ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್; ಫೆಬ್ರವರಿ ತಿಂಗಳ ಹಣ ಪಡೆಯೋಕೆ ಹೀಗೆ ಮಾಡಿ

ಜುಲೈ ತಿಂಗಳಿನಿಂದ ಅನ್ನಭಾಗ್ಯ ಯೋಜನೆ (Annabhagya scheme) ಯಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಖಾತೆಗೆ (Bank Account) ಹಣವನ್ನು ವರ್ಗಾವಣೆ (DBT) ಮಾಡಲಾಗುತ್ತಿದೆ

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರ (State government) ಕಳೆದ ಜುಲೈ ತಿಂಗಳಿನಿಂದ ಅನ್ನಭಾಗ್ಯ ಯೋಜನೆ (Annabhagya scheme) ಯಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಖಾತೆಗೆ (Bank Account) ಹಣವನ್ನು ವರ್ಗಾವಣೆ (DBT) ಮಾಡುತ್ತಾ ಬಂದಿದೆ.

ಕಳೆದ ಆರು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಾಕಷ್ಟು ಜನ ಐದು ಕೆಜಿ ಅಕ್ಕಿಯ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಸರ್ಕಾರದಿಂದ ತಮಗೆ ಹಣದ ಬದಲು ಅಕ್ಕಿಯೇ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸಾಕಷ್ಟು ಗೃಹಿಣಿಯರು ಕೇಳಿಕೊಂಡಿದ್ದಾರೆ.

Do this if Annabhagya Yojana money not reached your Bank account yet

ಗೃಹಲಕ್ಷ್ಮಿ ಯೋಜನೆಗಿಂತ ಹೆಚ್ಚು ಬೆನಿಫಿಟ್! ಕೇಂದ್ರದಿಂದ ಹೊಸ ಯೋಜನೆ ಜಾರಿ

ರಾಜ್ಯ ಸರ್ಕಾರಕ್ಕೆ ಪ್ರಣಾಳಿಕೆಯಲ್ಲಿ ಹೇಳಿರುವಂತೆ 10 ಕೆಜಿ ಉಚಿತ ಅಕ್ಕಿಯನ್ನು ಫಲಾನುಭವಿಗಳಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದಿಂದ 5 ಕೆಜಿ ಉಚಿತ ಅಕ್ಕಿ ಸಿಗುತ್ತಿದೆ ಆದರೆ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿ ಒದಗಿಸಲು ಸಾಧ್ಯ ಆಗುತ್ತಿಲ್ಲ ಅಷ್ಟು ದೊಡ್ಡ ಮೊತ್ತದ ಅಕ್ಕಿ ರಾಜ್ಯ ಸರ್ಕಾರದ ದಾಸ್ತಾನಿನಲ್ಲಿ ಇಲ್ಲದೆ ಇರುವುದರಿಂದ ಪ್ರತಿ ಕೆಜಿಗೆ 34 ರೂಪಾಯಿಗಳಂತೆ, ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ 170ಗಳನ್ನು ಪ್ರತಿ ತಿಂಗಳು ಜಮಾ ಮಾಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯಲಿ ಮೂಡಿದೆ ಸಮಸ್ಯೆ!

ಕೇಂದ್ರ ಸರ್ಕಾರ ದೇಶದಲ್ಲಿ ವಾಸಿಸುವ ಬಡವರಿಗಾಗಿ ಅಂತ್ಯೋದಯ ಕಾರ್ಡ್ (antyodaya card) ಹಾಗೂ ಬಿಪಿಎಲ್ ಕಾರ್ಡ್ (BPL card) ವಿತರಣೆ ಮಾಡಿದೆ. ಅದೇ ರೀತಿ ಎಪಿಎಲ್ ಕಾರ್ಡ್ (APL card) ಕೂಡ ನೀಡಲಾಗಿದ್ದು, ಇದಕ್ಕೆ ಸಾಕಷ್ಟು ಮಿತಿ ವಿಧಿಸಲಾಗಿದೆ. ಎ ಎ ವೈ ಹಾಗೂ ಬಿಪಿಎಲ್ ಕಾರ್ಡ್ ನಿಂದ ಸಿಗುವ ಎಲ್ಲಾ ಸೌಲಭ್ಯಗಳು, ಎಪಿಎಲ್ ಕಾರ್ಡ್ ದಾರರಿಗೆ ಸಿಗುವುದಿಲ್ಲ.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ AAY ಇರುವವರಿಗೆ 35 ಕೆಜಿ ಅಕ್ಕಿ, BPL ಅವರಿಗೆ 5 ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯ ಹಣ APL ಕಾಡು ಹೊಂದಿರುವವರಿಗೆ ಮಿತಿ ಆಧಾರದ ಮೇಲೆ ಐದು ಕೆಜಿ ಅಕ್ಕಿ ಒದಗಿಸಲಾಗುತ್ತಿದೆ.

ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲು ರಾಜ್ಯ ಸರ್ಕಾರ ಕಳೆದ ಆರು ತಿಂಗಳುಗಳಿಂದ ಹಣವನ್ನು ಮನೆಯ ಯಜಮಾನನ ಖಾತೆಗೆ ಡಿ ಬಿ ಟಿ ಮಾಡುತ್ತಿದೆ. ಇನ್ನು ಅನ್ನಭಾಗ್ಯ ಯೋಜನೆಗೆ ಸಂಬಂಧಪಟ್ಟ ಹಾಗೆ ವಿಪಕ್ಷ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಇಂತಹ ಮಹಿಳೆಯರ ಖಾತೆಗೆ ಜಮಾ ಆಯ್ತು ಗೃಹಲಕ್ಷ್ಮಿ ಪೆಂಡಿಂಗ್ ಹಣ! ಚೆಕ್ ಮಾಡಿ

Annabhagya Schemeಅನ್ನಭಾಗ್ಯ ಯೋಜನೆ ಆರಂಭವಾಗಿ ಆರು ತಿಂಗಳುಗಳೆ ಕಳೆದಿವೆ. ಇಲ್ಲಿಯವರೆಗೂ ಜನರಿಗೆ ಉಚಿತ ಅಕ್ಕಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೇವಲ ಬಾಯಿ ಮಾತಿನಲ್ಲಿ ಹೇಳಿದ್ದು ಅಷ್ಟೇ, ಅದನ್ನ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ ಎಂದು ವಿಪಕ್ಷ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.

ಇದರ ಜೊತೆಯಲ್ಲಿ ಕಳೆದ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹಲವರಿಗೆ ಅನ್ನ ಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿಲ್ಲ. ರಾಜ್ಯ ಸರ್ಕಾರ ಫೆಬ್ರವರಿ ತಿಂಗಳಿನಲ್ಲಿ ಪ್ರತಿಯೊಬ್ಬರ ಖಾತೆಗೂ ಪೆಂಡಿಂಗ್ ಇರುವ ಹಣವನ್ನು ಕೂಡ ಜಮಾ ಮಾಡುವುದಾಗಿ ತಿಳಿಸಿದೆ. ಆದರೆ ಈ ರೀತಿ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಈ ಪ್ರಮುಖ ಕೆಲಸವನ್ನು ಮಾಡಬೇಕು.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಸಿಹಿ ಸುದ್ದಿ! ಇದೇ ತಿಂಗಳು ಕಾರ್ಡ್ ವಿತರಣೆ

1. ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮತ್ತು ಎನ್ ಪಿ ಸಿ ಐ ಮ್ಯಾಪಿಂಗ್ ಆಗಿರಬೇಕು.
2. ಮನೆಯ ಸದಸ್ಯರ ಎಲ್ಲರ ಖಾತೆಗೂ ಕೆವೈಸಿ ಕಡ್ಡಾಯ.
3. ಬಿಪಿಎಲ್ ಕಾರ್ಡ್ ಹೊಂದಿದ್ದು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅಂತವರಿಗೆ ಅನ್ನ ಭಾಗ್ಯ ಯೋಜನೆ ಪ್ರಯೋಜನ ಸಿಗುವುದಿಲ್ಲ.
4. 2016ರ ಮಾನದಂಡದ ಅಡಿಯಲ್ಲಿ ಬಾರದೆ ಇರುವವರು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರಲ್ಲ.

ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕಾಗಿ ನ್ಯಾಯಬೆಲೆ ಅಂಗಡಿ ಅಥವಾ ಬ್ಯಾಂಕ್ ಅನ್ನು ಸಂಪರ್ಕಿಸಬಹುದು.

Annabhagya Yojana Big Update, Do this to get for the month of February