ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಸಿಹಿ ಸುದ್ದಿ! ಇದೇ ತಿಂಗಳು ಕಾರ್ಡ್ ವಿತರಣೆ

ಹೊಸ ಪಡಿತರ ಚೀಟಿ (new ration card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಅಪ್ಡೇಟ್

ಕಳೆದ ಎರಡುವರೆ ವರ್ಷಗಳಿಂದ ಹೊಸ ಪಡಿತರ ಚೀಟಿ (new ration card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಯಾವಾಗ ತಮ್ಮ ಕೈ ಸೇರುತ್ತದೆ ಎಂದು ಕಾದು ಕುಳಿತು ಸುಸ್ತಾಗಿದ್ದ ಮಹಿಳೆಯರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಇದೇ ಗುರುವಾರ ವಿಧಾನಸಭೆಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಕೆಎಚ್ ಮುನಿಯಪ್ಪ (food minister KH muniyappa) ಸದ್ಯದಲ್ಲಿಯೇ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಜನರು ಇಷ್ಟು ದಿನ ಕಾದು ಕುಳಿತಿದ್ದಕ್ಕೆ ಈಗ ಹೊಸ ಪಡಿತರ ಚೀಟಿ ಪಡೆದುಕೊಳ್ಳುವ ಸಮಯ ಬಂದಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಸಿಹಿ ಸುದ್ದಿ! ಇದೇ ತಿಂಗಳು ಕಾರ್ಡ್ ವಿತರಣೆ - Kannada News

ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಪಡೆಯೋಕೆ ಹೀಗೆ ಮಾಡಿ

ಹೊಸ ಬಿಪಿಎಲ್ ಕಾರ್ಡ್ ವಿತರಣೆ! (New BPL card distribution)

ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಂದ ಇದೇ ಬರುವ ಏಪ್ರಿಲ್ ಒಂದರಿಂದ ಹೊಸ ಕಾರ್ಡ್ ವಿತರಣೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. ವಿಪಕ್ಷ ನಾಯಕರು ಕೇಳಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಸಚಿವರು, ಮಾರ್ಚ್ 31ರವರೆಗೆ ಎಲ್ಲಾ ಬಿಪಿಎಲ್ ಮತ್ತು ಎಪಿಎಲ್ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕಾರ್ಡ್ ಅನ್ನು ಏಪ್ರಿಲ್ ಒಂದರಿಂದ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ 2.95 ಲಕ್ಷ ಪಡಿತರ ಚೀಟಿ ಅರ್ಜಿಗಳು ಸರ್ಕಾರಕ್ಕೆ ಸೇರಿದ್ದು ಇವುಗಳನ್ನು ಸೆಗರಿಗೆಟ್ ಮಾಡುವುದು ಬಹಳ ಮುಖ್ಯ. ಯಾಕಂದ್ರೆ ಸಾಕಷ್ಟು ಅನರ್ಹ ಅರ್ಜಿಗಳು ಕೂಡ ಸರ್ಕಾರಕ್ಕೆ ಸಂದಾಯ ಆಗಿದೆ. ಸರ್ಕಾರದ ಮಾನದಂಡದ ಅಡಿಯಲ್ಲಿ ಬಾರದೆ ಇರುವ ಅರ್ಜಿಗಳನ್ನು ಸರ್ಕಾರ ತಳ್ಳಿ ಹಾಕಲಿದೆ. ಅಂದರೆ ಅಂಥವರಿಗೆ ಅರ್ಜಿ ಸಲ್ಲಿಸಿದರು ಕೂಡ ಪಡಿತರ ಚೀಟಿ ವಿತರಣೆ ಮಾಡಲಾಗುವುದಿಲ್ಲ.

ಬಿಪಿಎಲ್ ಕಾರ್ಡ್ ಇದ್ರೆ 5 ಲಕ್ಷ, ಎಪಿಎಲ್ ಕಾರ್ಡ್ ಇದ್ರೆ 2 ಲಕ್ಷ ಬೆನಿಫಿಟ್; ಹೊಸ ಯೋಜನೆ!

BPL Ration Cardಹೊಸ ಅರ್ಜಿ ಸಲ್ಲಿಸುವುದಕ್ಕೂ ಅವಕಾಶ!

ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಸಾಕಷ್ಟು ಜನ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಅಂದ್ರೆ ಎಲ್ಲ ಗ್ಯಾರೆಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಕ್ಕೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ.

ಈ ಹಿನ್ನೆಲೆಯಲ್ಲಿ ಹೊಸ ಅರ್ಜಿ ಸಲ್ಲಿಸಲು ಕೂಡ ಜನರು ಪ್ರಯತ್ನಿಸುತ್ತಿದ್ದು ಯಾವುದೇ ಸೇವಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪೋರ್ಟಲ್ ಓಪನ್ ಆಗುತ್ತಿರಲಿಲ್ಲ. ರಾಜ್ಯ ಸರ್ಕಾರ ಹಳೆ ಅರ್ಜಿಗಳ ವಿಲೇವಾರಿ ಆಗುವವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿತ್ತು.

ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್!

ಕಾಯುವ ಕುಟುಂಬಕ್ಕೆ ಹೆಚ್ಚಿನ ಪ್ರಯೋಜನ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಹಳೆಯ ಅರ್ಜಿ ವಿಲೇವಾರಿ ಜೊತೆಗೆ ಹೊಸ ಅರ್ಜಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಆರೋಗ್ಯ ತುರ್ತು (medical emergency) ಪರಿಸ್ಥಿತಿಯ ಸಂದರ್ಭದಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್ ಮುಖ್ಯವಾಗಿದ್ದರಿಂದ ಅಂಥವರಿಗೆ ತಕ್ಷಣ ಕಾರ್ಡ್ ವಿತರಣೆ ಮಾಡಲು ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ.

ಈ ಸದ್ಯದಲ್ಲಿ ಲಕ್ಷಾಂತರ ಜನ ಹೊಸ ಪಡಿತರ ಚೀಟಿ ಪಡೆದುಕೊಂಡು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಇನ್ನಷ್ಟು ಜನರು ಪಡೆದುಕೊಳ್ಳುವ ನಿರೀಕ್ಷೆ ಇದೆ.

ಬರೋಬ್ಬರಿ 2.95 ಲಕ್ಷ ಫಲಾನುಭವಿಗಳ ಕೈ ಸೇರಲಿದೆ ಹೊಸ ರೇಷನ್ ಕಾರ್ಡ್!

Good news for those who were waiting for the new ration card

Follow us On

FaceBook Google News

Good news for those who were waiting for the new ration card