ರೈತ ವಿದ್ಯಾನಿಧಿ ಮೂಲಕ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ! ಪಡೆಯಲು ಅರ್ಜಿ ಸಲ್ಲಿಸಿ

ರೈತ ಮಕ್ಕಳಿಗೆ ಹಾಗೂ ಭೂ ರಹಿತ ಕೃಷಿ ಚಟುವಟಿಕೆ (agriculture activities) ಯಲ್ಲಿ ತೊಡಗಿರುವ ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿ ವೇತನ (Education scholarship) ನೀಡಲಾಗುತ್ತಿದೆ.

ಕೃಷಿ ಇಲಾಖೆ (Agriculture department) ಯ ಕಡೆಯಿಂದ ರೈತ ಮಕ್ಕಳಿಗೆ ಹಾಗೂ ಭೂ ರಹಿತ ಕೃಷಿ ಚಟುವಟಿಕೆ (agriculture activities) ಯಲ್ಲಿ ತೊಡಗಿರುವ ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿ ವೇತನ (Education scholarship) ನೀಡಲಾಗುತ್ತಿದ್ದು ಈ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ತಕ್ಷಣ ಅರ್ಜಿ ಸಲ್ಲಿಸಿ ಮತ್ತು ಮುಖ್ಯವಾಗಿ ಆದಾಯ ದಾಖಲಾತಿ ಪ್ರಮಾಣವನ್ನು ಸಲ್ಲಿಸಬೇಕು.

ಯಾಕೆಂದರೆ ಮಧ್ಯಮ ವರ್ಗದ ರೈತ ವರ್ಗ ವಾರ್ಷಿಕ 2.50 ಲಕ್ಷ ಪ್ರಮಾಣ ಹೊಂದಿರಬೇಕು ಎಂದು ಆದಾಯ ತಿದ್ದುಪಡಿ ಮಾಡಲಾಗಿದೆ.

ಇಂತಹ ಮಹಿಳೆಯರ ಖಾತೆಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಜಮಾ! ಚೆಕ್ ಮಾಡಿಕೊಳ್ಳಿ

ರೈತ ವಿದ್ಯಾನಿಧಿ ಮೂಲಕ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ! ಪಡೆಯಲು ಅರ್ಜಿ ಸಲ್ಲಿಸಿ - Kannada News

ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ! (Rita vidyanidi scholarship)

ರೈತ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು, ಯಾವುದೇ ಕಾರಣಕ್ಕೂ ಶಾಲೆಯಿಂದ ದೂರ ಉಳಿಯಬಾರದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ಆರಂಭಿಸಲಾಗಿದೆ. ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 2000 ದಿಂದ 11,000ಗಳ ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅವಕಾಶವಿದೆ.

ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ?

*ಎಂಟರಿಂದ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2000 ವಿದ್ಯಾರ್ಥಿ ವೇತನ
*ಪಿಯುಸಿ ಐಟಿಐ ಡಿಪ್ಲೋಮೋ ಮಾಡುತ್ತಿರುವವರಿಗೆ 2500 ಗಳಿಂದ ರೂ.3,000 ವಿದ್ಯಾರ್ಥಿ ವೇತನ
*ಬಿ ಎ, ಬಿ ಎಸ್ಸಿ, ಬಿಕಾಂ ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 5000 ದಿಂದ 5500 ವಿದ್ಯಾರ್ಥಿ ವೇತನ.
*ಎಲ್ ಎಲ್ ಬಿ, ಬಿ ಫಾರ್ಮ್ ನರ್ಸಿಂಗ್ ಅಧ್ಯಯನಕ್ಕೆ 7,500 ಗಳಿಂದ ರೂ. 8,000ಗಳ ವರೆಗೆ ವಿದ್ಯಾರ್ಥಿ ವೇತನ
*ಎಂಬಿಬಿಎಸ್ ಬಿ ಟೆಕ್ ಹಾಗೂ ಇತರ ಎಲ್ಲಾ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಹುಡುಗರಿಗೆ 10,000 ಹಾಗೂ ಹುಡುಗಿಯರಿಗೆ 11, 000 ವಿದ್ಯಾರ್ಥಿ ವೇತನ.

ರಾಜ್ಯದ ಜನತೆಗೆ ಮತ್ತೆ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್

Education Scholarshipಅರ್ಜಿ ಸಲ್ಲಿಸುವ ವಿಧಾನ! (How to apply)

ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ತಂದೆ ಫ್ರೂಟ್ಸ್ ಐ ಡಿ (FID) ಹೊಂದಿರುವುದು ಕಡ್ಡಾಯ. ಕರ್ನಾಟಕ ರಾಜ್ಯ ಸರ್ಕಾರದ ಎಸ್‌ಎಸ್‌ಪಿ (SSP); ವೆಬ್ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿರಬೇಕು. ಹೀಗೆ ನೋಂದಣಿ ಆಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇದನ್ನೇ ಪರಿಶೀಲಿಸಿ ವಿದ್ಯಾರ್ಥಿ ವೇತನ ನೀಡಲಾಗುವುದು.

ಗೃಹಲಕ್ಷ್ಮಿ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ! ಕಾರಣ ಹಾಗೂ ಪರಿಹಾರ ಇಲ್ಲಿದೆ

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಿರಿ.
ದೂರವಾಣಿ ಸಂಖ್ಯೆ ; 18004273553 ಅಥವಾ 1902

Submit this document to avail scholarship through Raitha Vidyanidhi

Follow us On

FaceBook Google News

Submit this document to avail scholarship through Raitha Vidyanidhi