Business News

ಸ್ವಂತ ಬಿಸಿನೆಸ್ ಮಾಡೋರಿಗೆ ಸಿಗಲಿದೆ 3 ಲಕ್ಷ! ಬಡ್ಡಿಯನ್ನು ಕೂಡ ಸರ್ಕಾರವೇ ಕಟ್ಟುತ್ತೆ

ದೇಶದಲ್ಲಿ ಸ್ವಾಲಂಬನೆಯಿಂದ ಜೀವನ ನಡೆಸುವ, ಸ್ವತಂತ್ರವಾಗಿ ಬದುಕುವ ಜನರನ್ನು ಉತ್ತೇಜಿಸುವ ಹಾಗೂ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದು. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಸ್ವಂತ ಉದ್ಯಮ ಮಾಡುವುದಕ್ಕೆ ಅತ್ಯುತ್ತಮ ನೆರವು ನೀಡುವ ಯೋಜನೆಗಳು ಸೇರಿವೆ.

ಇದೀಗ ಸ್ವಂತ ಉದ್ಯಮ ಮಾಡುವಂತವರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan facility) ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ, ಅದುವೇ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ.

2 lakh deposit for such, another important scheme of the Centre

ಹಸು, ಕುರಿ, ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಿಡುಗಡೆ! ತಕ್ಷಣ ಅರ್ಜಿ ಸಲ್ಲಿಸಿ

ಈ ಯೋಜನೆ ಅಡಿಯಲ್ಲಿ ಸ್ವಂತ ಉದ್ಯಮ ಆರಂಭಿಸುವವರು ಅಥವಾ ಈಗಾಗಲೇ ಇರುವ ಉದ್ಯಮವನ್ನು ಇನ್ನಷ್ಟು ವಿಸ್ತರಣೆ ಮಾಡಲು ಬಯಸುವವರು ಪ್ರಯೋಜನ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಪ್ರಯೋಜನ

ಸಾಂಪ್ರದಾಯಿಕ ಕೌಶಲ್ಯ ಉದ್ಯಮವನ್ನು ಬೆಂಬಲಿಸುವ ಸಲುವಾಗಿ ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆ ಆರಂಭವಾಗಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ 13,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಈ ಯೋಜನೆಯ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿ ಹಾಗೂ ಅದನ್ನು ಮರುಪಾವತಿ ಆದ ನಂತರ ಎರಡು ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಇದಕ್ಕೆ 5% ನಷ್ಟು ಬಡ್ಡಿದರ (rate of interest) ನಿಗದಿಪಡಿಸಲಾಗಿದೆ. ಸಬ್ಸಿಡಿ (subsidy ) ಬಡ್ಡಿ ದರದಲ್ಲಿ ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ಕುಶಲಕರ್ಮಿಗಳು ಪಾವತಿಸಬೇಕು.

ಫಿಕ್ಸೆಡ್ ಡೆಪಾಸಿಟ್ ಮೇಲೆ ಅತಿ ಹೆಚ್ಚು ಬಡ್ಡಿ ದರ ನೀಡೋ ಬ್ಯಾಂಕುಗಳು ಇವು

Own Businessಮೊದಲ ಹಂತದ ಸಾಲ ತೆಗೆದುಕೊಂಡರೆ ಎಂಟು ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಬೇಕು ಹಾಗೂ ಎರಡನೇ ಹಂತದ ಎರಡು ಲಕ್ಷ ರೂಪಾಯಿ ಸಾಲಕ್ಕೆ ಮರುಪಾವತಿ ಅವಧಿ 30 ತಿಂಗಳುಗಳು. ಈ ಯೋಜನೆಯ ಅಡಿಯಲ್ಲಿ ಸಾಂಪ್ರದಾಯಿಕ ಉದ್ಯಮ ಮಾಡುತ್ತಿರುವವರಿಗೆ ಹೆಚ್ಚಿನ ತರಬೇತಿ (training) ಯನ್ನು ನೀಡಲಾಗುವುದು.

ಒಮ್ಮೆ ಪ್ರಧಾನ ಮಂತ್ರಿ ವಿಶ್ವಕರ್ಮ ವೆಬ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡರೆ, ಅಂತವರಿಗೆ ಕೇಂದ್ರ ಸರ್ಕಾರದಿಂದ ಒಂದು ಐಡಿ (ID) ಕೊಡಲಾಗುತ್ತದೆ. ಈ ಐಡಿ ಹೊಂದಿರುವವರಿಗೆ ಏಳು ದಿನಗಳ ತರಬೇತಿ ನೀಡಲಾಗುತ್ತದೆ. ಹಾಗೂ ತರಬೇತಿಯ ಅವಧಿಯಲ್ಲಿ ಪ್ರತಿದಿನ 500 ರೂಪಾಯಿಗಳನ್ನು ಸರ್ಕಾರ ಸ್ಟೈಫಂಡ್ ಆಗಿ ನೀಡಲಿದೆ.

ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5,000 ರೂಪಾಯಿ ಪಿಂಚಣಿ!

ಇದರ ಜೊತೆಗೆ ಕುಶಲಕರ್ಮಿಗಳಿಗೆ ಅಥವಾ ಸಾಂಪ್ರದಾಯಿಕ ಉದ್ಯಮ ಮಾಡುತ್ತಿರುವವರಿಗೆ ತಮ್ಮ ಉದ್ದಿಮೆಯನ್ನು ನಿರ್ವಹಿಸಲು ಅನುಕೂಲವಾಗುವಂತೆ 15,000 ಖರೀದಿಸಲು ಹಣ ಸಹಾಯವನ್ನು ಸರ್ಕಾರ ಮಾಡುತ್ತದೆ.

https://pmvishwakarma.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಬ್ಯಾಂಕ್ ನಲ್ಲಿಯೂ ಕೂಡ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಸ್ವಂತವಾಗಿ ಉದ್ಯಮ ಮಾಡಲು ಬಯಸುವವರು ಅಥವಾ ಈಗಾಗಲೇ ಸರ್ಕಾರ ಗುರುತಿಸಿರುವ 18ಕ್ಕೂ ಹೆಚ್ಚಿನ ಉದ್ಯಮ ಮಾಡುವ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಪ್ರತಿದಿನ 87 ಉಳಿತಾಯ ಮಾಡಿದ್ರೆ 11 ಲಕ್ಷ ರೂಪಾಯಿ ನಿಮ್ಮದಾಗುತ್ತೆ! ಅದ್ಭುತ ಯೋಜನೆ

3 lakhs will be given to the own business by this Scheme

Our Whatsapp Channel is Live Now 👇

Whatsapp Channel

Related Stories