ಈ ದಾಖಲೆ ಇದ್ರೆ ಆನ್ಲೈನ್ ಮೂಲಕವೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು!
ಆದ್ಯತಾ ಪಡಿತರ ಚೀಟಿ (BPL Ration Card) ಅಥವಾ ಬಿಪಿಎಲ್ ಕಾರ್ಡ್ ಗೆ ನೀವು ಅರ್ಜಿ ಸಲ್ಲಿಸಿದ್ದರೆ ಈ ಸುದ್ದಿ ನಿಮಗಾಗಿ
ನೀವು ಕೂಡ ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿ (BPL Ration Card) ಅಥವಾ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ ಈ ಸುದ್ದಿ ನಿಮಗಾಗಿ, ರಾಜ್ಯ ಸರ್ಕಾರ ಬಿಪಿಎಲ್ ಹಾಗೂ ಎಪಿಎಲ್ (APL Card) ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಮಹತ್ವವಾದ ನಿರ್ಧಾರವನ್ನು ಕೈಗೊಂಡಿದೆ. ಸದ್ಯದಲ್ಲಿಯೇ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಗಲಿದೆ.
ಏಪ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡ್ ವಿತರಣೆ!
ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ. ನೀವು ಯಾವುದೇ ರೀತಿಯ ಪೆನ್ಷನ್ (pension) ಪಡೆದುಕೊಳ್ಳಲು, ಸರ್ಕಾರದಿಂದ ಸಿಗುವ ಉಚಿತ ಆರೋಗ್ಯ ಸೇವೆ ಪಡೆದುಕೊಳ್ಳಲು ಹಾಗೂ ಮತ್ತಿತರ ಕಾರಣಗಳಿಗೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ರೈತರಿಗೆ ಮತ್ತೊಂದು ಗುಡ್ ನ್ಯೂಸ್! ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ
ಈಗಿರುವಾಗ ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲದಿದ್ದರೆ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಾದರೂ ಹೇಗೆ ಅಲ್ವಾ? ಸರ್ಕಾರಕ್ಕೆ ಕಳೆದ ಎರಡು ವರ್ಷಗಳಲ್ಲಿ ಸುಮಾರು 2.95 ಲಕ್ಷ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಂದಾಯವಾಗಿದೆ. ಆದರೆ ಇದುವರೆಗೆ ಈ ಅರ್ಜಿ ಪರಿಶೀಲನೆ ಆಗಲಿ ವಿತರಣೆಯಾಗಲಿ ಆಗಿರಲಿಲ್ಲ.
ಮಾನ್ಯ ಆಹಾರ ಸಚಿವ ಕೆಎಚ್ ಮುನಿಯಪ್ಪ ಪಡಿತರ ಚೀಟಿ ವಿತರಣೆ ಬಗ್ಗೆ ಮಹತ್ವವಾದ ಮಾಹಿತಿಯನ್ನು ಹಂಚಿಕೊಂಡಿದ್ದು ಇದೆ ಮಾರ್ಚ್ 31ರ ಒಳಗೆ ಹೊಸ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಇದು ಮಾಹಿತಿ ನೀಡಿದ್ದಾರೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ!
ಈಗಾಗಲೇ ಸರ್ಕಾರಕ್ಕೆ ಸಂದಾಯ ಆಗಿರುವ ಅರ್ಜಿಗಳನ್ನು ಪರಿಶೀಲನೆ ಮಾಡದೆ ಮತ್ತೆ ಹೊಸ ಪಡಿತರ ಚೀಟಿಗೆ ಅರ್ಜಿ ತೆಗೆದುಕೊಳ್ಳುವುದಿಲ್ಲ ಎಂದು ಈ ಹಿಂದೆಯೇ ಸರ್ಕಾರ ತಿಳಿಸಿತ್ತು. ಇದು ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ನೀಡುವುದರ ಜೊತೆಗೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಹಾಕುವವರೆಗೂ ಕೂಡ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಕೃಷಿ ಜಮೀನು ಹೊಂದಿರೋ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆಯಿರಿ
2.295 ಲಕ್ಷ ಪಡಿತರ ಚೀಟಿ ಅರ್ಜಿಗಳಲ್ಲಿ ಕೇವಲ 57000 ಅರ್ಜಿಗಳ ಪರಿಶೀಲನೆ, ವಿತರಣೆ ಮಾತ್ರ ನಡೆದಿದೆ. ಅದೇ ರೀತಿ ಸುಮಾರು 744 ವೈದ್ಯಕೀಯ ತುರ್ತು ಕಾರಣಕ್ಕಾಗಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗಿದೆ.
ಇದೀಗ ಬಾಕಿ ಇರುವ ಪಡಿತರ ಚೀಟಿ ವಿತರಣೆಗೆ ಸರ್ಕಾರ ಮುಂದಾಗಿದೆ. ಜೊತೆಗೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಕೂಡ ಆನ್ಲೈನ್ ಮೂಲಕವೇ ಅವಕಾಶ ಮಾಡಿಕೊಡಲಾಗುವುದು.
ರೈತ ವಿದ್ಯಾನಿಧಿ ಮೂಲಕ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ! ಪಡೆಯಲು ಅರ್ಜಿ ಸಲ್ಲಿಸಿ
ಎಂತವರು ಅರ್ಜಿ ಸಲ್ಲಿಸಬಹುದು ಗೊತ್ತ?
ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
ನವ ವಿವಾಹಿತ ದಂಪತಿಗಳು ಬೇರೆ ಮನೆಯಲ್ಲಿ ವಾಸ ಮಾಡಿದರೆ ಅಂತವರು ಅರ್ಜಿ ಸಲ್ಲಿಸಬಹುದು. ಅಂದರೆ ಅವರು ಕುಟುಂಬದಿಂದ ಹೊರಗೆ ವಾಸಿಸುವುದಾದರೆ ಬೇರೆ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಇನ್ನು ವ್ಯಕ್ತಿಯ ಅಥವಾ ಕುಟುಂಬದ ಆದಾಯದ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಎನ್ನುವುದನ್ನು ನಿರ್ಧರಿಸಿ ವಿತರಣೆ ಮಾಡಲಾಗುವುದು.
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ವೋಟರ್ ಐಡಿ
ಕುಟುಂಬದ ಪ್ರತಿಯೊಬ್ಬ ಸದಸ್ಯರ ವಯಸ್ಸು
ನಿವಾಸದ ಪ್ರಮಾಣ ಪತ್ರ
ಸ್ವಯಂಘೋಷಿತ ಪ್ರಮಾಣ ಪತ್ರ
ಭಾವಚಿತ್ರ
ಮೊಬೈಲ್ ಸಂಖ್ಯೆ ( ಆಧಾರ್ ಲಿಂಕ್ ಆಗಿರಬೇಕು)
ಇಂತಹ ಮಹಿಳೆಯರ ಖಾತೆಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಜಮಾ! ಚೆಕ್ ಮಾಡಿಕೊಳ್ಳಿ
ಅರ್ಜಿ ಸಲ್ಲಿಸುವುದು ಹೇಗೆ (how to apply)
https://ahara.kar.nic.in/ ಈ ಅಧಿಕೃತ ವೆಬ್ಸೈಟ್ನಲ್ಲಿ ಏಪ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಹಾಗಾಗಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಇಚ್ಚಿಸುವವರು ಈ ಮೇಲಿನ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಏಪ್ರಿಲ್ ಒಂದರ ವರೆಗೆ ಕಾಯಬೇಕು.
If you have this document, you can apply for a ration card online