Karnataka NewsBangalore News

ರದ್ದಾದ ಬಿಪಿಎಲ್ ರೇಷನ್ ಕಾರ್ಡ್ ಮರು ವಿತರಣೆಗೆ ಸಿದ್ಧತೆ; ಇಲ್ಲಿದೆ ಮಹತ್ವದ ಮಾಹಿತಿ

ರಾಜ್ಯದ ಜನತೆಗೆ ರಾಜ್ಯ ಸರ್ಕಾರ (State government) ಗುಡ್ ನ್ಯೂಸ್ ನೀಡಿದೆ. ಈಗಾಗಲೇ ಸಾಕಷ್ಟು ಜನ ಪಡಿತರ ಚೀಟಿ (ration card) ಗಳನ್ನು ಬೇರೆ ಬೇರೆ ಕಾರಣಕ್ಕೆ ಕಳೆದುಕೊಂಡಿದ್ದಾರೆ.

ಅಂದರೆ ಅಂತಹ ಸಾಕಷ್ಟು ಜನರ ಪಡಿತರ ಚೀಟಿ ರದ್ದಾಗಿದೆ. ಆದರೆ ಈಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ (food minister K.H. muniyappa) ಅವರು ಈ ಬಗ್ಗೆ ಮಹತ್ತರವಾದ ನಿರ್ಧಾರವನ್ನು ತಿಳಿಸಿದ್ದಾರೆ. ಇದರಿಂದ ಸಾಕಷ್ಟು ಜನರಿಗೆ ಉಪಯೋಗವಾಗಲಿದೆ.

distribution of new ration card, Also the decision to cancel ration cards

ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸಿಗಲಿದೆ 50,000 ಸಹಾಯಧನ! ಪಡೆಯಿರಿ

ಪಡಿತರ ಚೀಟಿ ವಿತರಣೆಯ ಗೊಂದಲ ಬಗೆಹರಿಸಿದ ಸಚಿವರು!

ವಿಧಾನಸಭೆಯ ಕಲಾಪದಲ್ಲಿ ಗುರುವಾರ ಕಾಂಗ್ರೆಸ್ ನ ಮಹಿಳಾ ಮೋಟಮ್ಮ ಅವರು, ಪಡಿತರ ಚೀಟಿ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ 2021, ಜೂನ್ ಒಂದರಂದು ಹೊರಡಿಸಿದ್ದ ಆದೇಶದಂತೆ ರದ್ದುಕೊಂಡಿರುವ ಪಡಿತರ ಚೀಟಿಗಳಿಗೆ ಮರು ಜೀವ ನೀಡಲು ತೀರ್ಮಾನಿಸಿರುವುದರ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.

“ಫೋರ್ ವೀಲರ್ ವಯಕ್ತಿಕ ವಾಹನ (four wheeler vehicle) ವನ್ನು ಹೊಂದಿರುವ ಕುಟುಂಬದ ಆದ್ಯತಾ ಪಡಿತರ ಚೀಟಿ (BPL card) ಯನ್ನು ರದ್ದುಗೊಳಿಸುವಂತೆ ಈ ಹಿಂದಿನ ಸರ್ಕಾರ ಆದೇಶ ನೀಡಿತ್ತು. 2022 ಆಗಸ್ಟ್ 28ರಲ್ಲಿ, ಈ ಆದೇಶಕ್ಕೆ ತಡೆ ಬಿದ್ದಿತ್ತು. ಮೊದಲಿನ ಆದೇಶದಂತೆ ರದ್ದುಗೊಂಡಿರುವ ಆದ್ಯತ ಪಡಿತರ ಚೀಟಿಯನ್ನು ಈಗ ಮತ್ತೆ ಮರುಪರಿಶೀಲನೆ ನಡೆಸಿ, ಫಲಾನುಭವಿಗಳಿಗೆ ಹಿಂತಿರುಗಿಸಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ ಡೇಟ್ ಫಿಕ್ಸ್; ಬಿಪಿಎಲ್ ಕಾರ್ಡ್ ವಿತರಣೆಗೆ ನಿರ್ಧಾರ

Ration card Cancellationಮೂಡಿಗೆರೆಯಲ್ಲಿ ರದ್ದುಕೊಂಡಿದ್ದ ಪಡಿತರ ಚೀಟಿಗಳಿಗೆ ಮರುಜೀವ!

ಮೂಡಿಗೆರೆ ತಾಲೂಕಿನಲ್ಲಿ ಸುಮಾರು 599 ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿ ಮಾಡಲಾಗಿತ್ತು. ಮನೆಯಲ್ಲಿ ನಾಲ್ಕು ಚಕ್ರದ ವಾಹನ ಇರುವ ಕಾರಣಕ್ಕೆ ಇಂತಹ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿತ್ತು. ಹಾಗೂ ಅಂತಹ ಪಡಿತರ ಚೀಟಿಯನ್ನು ಆದ್ಯತೇತರ (APL) ಪಡಿತರ ಚೀಟಿ ಎಂದು ಪರಿವರ್ತಿಸಲಾಗಿತ್ತು. ಆದರೆ ತಮ್ಮ ಜೀವನ ನಿರ್ವಹಣೆಗಾಗಿ ಯಾರು ಫೋರ್ ವೀಲರ್ ಇಟ್ಟುಕೊಂಡು ಬಾಡಿಗೆ ಟ್ಯಾಕ್ಸಿ ಓಡಿಸುತ್ತಾರೋ ಅಂತವರಿಗೆ ಮತ್ತೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡಲು ನಿರ್ಧರಿಸಲಾಗಿದೆ.

ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸ ಮಾಡಲೇಬೇಕು!

ಹೊಸ ಅರ್ಜಿ ಸ್ವೀಕಾರದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು!

ಕಳೆದ ಒಂದು ವರ್ಷಗಳಿಂದ ಬಿಪಿಎಲ್ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಜನ ಪ್ರಯತ್ನಿಸಿದರು ಕೂಡ ಆಗುತ್ತಿಲ್ಲ. ಇದರಿಂದ ಅರ್ಹ ಕುಟುಂಬಕ್ಕೆ ತೊಂದರೆ ಆಗುತ್ತಿದೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಕೂಡ ಅಗತ್ಯವಾಗಿರುವ ಬಿಪಿಎಲ್ ಕಾರ್ಡ್ ಇಲ್ಲದೆ ಸಮಸ್ಯೆ ಅನುಭವಿಸುವಂತೆ ಆಗಿದೆ ಹಾಗಾಗಿ ಹೊಸ ಅರ್ಜಿ ಸ್ವೀಕಾರ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಅರ್ಹರಿಗೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ಇದಕ್ಕೆ ಬಿಜೆಪಿಯ ಇತರ ನಾಯಕರು ಹಾಗೂ ಕಾಂಗ್ರೆಸ್ ಶಾಸಕರು ಕೂಡ ದನಿಗೂಡಿಸಿದ್ದಾರೆ. “ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವಾಗ 2.95 ಲಕ್ಷ ಅರ್ಜಿ ಸ್ವೀಕಾರ ಮಾಡಲಾಗಿದೆ ಇವುಗಳಲ್ಲಿ 57 ಲಕ್ಷ ಪಡಿತರ ಚೀಟಿಗಳನ್ನು ಮಾತ್ರ ವಿತರಣೆ ಮಾಡಲಾಗಿತ್ತು

ಸಿಹಿ ಸುದ್ದಿ! ಏ.1ರಿಂದ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳು ವಿತರಣೆ

ವಿಲೇವಾರಿ ಮಾಡಿದ ಬಳಿಕ ಹೊಸ ಅರ್ಜಿ ಸ್ವೀಕರಿಸಲಾಗುತ್ತದೆ. ಇನ್ನು 60 ದಿನಗಳ ಒಳಗೆ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ಈ ನಿರ್ಧಾರದಿಂದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಕೊನೆಯ ಒಳಗೆ ಸಾಕಷ್ಟು ಪಡಿತರ ಚೀಟಿ ವಿತರಣೆ ಆಗಲಿದೆ ಜೊತೆಗೆ ಹೊಸ ಅರ್ಜುನ ಸ್ವೀಕಾರ ಕೂಡ ನಡೆಯಲಿದೆ.

Preparation for reissuance of canceled BPL ration card

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories