ಸರ್ಕಾರದ ಹೊಸ ಯೋಜನೆ! ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ಪಡೆಯಿರಿ
ಪ್ರತಿದಿನ ತಮ್ಮ ಜಮೀನಿನಲ್ಲಿ ಕಷ್ಟಪಟ್ಟು ದುಡಿಯುವ ರೈತ (farmers) ಯಾವಾಗ ವೃದ್ಧಾಪ್ಯ (Old age) ಜೀವನಕ್ಕೆ ಕಾಲಿಡುತ್ತಾನೋ ಆಗ ಆತನಿಗೆ ದುಡಿಯುವ ಶಕ್ತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಆರ್ಥಿಕವಾಗಿ ಆತ ಯಾವುದೇ ಸಮಸ್ಯೆ ಅನುಭವಿಸದೆ ತನ್ನ ತಿಂಗಳ ಖರ್ಚನ್ನು ತಾನು ನಿಭಾಯಿಸುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
ಸರ್ಕಾರಿ ಕಚೇರಿಯಲ್ಲಿ ಅಥವಾ ಇತರ ವಾಣಿಜ್ಯ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಪಿಂಚಣಿ (pension ) ಸೌಲಭ್ಯ ಇದ್ದೇ ಇರುತ್ತದೆ. ಆದರೆ ರೈತರಿಗೆ ಯಾವುದೇ ರೀತಿಯ ಪಿಂಚಣಿ ಸಿಗುವುದಿಲ್ಲ. ಇದಕ್ಕಾಗಿಯೇ ಸರ್ಕಾರ ರೈತರಿಗಾಗಿ ಈ ಹೊಸ ಯೋಜನೆ ಆರಂಭಿಸಿದ್ದು, ಈ ಯೋಜನೆಯ ಮೂಲಕ ರೈತರು ತಮ್ಮ ವೃದ್ಧಾಪ್ಯ ಜೀವನ ನಡೆಸಲು ಪ್ರತಿ ತಿಂಗಳು 3000 ಗಳನ್ನು ಪಿಂಚಣಿಯಾಗಿ ಪಡೆಯಬಹುದು.
ಥಟ್ ಅಂತ ಸಿಗುತ್ತೆ ಸಾಲ! ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ
ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ! (Pradhanmantri Kisan mandhan scheme)
ರೈತರಿಗೆ ಆರ್ಥಿಕ ಭದ್ರತೆಯನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ 3000 ಪಿಂಚಣಿ ಪಡೆದುಕೊಳ್ಳಬಹುದು. ರೈತರಿಗಾಗಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಹಲವು ಯೋಜನೆಗಳಲ್ಲಿ ಇದು ಕೂಡ ಒಂದಾಗಿದ್ದು, ಈಗಾಗಲೇ ಸಾಕಷ್ಟು ರೈತರು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಸೆಪ್ಟೆಂಬರ್ 12, 2019 ಕ್ಕೆ ಜಾರಿಗೆ ತರಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆ ಮೂಲಕ ಆರ್ಥಿಕ ನೆರವು ನೀಡಲಾಗುವುದು.
ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ? ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ?
ರೈತರಿಗೆ ಮೂರು ಸಾವಿರ ರೂಪಾಯಿಗಳ ಪಿಂಚಣಿ!
ಈ ಯೋಜನೆಯ ಅಡಿಯಲ್ಲಿ ರೈತರಿಗೆ 3,000 ಪಿಂಚಣಿ ಮೀಸಲಿಡಲಾಗಿದೆ. ಇನ್ನು ರೈತ ಮೃತಪಟ್ಟರೆ ಆತನ ಪತ್ನಿಗೆ 1,500 ಪಿಂಚಣಿ ನೀಡಲಾಗುವುದು. 18 ರಿಂದ 40 ವರ್ಷ ವಯಸ್ಸಿನ ಯಾವುದೇ ರೈತ ಈ ಯೋಜನೆಗೆ ಅರ್ಹನಾಗಿರುತ್ತಾನೆ. ತಿಂಗಳಿಗೆ 55 ರಿಂದ 200 ರೂಪಾಯಿಗಳವರೆಗೆ ಹೂಡಿಕೆ ಮಾಡಬೇಕು. ನಂತರ 60 ವರ್ಷದ ಬಳಿಕ ರೈತರು ಪ್ರತಿ ತಿಂಗಳು 3000ಗಳನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ; ಪ್ರತಿದಿನ ಸಿಗಲಿದೆ ₹500 ರೂಪಾಯಿ!
ಕಿಸಾನ್ ಮನ್ ಧನ್ ಯೋಜನೆಗೆ ಅಪ್ಲೈ ಮಾಡಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಕೃಷಿ ಭೂಮಿ ಪ್ರಮಾಣ ಪತ್ರ (ಕೃಷಿ ಪ್ಲಾಟ್ ಸಂಖ್ಯೆ)
ವಯಸ್ಸಿನ ಪ್ರಮಾಣ ಪತ್ರ
ನಿವಾಸ ಪ್ರಮಾಣ ಪತ್ರ
ಪಡಿತರ ಚೀಟಿ
ಬ್ಯಾಂಕ್ ಖಾತೆಯ ವಿವರ
ಮೊಬೈಲ್ ಸಂಖ್ಯೆ
ಬ್ಯಾಂಕ್ ಚೆಕ್ ಹಿಂಭಾಗದಲ್ಲಿ ಏಕೆ ಸೈನ್ ಮಾಡಬೇಕು! ನಿಜವಾದ ಕಾರಣ ಏನು ಗೊತ್ತಾ?
ಕಿಸಾನ್ ಮನ್ ಧನ್ ಯೋಜನೆಗೆ ಅಪ್ಲೈ ಮಾಡುವುದು ಹೇಗೆ?
ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೈತರು ಕಿಸಾನ್ ಮನ್ ಧನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಲಾಗಿನ್ ಆಗಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಅದಕ್ಕೆ ಓಟಿಪಿ ಕಳುಹಿಸಲಾಗುತ್ತದೆ ಅದನ್ನ ಇಲ್ಲಿ ನಮೂದಿಸಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಈ ರೀತಿ ಕೃಷಿಕರು ಆರ್ಥಿಕವಾಗಿ ತಮ್ಮ ಅರುವತ್ತನೇ ವರ್ಷದ ನಂತರ ಕೈಯಲ್ಲಿ ದುಡಿಯಲು ಸಾಧ್ಯವಾಗದೆ ಇರುವ ಸಮಯದಲ್ಲಿ ಸರ್ಕಾರದಿಂದ 3000 ಪಿಂಚಣಿ ಪಡೆದುಕೊಂಡು ಸಣ್ಣಪುಟ್ಟ ಖರ್ಚುಗಳನ್ನು ಆದ್ರೂ ನಿಭಾಯಿಸಿಕೊಳ್ಳಬಹುದು ಇದರ ಜೊತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಡಿಯಲ್ಲಿ 6000 ಗಳನ್ನು ವಾರ್ಷಿಕವಾಗಿ ರೈತರಿಗೆ ಒದಗಿಸಿಕೊಡಲಾಗುತ್ತಿದೆ.
Government new Scheme, Get a pension of Rs 3,000 every month