ನಿಮ್ಮ 3 ಲಕ್ಷಕ್ಕೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು
ನೀವು ಆರಂಭದಿಂದಲೇ ಹೂಡಿಕೆ (Investment) ಮಾಡಿದರೆ ಮುಂದೊಂದು ದಿನ ಒಂದೇ ಒಂದು ರೂಪಾಯಿ ದುಡಿಮೆಯನ್ನು ಮಾಡದೆ ಪ್ರತಿ ತಿಂಗಳು ಸುಲಭವಾಗಿ ನೀವು ಠೇವಣಿ (deposit) ಇಟ್ಟಿರುವ ಹಣದಿಂದ 30,000ಗಳ ವರೆಗೆ ಬಡ್ಡಿಯನ್ನು ಹಿಂಪಡೆಯಬಹುದು.
ಇಂದಿನ ಕಾಲದಲ್ಲಿ ಹೂಡಿಕೆ ಮಾಡಿಲ್ಲ ಅಂದ್ರೆ ಅಥವಾ ಹಣ ಉಳಿತಾಯ (money savings) ಮಾಡಿಲ್ಲ ಅಂದ್ರೆ ಮೂರ್ಖರು ಎನಿಸಿಕೊಳ್ಳುತ್ತೇವೆ. ಯಾಕಂದ್ರೆ ನಮ್ಮ ಭವಿಷ್ಯ ನಮ್ಮ ಕಣ್ಣ ಮುಂದೆಯೇ ಇದೆ. ನಾವು ಈಗ ಆರ್ಥಿಕವಾಗಿ ಕಷ್ಟಪಡುತ್ತಿದ್ದರೆ ಮುಂದಿನ ದಿನವೂ ಕೂಡ ಹೀಗೆ ಆಗಬಾರದು ಎನ್ನುವ ಕಾರಣಕ್ಕೆ ಚೆನ್ನಾಗಿ ದುಡಿದು ದುಡಿದ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡುವುದು ಬಹಳ ಮುಖ್ಯ.

ಪ್ರತಿದಿನ ಕೇವಲ 87 ರೂಪಾಯಿ ಉಳಿತಾಯ ಮಾಡಿದ್ರೆ 11 ಲಕ್ಷ ನಿಮ್ಮದಾಗುತ್ತೆ!
ಕಡಿಮೆ ಆದಾಯ ಬರುವವರು, ಸ್ವಲ್ಪ ತಮ್ಮ ಖರ್ಚನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಹಣ ಉಳಿತಾಯ ಮಾಡುವುದು ಒಳ್ಳೆಯದು. ಅಯ್ಯೋ ನಮಗೆ ಅಷ್ಟು ಹೂಡಿಕೆ ಮಾಡಲು ಆದಾಯವೇ ಇಲ್ಲ ಎಂದು ಅಂದುಕೊಂಡು ಹೂಡಿಕೆ ಮಾಡದೆ ಇದ್ರೆ ನಿಜಕ್ಕೂ ಅದು ಮೂರ್ಖತನವೇ ಆಗುತ್ತದೆ. ಯಾಕಂದ್ರೆ ಯಾರು ಸುಖ ಸುಮ್ಮನೆ ನಮಗೆ ಹಣವನ್ನ ಕೊಡುವುದಿಲ್ಲ. ನಮಗೆ ಬೇಕಾಗಿರುವ ಹಣವನ್ನು ನಾವೇ ಸಂಪಾದಿಸಿಕೊಳ್ಳಬೇಕು.
ಹೂಡಿಕೆ ಮಾಡಬೇಕು ಎಂದು ತಕ್ಷಣ ನಿಮ್ಮ ಬಳಿ ಲಕ್ಷಾಂತರ ರೂಪಾಯಿಗಳ ಹಣವೇ ಇರಬೇಕು ಎಂದೇನು ಇಲ್ಲ. ಎಷ್ಟು ಸಣ್ಣ ಮೊತ್ತದ ಹಣ ಇದ್ದರೂ ಕೂಡ ಅದನ್ನು ಸೇವ್ ಮಾಡುವುದು ಬಹಳ ಮುಖ್ಯ. ನಮ್ಮ ಹೂಡಿಕೆ ಮತ್ತು ಉಳಿತಾಯ ಹಣವನ್ನು ಕೊಡುವಂತಹ ಮರ ಆಗಿರುತ್ತೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಸುರಕ್ಷಿತ ಹೂಡಿಕೆಯನ್ನು ಎಲ್ಲಿ ಮಾಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.
ಇಂತಹ ಮಹಿಳೆಯರು ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ 2.67 ಲಕ್ಷ! ಬಂಪರ್ ಯೋಜನೆ
ಮುಚುವಲ್ ಫಂಡ್ಗಳಲ್ಲಿ ಹೂಡಿಕೆ! (Mutual fund investment)
ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್ (Mutual fund) ಎನ್ನುವುದು ಬಹಳ ಪ್ರಚಲಿತದಲ್ಲಿ ಇದೆ. ಹಾಗೂ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಯಾಕಂದ್ರೆ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ರೆ 15 ರಿಂದ 20%, ವರೆಗೆ ಬಡ್ಡಿ ಪಡೆದುಕೊಳ್ಳಲು ಸಾಧ್ಯವಿದೆ. ಹಾಗಾಗಿ ನೀವು ದೀರ್ಘ ಕಾಲಕ್ಕೆ ಹೂಡಿಕೆ ಮಾಡಿದರೆ, ನೀವು ನಿಮ್ಮ ಕೆಲಸದಿಂದ ನಿವೃತ್ತಿಯನ್ನು ಪಡೆದ ನಂತರ ಕುಳಿತಲ್ಲಿಯೇ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.
ಮ್ಯೂಚುವಲ್ ಫಂಡ್ ನಲ್ಲಿ 3 ಲಕ್ಷ ರೂಪಾಯಿಗಳ ಹೂಡಿಕೆ!
ನೀವು ನಿಮ್ಮ 25ನೇ ವರ್ಷದಿಂದ ಹೂಡಿಕೆ ಮಾಡಲು ಆರಂಭಿಸಿದ್ರೆ ಮುಂದಿನ 25 ವರ್ಷಗಳಲ್ಲಿ ನಿಮ್ಮ ಕೈಯಲ್ಲಿ ಬಹಳ ದೊಡ್ಡ ಮೊತ್ತದ ಹಣ ಸಂಗ್ರಹವಾಗಲು ಸಾಧ್ಯವಿದೆ.
ನೀವು ಪ್ರತಿ ತಿಂಗಳು 30,000 ಗಳನ್ನು ಪಡೆದುಕೊಳ್ಳಲು 20 ವರ್ಷಗಳವರೆಗೆ ನಿರಂತರವಾಗಿ ಹೂಡಿಕೆ ಮಾಡಬೇಕು. ಅಂದರೆ ನೀವು ಹೂಡಿಕೆ ಪ್ಲಾನ್ (investment plan) ಮಾಡಬೇಕು ಈಗಂತೂ ನಿಜವಾಗಲು ಫಂಡ್ ನಲ್ಲಿ 12 ರಿಂದ 15% ಅಷ್ಟೇ ಯಾಕೆ ಇನ್ನು ಕೆಲವು ಹೂಡಿಕೆ ಪ್ಲಾನ್ ನಲ್ಲಿ 20% ವರೆಗೂ ವಾರ್ಷಿಕ ಲಾಭ ಪಡೆಯಬಹುದಾಗಿದೆ.
ಸ್ವಂತ ಬಿಸಿನೆಸ್ ಮಾಡೋರಿಗೆ ಸಿಗಲಿದೆ 3 ಲಕ್ಷ! ಬಡ್ಡಿಯನ್ನು ಕೂಡ ಸರ್ಕಾರವೇ ಕಟ್ಟುತ್ತೆ
ಒಂದು ಲೆಕ್ಕಾಚಾರದ ಪ್ರಕಾರ ನೋಡುವುದಾದರೆ 25ನೇ ವರ್ಷದ ವ್ಯಕ್ತಿ 25 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಆತನ ಬಳಿ ಸಂಗ್ರಹವಾಗುವ ಹಣ 49 ಲಕ್ಷ ರೂಪಾಯಿಗಳು. ಸರಾಸರಿ 15% ನಷ್ಟು ವಾರ್ಷಿಕ ಬಡ್ಡಿ ಪಡೆಯುತ್ತೀರಿ ಎಂದಾದರು. ವರ್ಷಕ್ಕೆ 3 ಲಕ್ಷ 72,000ಗಳನ್ನು ಹಿಂಪಡೆಯಬಹುದು. ಅಂದರೆ ಪ್ರತಿ ತಿಂಗಳು 30 ಸಾವಿರ ರೂಪಾಯಿಗಳ ಬಡ್ಡಿಯನ್ನು ನೀವು ಗಳಿಸಬಹುದು.
ಮಾರುಕಟ್ಟೆಯ ಅಪಾಯಗಳನ್ನು ಹೊರತುಪಡಿಸಿ ಮ್ಯೂಚುವಲ್ ಫಂಡ್ ಹೂಡಿಕೆ ಉತ್ತಮ ಲಾಭವನ್ನು ಕೊಡುತ್ತದೆ. ಹಾಗಾಗಿ ನೀವು ಲಾಭ ನಷ್ಟಗಳ ಲೆಕ್ಕಾಚಾರ ಹಾಕಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಆರಂಭಿಸಿ.
This is a bumper scheme where you get 30 thousand interest every month on your 3 lakh