ರೈತರಿಗೆ ಮತ್ತೊಂದು ಗುಡ್ ನ್ಯೂಸ್! ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ
ಮಾನ್ಯ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ಕೂಡ ರೈತರಿಗೆ ಹೆಚ್ಚಿನ ಒತ್ತು ನೀಡಿರುವುದು ದೇಶದ ಜೀವಾಳ ಆಗಿರುವ ರೈತರಿಗೆ ಸಾಕಷ್ಟು ವಿವಿಧ ರೀತಿಯ ಕೃಷಿ ಚಟುವಟಿಕೆ (agriculture activities)ಗಳಿಗೆ ಸಹಾಯವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಲಾಗಿದೆ. ಇದರ ಜೊತೆಗೆ ಈಗಿರುವ ರೈತ ಪರ ಯೋಜನೆಗಳಿಗೆ ಅನುದಾನ ಹೆಚ್ಚಿಸುವುದಾಗಿಯೂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಸಾಲ ಸೌಲಭ್ಯ (Loan) ತೆಗೆದುಕೊಳ್ಳುವುದು ಸಹಜ, ಯಾರಿಗೆ ಸಾಲ ಹಿಂತಿರುಗಿಸಲು ಸಾಧ್ಯವಾಗಿಲ್ಲವೋ ಅಂತವರ ಸಾಲ ಮನ್ನಾ ಮಾಡಲು ಕೂಡ ಸರ್ಕಾರ ತೀರ್ಮಾನಿಸಿದೆ.
ರೈತ ವಿದ್ಯಾನಿಧಿ ಮೂಲಕ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ! ಪಡೆಯಲು ಅರ್ಜಿ ಸಲ್ಲಿಸಿ
ಇತ್ತೀಚಿಗೆ ಬಜೆಟ್ ನಲ್ಲಿ ರೈತ ಸಾಲ (Farmer Loan) ಮನ್ನಾ ಬಗ್ಗೆ ತೀರ್ಮಾನಿಸಲಾಗಿದ್ದು, ಮಧ್ಯಮಾವತಿಯ ಮತ್ತು ದೀರ್ಘಾವಧಿಯ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿರುವ ಸರ್ಕಾರ ಇದಕ್ಕಾಗಿ 496 ಕೋಟಿ ರೂಪಾಯಿಗಳ ಮೀಸಲಿಟ್ಟಿದೆ.
57000 ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಡಿಸಿಸಿ ಬ್ಯಾಂಕ್ ಗಳಲ್ಲಿ ಇರುವ ಸಾಲದ ಬಡ್ಡಿ ಮನ್ನಾ ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ರೈತರ ಆರ್ಥಿಕತೆಗಾಗಿಯೇ ವಿಶೇಷ ಅನುದಾನ!
2023 – 24ನೇ ಬಜೆಟ್ ನಲ್ಲಿ ರೈತರ ಪರ ಯೋಜನೆಗಳಿಗಾಗಿ ಇನ್ನೂರು ಕೋಟಿಗಳನ್ನು ಅನುದಾನ ನೀಡಲಾಗಿದ್ದು ಕೃಷಿ ಭಾಗ್ಯ ಯೋಜನೆ (krushi Bhagya scheme) ಗೆ ಈ ಹಣವನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಈ ಹಿಂದೆ ಜಾರಿಯಲ್ಲಿ ಇದ್ದ ಕೆಲವು ಕೃಷಿ ಪರ ಯೋಜನೆಗಳನ್ನು ಮತ್ತೆ ಸರ್ಕಾರ ಆರಂಭಿಸಲಿದೆ.
ಕೃಷಿ ಜಮೀನು ಹೊಂದಿರೋ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆಯಿರಿ
ರೈತ ತರಬೇತಿ! (Training for farmers)
ರೈತರ ಕೃಷಿ ಚಟುವಟಿಕೆಯನ್ನು ಉತ್ತೇಜಿಸಲು ಹಾಗೂ ಯುವಕರು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಕೊಳ್ಳಲು ಕೃಷಿಯ ಬಗ್ಗೆ ಅಗತ್ಯ ಇರುವ ತರಬೇತಿಯನ್ನು ನೀಡಲು ಸರ್ಕಾರ ನಿರ್ಧರಿಸಿದ್ದು Agri Accelerator Platform ಮೂಲಕ ಕೃಷಿ ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಲಾಗುತ್ತದೆ.
ರೈತರಿಗೆ ಸಿಗಲಿದೆ ಹೆಚ್ಚಿನ ಸಾಲ!
ಬಡ್ಡಿ ರಹಿತ ಅಲ್ಪಾವಧಿಯ ಸಾಲವನ್ನು ಮೂರು ಲಕ್ಷದಿಂದ ಐದು ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಲಾಗುವುದು. ಇನ್ನು 3% ಬಡ್ಡಿ ದರದಲ್ಲಿ ಮಧ್ಯಮಾವಧಿಯ ಹಾಗೂ ದೀರ್ಘಾವಧಿಯ ಸಾಲವನ್ನು ನೀಡಲಾಗುವುದು. ಇದರ ಮೊತ್ತ 10 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗುವುದು. ಒಟ್ಟಿನಲ್ಲಿ ಈ ಬಾರಿ ರಾಜ್ಯ ಸರ್ಕಾರ ಕೃಷಿಯ ಬಗ್ಗೆ ಹೆಚ್ಚು ಗಮನ ಹರಿಸಿದೆ ಎನ್ನುವುದು ಬಜೆಟ್ ಮಂಡನೆಯ ನಂತರ ರೈತರಿಗೆ ಖುಷಿ ನೀಡಿದೆ.
ಇಂತಹ ಮಹಿಳೆಯರ ಖಾತೆಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಜಮಾ! ಚೆಕ್ ಮಾಡಿಕೊಳ್ಳಿ
Another good news for farmers! Promise to waive farmers loans
Our Whatsapp Channel is Live Now 👇