ಗೃಹಲಕ್ಷ್ಮಿ ಯೋಜನೆಗಿಂತ ಹೆಚ್ಚು ಬೆನಿಫಿಟ್! ಕೇಂದ್ರದಿಂದ ಹೊಸ ಯೋಜನೆ ಜಾರಿ

Loan Scheme : ಸಾಮಾನ್ಯವಾಗಿ ಪುರುಷರು ಹೊರಗೆ ಹೋಗಿ ದುಡಿಯುತ್ತಾರೆ, ಹಣ ಸಂಪಾದನೆ ಮಾಡುತ್ತಾರೆ. ಹಾಗಂದ ಮಾತ್ರಕ್ಕೆ ಮಹಿಳೆಯರು ಈಗ ಕೇವಲ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಇರುವುದಿಲ್ಲ.
ಮಹಿಳೆಯರು ಕೂಡ ಹೊರಗಡೆ ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ ಅಷ್ಟೇ ಅಲ್ಲದೆ ಇನ್ನು ಸಾಕಷ್ಟು ಮಹಿಳೆಯರು ಸ್ವಂತ ಉದ್ಯಮ (women’s started own business) ವನ್ನು ಕೂಡ ಆರಂಭಿಸಿದ್ದಾರೆ.
ಹೀಗೆ ಸ್ವಂತ ಉದ್ಯಮ ಮಾಡಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿ (financial status) ಯನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಬೆಂಗಾವಲಾಗಿದೆ.
ಇನ್ಮುಂದೆ ಈ 10 ಲಕ್ಷ ಆದಾಯಕ್ಕೂ ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ! ಇಲ್ಲಿದೆ ಮಾಹಿತಿ
ಉದ್ಯೋಗಿನಿ ಯೋಜನೆ (Udyogini scheme)
ಮೊದಲು ಕರ್ನಾಟಕ ಸರ್ಕಾರದಿಂದ ಈ ಯೋಜನೆಯ ಬಗ್ಗೆ ಪ್ರಸ್ತಾವನೆ ಹೊರಡಿಸಲಾಗಿತ್ತು. ನಂತರ ಕೇಂದ್ರ ಸರ್ಕಾರವೇ ಮಹಿಳೆಯರ ಸಬಲೀಕರಣಕ್ಕಾಗಿ ಉದ್ಯೋಗಿನಿ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಸ್ವಂತ ಉದ್ಯಮ ಮಾಡಲು ಮೂರು ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಸಾಲವನ್ನು ಪಡೆದುಕೊಳ್ಳಬಹುದು. ಸುಮಾರು 88 ಸಣ್ಣ ವ್ಯಾಪಾರ ಮಾಡಲು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ (Loan) ಸಿಗುತ್ತದೆ.
ಯಾರು ಅರ್ಜಿ ಸಲ್ಲಿಸಲು ಅರ್ಹರು? (Who can apply)
18 ರಿಂದ 50 ವರ್ಷ ವಯಸ್ಸಿನ ಒಳಗಿರಬೇಕು.
ಅಂಗವಿಕಲತೆ ಹೊಂದಿದ ಮಹಿಳೆಯರು, ವಿಧವೆಯರು ಅಥವಾ ಸಮಾಜದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಟೈಲರಿಂಗ್, ಪಾರ್ಲರ್, ಉಪ್ಪಿನಕಾಯಿ ಬಿಸಿನೆಸ್, ಗುಡಿ ಕೈಗಾರಿಕೆಗಳು, ಸಣ್ಣಪುಟ್ಟ ಕಿರಾಣಿ ಅಂಗಡಿಗಳು, ಫೋಟೋ ಸ್ಟುಡಿಯೋ ಹೀಗೆ 88ಕ್ಕೂ ಹೆಚ್ಚಿನ ವ್ಯಾಪಾರಗಳನ್ನು ಮಾಡಲು ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುತ್ತದೆ.
ನಿಮ್ಮತ್ರ ಕೇವಲ ಆಧಾರ್ ಕಾರ್ಡ್ ಇದ್ರೆ, ಸರ್ಕಾರದಿಂದಲೇ ಸಿಗುತ್ತೆ 50,000 ರೂಪಾಯಿ
ಯಾರಿಗೆ ಎಷ್ಟು ಸಾಲ? Loan
ಪರಿಶಿಷ್ಟ ಜಾತಿ (scheduled cast) ಹಾಗೂ ಪರಿಶಿಷ್ಟ ಪಂಗಡ (schedule tribes) ದವರಿಗ, ಮೂರು ಲಕ್ಷ ರೂಪಾಯಿ ಸಾಲ ಕೊಡಲಾಗುತ್ತದೆ. ಇನ್ನು ಇಂತವರಿಗೆ ಸರ್ಕಾರದಿಂದ 50% ಬಡ್ಡಿ ಅಥವಾ ಗರಿಷ್ಠ 1,50,000 ಸಬ್ಸಿಡಿ ಸಿಗುತ್ತದೆ.
