂತ್ರಿಕ ದೋಷಗಳು ಕಾರಣ.
ಸ್ವಂತ ಮನೆ ಇಲ್ಲದವರಿಗೆ 36,000 ಮನೆ ವಿತರಣೆಗೆ ಸರ್ಕಾರ ನಿರ್ಧಾರ; ಇಲ್ಲಿದೆ ಮಾಹಿತಿ
ಇದೆಲ್ಲವುಗಳನ್ನು ಹೊರತುಪಡಿಸಿ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಗಾಗಿ ಸಲ್ಲಿಸಿದ ಅರ್ಜಿ ಪುರಾವೆ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ತೆಗೆದುಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಖಾತೆಗೆ ಯಾಕೆ ಹಣ ಜಮಾ ಆಗಿಲ್ಲ ಎನ್ನುವ ಮಾಹಿತಿಯನ್ನು ಚೆಕ್ ಮಾಡಿಸಿ ತಿಳಿದುಕೊಳ್ಳಿ. ನಂತರ ಸುಲಭವಾಗಿ ಅದಕ್ಕೆ ಪರಿಹಾರ ಕಂಡು ಹಿಡಿಯಬಹುದು.
ಉಚಿತ ಕರೆಂಟ್ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಅಪ್ಡೇಟ್! ಈಗ ಇನ್ನಷ್ಟು ಬೆನಿಫಿಟ್
ಸಮಸ್ಯೆ ಎಲ್ಲಿದೆ ಎಂದು ತಿಳಿದುಕೊಳ್ಳದೆ ಪರಿಹಾರಕ್ಕಾಗಿ ಹುಡುಕಾಟ ಮಾಡಿದರೆ ಯಾವುದೇ ಸಮಸ್ಯೆಯೂ ಕೂಡ ಪರಿಹಾರವಾಗುವುದಿಲ್ಲ. ಹಾಗಾಗಿ ಮೊದಲು ಈ ಕೆಲಸ ಮಾಡಿ ನಂತರ ನಿಮ್ಮ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಆಗೇ ಆಗುತ್ತೆ. ಆರನೇ ಕಂತಿನ ಹಣವು ಕೂಡ ಬಿಡುಗಡೆ ಆಗಲಿದ್ದು ಬೇಗ ನೀವು ನಿಮ್ಮ ಖಾತೆಯಲ್ಲಿರುವ ಸಮಸ್ಯೆ ಪರಿಹರಿಸಿಕೊಂಡರೆ ಮಿಸ್ಸಾಗದೆ ನಿಮ್ಮ ಖಾತೆಗೆ ಹಣ ಬಂದು ಸೇರಲಿದೆ.
This work must be done to get money for next month Gruha Lakshmi Yojana