ಪ್ರತಿದಿನ 87 ಉಳಿತಾಯ ಮಾಡಿದ್ರೆ 11 ಲಕ್ಷ ರೂಪಾಯಿ ನಿಮ್ಮದಾಗುತ್ತೆ! ಅದ್ಭುತ ಯೋಜನೆ

ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ – LIC ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು ಇದರಲ್ಲಿ ಹೂಡಿಕೆ (investment) ಮಾಡಿದರೆ ಅಪಾಯ ಮುಕ್ತ ಹಣವನ್ನು ನೀವು ಹಿಂಪಡೆಯಬಹುದು

ಅತಿ ಸಣ್ಣ ಮೊತ್ತದ ಹೂಡಿಕೆಯಿಂದ ಗರಿಷ್ಠ ಮಿತಿಯೇ ಇಲ್ಲದಷ್ಟು ಹೂಡಿಕೆ ಮಾಡಿ ನೀವು ಉತ್ತಮ ರಿಟರ್ನ್ಸ್ ಪಡೆದುಕೊಳ್ಳಲು ಸಾಧ್ಯವಿದೆ. ಅಷ್ಟೇ ಅಲ್ಲದೆ ಎಲ್ಐಸಿ ಬೇರೆ ಬೇರೆ ರೀತಿಯ ವಿಮಾ ಸೌಲಭ್ಯ (Life Insurance) ವನ್ನು ಕೂಡ ಒದಗಿಸುವುದರಿಂದ ನೀವು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

ಮನೆ ಬಾಡಿಗೆಗೆ ನೀಡಿರುವ ಓನರ್ ಗಳಿಗೆ ಮಹತ್ವದ ಅಪ್ಡೇಟ್! ತಪ್ಪದೆ ತಿಳಿಯಿರಿ

ಎಲ್ಐಸಿ ಸ್ಪೆಷಲ್ ಸ್ಕೀಮ್!

ಭಾರತ ಸರ್ಕಾರದ ವೆಚ್ಚಗಳಲ್ಲಿ 24.6% ನಷ್ಟು ವೆಚ್ಚವನ್ನು ಎಲ್ಐಸಿಯೇ ಭರಿಸುತ್ತದೆ. ಅಂದ್ರೆ ಇದು ಎಷ್ಟು ಪ್ರಖ್ಯಾತ ಕಂಪನಿ ಎನ್ನುವುದು ನಿಮಗೆ ಈಗಾಗಲೇ ಅರ್ಥವಾಗಿರುತ್ತದೆ. ಎಲ್ ಐ ಸಿ 8 ಟ್ರಿಲಿಯನ್ ಮೊತ್ತದ ಆಸ್ತಿ ಹೊಂದಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಎಲ್ಐಸಿಯಲ್ಲಿ ಹೂಡಿಕೆ ಮಾಡಿದರೆ ಕಂಪನಿ ಮುಚ್ಚಿ ಹೋಗುತ್ತದೆ ಎನ್ನುವ ಭಯವಂತು ಇಲ್ಲವೇ ಇಲ್ಲ. ಈಗ ನಾವು ಎಲ್ಐಸಿಯ ಒಂದು ಪ್ರಮುಖ ಯೋಜನೆಯ ಬಗ್ಗೆ ತಿಳಿಸುತ್ತಿದ್ದೇವೆ.

ಆಧಾರ್ ಶಿಲಾ ಯೋಜನೆ! (LIC Aadhar shila scheme)

ಸಣ್ಣ ಉಳಿತಾಯದ ಮೂಲಕ ನೀವು ಉತ್ತಮ ಆದಾಯ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಧಾರ್ ಶಿಲಾ ಯೋಜನೆಯ ಆಯ್ದುಕೊಳ್ಳಬಹುದು. ಇದು ಮಾರುಕಟ್ಟೆ ಅಪಾಯ ಮುಕ್ತ ಹೂಡಿಕೆ ಆಗಿದ್ದು, ನೀವು ಹಣ ಕಳೆದುಕೊಳ್ಳುವ ಯಾವ ಭಯವನ್ನು ಇಟ್ಟುಕೊಳ್ಳುವ ಅಗತ್ಯ ಇಲ್ಲ ಎಲ್ಐಸಿ ಅಷ್ಟು ಭರವಸೆಯ ಯೋಜನೆಯನ್ನು ನಿಮಗೆ ಕೊಡುತ್ತದೆ.

ಸರ್ಕಾರದ ಹೊಸ ಯೋಜನೆ! ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ಪಡೆಯಿರಿ

LIC Policyಬಾಲಕಿಯರಿಗಾಗಿ ಆಧಾರ್ ಶಿಲಾ ಯೋಜನೆ!

