ಬರೋಬ್ಬರಿ 2.95 ಲಕ್ಷ ಫಲಾನುಭವಿಗಳ ಕೈ ಸೇರಲಿದೆ ಹೊಸ ರೇಷನ್ ಕಾರ್ಡ್!
ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ (BPL card) ಒದಗಿಸಲಾಗುವುದು. ಇನ್ನು ಈ ಬಾರಿ ರೇಷನ್ ಕಾರ್ಡ್ ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಕಾಣಬಹುದು.
2.96 ಲಕ್ಷ ರೇಷನ್ ಕಾರ್ಡ್ (Ration Card) ಅರ್ಜಿಗಳನ್ನು ವಿಲೇವಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಈವರೆಗೆ ನೆನೆಗುದಿಯಲ್ಲಿದ್ದ ರೇಷನ್ ಕಾರ್ಡ್ ಗಳ ವಿತರಣೆ ಸದ್ಯದಲ್ಲಿಯೇ ನಡೆಯಲಿದೆ. ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (K.H Muniyappa) ಈ ಬಗ್ಗೆ ಮಾಹಿತಿ ನೀಡುತ್ತಾರೆ.
6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಹೊಸ ರೂಲ್ಸ್! ತಪ್ಪದೆ ತಿಳಿಯಿರಿ
ಹೊಸ ಕಾರ್ಡ್ ನಲ್ಲಿ ಇರಲಿದೆ ಕೆಲವು ಬದಲಾವಣೆ!
ಸಚಿವರು ತಿಳಿಸಿರುವಂತೆ ಸದ್ಯದಲ್ಲಿಯೇ ಈಗಾಗಲೇ ಸಲ್ಲಿಕೆ ಆಗಿರುವ ರೇಷನ್ ಕಾರ್ಡ್ ಅರ್ಜಿಗಳನ್ನ ನೋಡಿ ಪರಿಶೀಲಿಸಿ ಅವುಗಳ ವಿತರಣೆ ಮಾಡಲಾಗುವುದು.
ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ (BPL card) ಒದಗಿಸಲಾಗುವುದು. ಇನ್ನು ಈ ಬಾರಿ ವಿತರಣೆ ಮಾಡಲಿರುವ ರೇಷನ್ ಕಾರ್ಡ್ ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಕಾಣಬಹುದು.
ರೇಷನ್ ಕಾರ್ಡ್ ಅನ್ನಭಾಗ್ಯದ ಕಾರ್ಡ್ ಎಂದು ಬದಲಾಗುವ ಸಾಧ್ಯತೆ ಇದೆ, ಇನ್ನು ರೇಷನ್ ಕಾರ್ಡ್ ಅನ್ನು ಕೇವಲ ಪಡಿತರ ಚೀಟಿ ಪಡೆದುಕೊಳ್ಳಲು ಮಾತ್ರವಲ್ಲದೆ ನೀವು ವಿಮಾನ ನಿಲ್ದಾಣ, ಬ್ಯಾಂಕಿಂಗ್ ವ್ಯವಹಾರ, ಆದಾಯ ತೆರಿಗೆ ಪಾವತಿ ಹೀಗೆ ಪ್ರತಿಯೊಂದು ಕೂಡ ಗುರುತಿನ ಚೀಟಿ ಆಗಿ ಬಳಸಿಕೊಳ್ಳಬಹುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಈ ದಾಖಲೆ ಇದ್ರೆ ಆನ್ಲೈನ್ ಮೂಲಕವೇ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು!
ಕಡೆಗೂ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲು ಮುಂದಾದ ಸರ್ಕಾರ!
ರೇಷನ್ ಕಾರ್ಡ್ ವಿತರಣೆಗೆ ಸಂಬಂಧಪಟ್ಟಂತೆ ಹೊಸ ಅಪ್ಡೇಟ್ ಸಿಕ್ಕಿದೆ. ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ರೇಷನ್ ಕಾರ್ಡ್ ಪಡೆದುಕೊಳ್ಳಲು ಜನ ಮುಂದಾಗಿದ್ದಾರೆ. ತಾವು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದೇವೆ.
ಅದನ್ನು ನಮಗೆ ತಲುಪಿಸಿ ಎಂದು ರಾಜ್ಯದ ಜನತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಅದು ಅಲ್ಲದೆ ಇತ್ತೀಚಿನ ಕಲಾಪದಲ್ಲಿ ವಿಪಕ್ಷ ನಾಯಕರು ಕೂಡ ಪಡಿತರ ಚೀಟಿ ವಿತರಣಾ ಬಗ್ಗೆ ಪ್ರಶ್ನೆ ಮಾಡಿದರು ರಾಜ್ಯ ಸರ್ಕಾರ ಉತ್ತರ ನೀಡಿದ್ದು ಮಾರ್ಚ್ 31ರ ಒಳಗೆ ಪಡಿತರ ಚೀಟಿ ಅರ್ಜಿ ಪರಿಶೀಲನೆ ನಡೆಸಿ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ರೈತರಿಗೆ ಮತ್ತೊಂದು ಗುಡ್ ನ್ಯೂಸ್! ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ
ಇದರ ಜೊತೆಗೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಕೂಡ ಏಪ್ರಿಲ್ ಒಂದರಿಂದ ಅವಕಾಶ ಮಾಡಿಕೊಡಲಾಗುವುದು. ಇಲ್ಲಿ ಫಲಾನುಭವಿಗಳಿಗೆ ತಕ್ಕಂತೆ ಎಪಿಎಲ್, ಬಿಪಿಎಲ್, ಎ ಎ ವೈ ಕಾರ್ಡು ವಿತರಣೆ ಮಾಡಲಾಗುವುದು.
ಇಷ್ಟು ದಿನ ಜನರು ಪಡಿತರ ಚೀಟಿಯ ಹೊಸ ಅಪ್ಡೇಟ್ ಗಾಗಿ ಕಾದು ಕುಳಿತಿದ್ದರು. ಇನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿ ಕೈ ಸೇರಲಿದೆ.
ಕೃಷಿ ಜಮೀನು ಹೊಂದಿರೋ ರೈತರಿಗೆ ಸಿಗಲಿದೆ 10,000 ರೂಪಾಯಿ! ಈ ರೀತಿ ಪಡೆಯಿರಿ
The new ration card will reach 2.95 lakh beneficiaries