ಇನ್ನು ವಿಧವೆಯರು, ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಿದರೆ 30% ಅಥವಾ 90 ಸಾವಿರ ರೂಪಾಯಿಗಳ ಸಬ್ಸಿಡಿ ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ. ಆದರೆ ಸಾಮಾನ್ಯ ಮಹಿಳೆಯರು 10ರಿಂದ 12% ಬಡ್ಡಿ ಪಾವತಿಸಬೇಕು.
ನಿಮ್ಮ 3 ಲಕ್ಷಕ್ಕೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು

ಮಹಿಳೆಯರಿಗೆ ಯಾವುದೇ ಗ್ಯಾರಂಟಿಯನ್ನು ಕೇಳದೆ ಉದ್ಯೋಗಿನಿ ಯೋಜನೆಯಡಿಯಲ್ಲಿ ಸ್ವಂತ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಉದ್ಯೋಗದ ಬಗ್ಗೆ ಮಾಹಿತಿ
ಅಂಗವಿಕಲರು ಅಥವಾ ವಿಧವೆಯರಾಗಿದ್ದರೆ ಅದಕ್ಕೆ ಸಂಬಂಧಪಟ್ಟ ಸರ್ಕಾರದಿಂದ ಪಡೆದುಕೊಂಡ ಪ್ರಮಾಣ ಪತ್ರ
ಶಾಲಾ ವರ್ಗಾವಣೆ ಪ್ರಮಾಣ ಪತ್ರ
ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್
ಪ್ರತಿದಿನ ಕೇವಲ 87 ರೂಪಾಯಿ ಉಳಿತಾಯ ಮಾಡಿದ್ರೆ 11 ಲಕ್ಷ ನಿಮ್ಮದಾಗುತ್ತೆ!
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಉದ್ಯೋಗಿನಿ ಯೋಜನೆಯಡಿಯಲ್ಲಿ ಮಹಿಳೆಯರು ಸಾಲ ಸೌಲಭ್ಯ ಪಡೆದುಕೊಳ್ಳಲು ಹತ್ತಿರದ ಶಿಶು ಅಭಿವೃದ್ಧಿ ಇಲಾಖೆಗೆ ಹೋಗಿ ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ. ಅರ್ಜಿ ಫಾರಂ ಪಡೆದುಕೊಂಡು ಭರ್ತಿ ಮಾಡಿ. ಅಗತ್ಯವಿರುವ ದಾಖಲೆಗಳನ್ನು ಕೊಟ್ಟು ಸಾಲ ಸೌಲಭ್ಯ ಪಡೆಯಬಹುದು.
ಇನ್ನು ವಾಣಿಜ್ಯ ಬ್ಯಾಂಕುಗಳು ಹಣಕಾಸು ಸಂಸ್ಥೆಗಳು ಕೂಡ ಉದ್ಯೋಗಿನಿ ಯೋಜನೆಯ ಸಾಲ ನೀಡುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದಲೂ ಅರ್ಜಿ ಫಾರ್ಮ್ ಪಡೆದುಕೊಂಡು ಸಾಲಕ್ಕಾಗಿ ಅರ್ಜಿ ಹಾಕಬಹುದು.
ಒಟ್ಟಿನಲ್ಲಿ ಮಹಿಳೆಯರು ಸ್ವಾವಲಂಬನೆಯಿಂದ ಹಾಗೂ ಆರ್ಥಿಕವಾಗಿ ಸಬಲತೆಯಿಂದ ಜೀವನ ನಡೆಸಲು ಸಾಧ್ಯವಾಗುವಂತೆ ಉದ್ಯೋಗಿನಿ ಯೋಜನೆ ಜಾರಿಗೆ ಬಂದಿದ್ದು ಮಹಿಳೆಯರ ಪಾಲಿಗೆ ವರದಾನವಾಗಿದೆ.
More benefits than Gruha Lakshmi Yojana, Implementation of a new scheme by the Centre