ತಂದೆ ತಾಯಿ ಗಂಡ ಹೆಂಡತಿ ಮಕ್ಕಳು ಹೀಗೆ ಬೇರೆ ಬೇರೆ ವರ್ಗದ ಜನರು ಬೇರೆ ಬೇರೆ ವಯಸ್ಸಿನಲ್ಲಿ ಪಾಲಿಸಿ ತೆಗೆದುಕೊಳ್ಳಲು ಅವಕಾಶ ಇದೆ. ಎಲ್ಐಸಿ ಯ ಆಧಾರ್ ಶಿಲಾ ಯೋಜನೆ ಮಹಿಳೆ ಮತ್ತು ಹೆಣ್ಣು ಮಕ್ಕಳಿಗಾಗಿ ಆರಂಭಿಸಲಾಗಿರುವ ಯೋಜನೆಯಾಗಿದ್ದು, ಲಿಂಕ್ ಮಾಡದ ವೈಯಕ್ತಿಕ ಜೀವ ವಿಮಾ ಸೌಲಭ್ಯವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯ ಲಾಭ ಪಡೆಯಬಹುದು.

8 ರಿಂದ 55 ವರ್ಷ ವಯಸ್ಸಿನ ಒಳಗಿನವರು ಆಧಾರ ಶಿಲಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದು 10 ರಿಂದ 20 ವರ್ಷಗಳ ಅವಧಿಯಲ್ಲಿ ಮೆಚ್ಯೂರ್ಡ್ ಆಗುವ ಯೋಜನೆ ಆಗಿದೆ. ಹೂಡಿಕೆ ಮಾಡಿದ ವ್ಯಕ್ತಿಯ ಎಪ್ಪತ್ತನೇ ವರ್ಷಕ್ಕೆ ಲಾಭ ಪಡೆಯಬಹುದು.

ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಪ್ರೀಮಿಯಂ (premium) ಆಯ್ದುಕೊಳ್ಳಲು ಅವಕಾಶವಿದೆ. ಯಾವುದೇ ಮಹಿಳೆ ತನ್ನ 55ನೇ ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಆರಂಭಿಸಿದರೆ ಕೇವಲ 15 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಬಹುದು.

ಥಟ್ ಅಂತ ಸಿಗುತ್ತೆ ಸಾಲ! ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ

87 ರೂಪಾಯಿಗಳನ್ನು ಉಳಿತಾಯ ಮಾಡಿದರೆ ಸಿಗುತ್ತೆ 11 ಲಕ್ಷ ರೂಪಾಯಿ ರಿಟರ್ನ್!

ನೀವು ದಿನಕ್ಕೆ 87 ರೂಪಾಯಿಗಳನ್ನು ಹೂಡಿಕೆ ಮಾಡಲು ಆರಂಭಿಸಿದರೆ ಒಂದು ತಿಂಗಳಿಗೆ 2, 610ಗಳನ್ನು ಉಳಿತಾಯ ಮಾಡುತ್ತೀರಿ. ಅಂದರೆ ಒಂದು ವರ್ಷದಲ್ಲಿ 31,320ಗಳನ್ನು ಠೇವಣಿ ಮಾಡಬಹುದು. ಹತ್ತು ವರ್ಷಗಳ ಅವಧಿಯ ಪಾಲಿಸಿ ಆಯ್ದುಕೊಂಡಿದ್ದರೆ, ಹತ್ತು ವರ್ಷಗಳ ಅವಧಿಗೆ ನಿಮ್ಮ ಠೇವಣಿಯ ಮೊತ್ತ 3,13,200 ಗಳಾಗಿರುತ್ತವೆ.

ಪಾಲಿಸಿ ಮುಕ್ತಾಯದ ವೇಳೆಗೆ ನಿಮ್ಮ 75ನೇ ವಯಸ್ಸಿನಲ್ಲಿ 11 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಅತಿ ಕಡಿಮೆ ಹೂಡಿಕೆ ಮಾಡಿ ಉತ್ತಮ ಆದಾಯ ಪಡೆದುಕೊಳ್ಳುವ ಆಧಾರ ಶಿಲಾ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಐಸಿ ಏಜೆಂಟ್ ಅಥವಾ ಕಚೇರಿಯನ್ನು ಸಂಪರ್ಕಿಸಿ. ಅಥವಾ ಎಲ್ಐಸಿ ಆನ್ಲೈನ್ ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು.

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ? ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ?

If you save 87 every day, you will get 11 lakh rupees

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories