ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ; ಪ್ರತಿದಿನ ಸಿಗಲಿದೆ ₹500 ರೂಪಾಯಿ!

Loan Scheme : ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ; ಈ ಯೋಜನೆಯಡಿಯಲ್ಲಿ ನೀವು ಪಡೆದುಕೊಳ್ಳಬಹುದು ಪ್ರತಿದಿನ ರೂ.500

Loan Scheme : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (pm Narendra Modi ji) ಅವರ ನೇತೃತ್ವದ ಕೇಂದ್ರ ಸರ್ಕಾರ (Central government) ದೇಶದಲ್ಲಿ ವಾಸಿಸುವ ಪ್ರತಿಯೊಂದು ವರ್ಗದ ಜನರ ಹಿತ ದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ಅದರಲ್ಲೂ ಇತ್ತೀಚಿಗೆ ಯುವಕರಿಗೆ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಕೆಲವು ಪ್ರಮುಖ ಯುವ ಸಂಬಂಧಿ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ 2023 – 24ನೇ ಸಾಲಿನಲ್ಲಿ ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಸಾಂಪ್ರದಾಯಿಕ ಕಸುಬು ಮಾಡುವವರು ಪ್ರತಿದಿನ 500 ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಯಾವುದು ಆ ಯೋಜನೆ? ಅದರಿಂದ ಸಿಗುವ ಬೆನಿಫಿಟ್ ಏನು? ಎಲ್ಲವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬ್ಯಾಂಕ್ ಚೆಕ್ ಹಿಂಭಾಗದಲ್ಲಿ ಏಕೆ ಸೈನ್ ಮಾಡಬೇಕು! ನಿಜವಾದ ಕಾರಣ ಏನು ಗೊತ್ತಾ?

ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ; ಪ್ರತಿದಿನ ಸಿಗಲಿದೆ ₹500 ರೂಪಾಯಿ! - Kannada News

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ!

2023ರ ವಿಶ್ವಕರ್ಮ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಅಡಿಯಲ್ಲಿ 18ಕ್ಕೂ ಹೆಚ್ಚಿನ ಸಾಂಪ್ರದಾಯಿಕ ಉದ್ಯಮವನ್ನು ಮಾಡುತ್ತಿರುವವರಿಗೆ ಸಾಲ ಸೌಲಭ್ಯ (Loan) ಹಾಗೂ ಇತರ ಸೌಲಭ್ಯಗಳು ಕೂಡ ಸಿಗಲಿವೆ.

ವಿಶ್ವಕರ್ಮ ಯೋಜನೆಯ ಪ್ರಯೋಜನಗಳು! (Benefits)

* ಕಮ್ಮಾರ, ಚಮ್ಮಾರ, ಬಡಿಗೆದಾರ, ಕುಂಬಾರ, ಅಗಸ, ಮೀನು ಬಲೆ ತಯಾರಕ ಮೊದಲಾದ ಕಸುಬು ಸೇರಿದಂತೆ 18 ಸಾಂಪ್ರದಾಯಿಕ ಉದ್ದಿಮೆಗಳಿಗೆ ಸಾಲ ಸೌಲಭ್ಯ.

*5 ದಿನಗಳ ತರಬೇತಿ ಹಾಗೂ ತರಬೇತಿ ಅವಧಿಯಲ್ಲಿ ಪ್ರತಿದಿನ ಅಭ್ಯರ್ಥಿಗೆ 500 ರೂಪಾಯಿಗಳನ್ನು ನೀಡಲಾಗುವುದು.

*ತರಬೇತಿಯ ನಂತರ ಅಭ್ಯರ್ಥಿಗಳು ತಮ್ಮ ಕೆಲಸಕ್ಕೆ ಸಂಬಂಧಿಸಿದ ಟೂಲ್ ಕಿಟ್ (tool kit) ಖರೀದಿಗಾಗಿ 15 ಸಾವಿರ ರೂಪಾಯಿಗಳನ್ನು ನೀಡಲಾಗುವುದು.

*ಎರಡು ಕಂತುಗಳಲ್ಲಿ ಸಾಲ ಸೌಲಭ್ಯ (Loan facility) ನೀಡಲಾಗುವುದು ಮೊದಲ ಕಂತಿನಲ್ಲಿ ಒಂದು ಲಕ್ಷ ರೂಪಾಯಿಗಳು ಹಾಗೂ ಅದನ್ನು ಮರುಪಾವತಿ ಮಾಡಿದ ನಂತರ ಎರಡನೇ ಕಂತಿನಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದು.

*ಉದ್ದಿಮೆಗಳು ಪಡೆಯುವ ಈ ಸಲಕ್ಕೆ ಕೇವಲ 5% ಬಡ್ಡಿ ವಿಧಿಸಲಾಗುವುದು.

*ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ವಿಶ್ವಕರ್ಮ ಐಡಿ (ID) ನೀಡಲಾಗುವುದು. ಈ ಐಡಿ ಹೊಂದಿರುವವರು ಯಾವುದೇ ಮೇಳ ಅಥವಾ ಪ್ರದರ್ಶನಗಳಲ್ಲಿ ತಮ್ಮ ಉದ್ಯಮಕ್ಕೆ ಸಂಬಂಧಪಟ್ಟ ಅಂಗಡಿ ಹಾಕಬಹುದು.

ಇನ್ಮುಂದೆ ಇಂತಹ ಜನರಿಗೆ ಗ್ಯಾಸ್ ಸಬ್ಸಿಡಿ ಹಣ ಸಿಗಲ್ಲ! ಸರ್ಕಾರ ಖಡಕ್ ನಿರ್ಧಾರ

Loan Scheme

ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ! ಈ ತಪ್ಪು ಮಾಡಿದ್ರೆ ಕಟ್ಟಬೇಕು 10,000 ದಂಡ

ಯಾರು ಅರ್ಜಿ ಸಲ್ಲಿಸಬಹುದು? (Who can apply)

ಯಾವುದೇ ಕುಶಲ ಕರ್ಮಿಗಳು ಹಾಗೂ ಸಾಂಪ್ರದಾಯಿಕ ಉದ್ಯಮ ನಂಬಿಕೊಂಡು ಬಂದಿರುವವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸಾಲು ಸೌಲಭ್ಯ ಪಡೆದುಕೊಳ್ಳಲು 18 ವರ್ಷ ವಯಸ್ಸಾಗಿರಬೇಕು. ಈಗಾಗಲೇ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಸಾಲವನ್ನು ಪಡೆದುಕೊಂಡಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed the documents)

ಆಧಾರ್ ಕಾರ್ಡ್
ನಿವಾಸ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಬ್ಯಾಂಕು ಖಾತೆಯ ವಿವರ
ಅಭ್ಯರ್ಥಿಯ ಫೋಟೋ
ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಆರ್‌ಬಿಐ ಹೊಸ ಸೂಚನೆ! ಇಲ್ಲಿದೆ ಮಾಹಿತಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ! (Apply online)

ನೀವು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ವಿಶ್ವಕರ್ಮ ಯೋಜನೆಯ ಬಗ್ಗೆ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬಹುದು. ಅಥವಾ ಹತ್ತಿರದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. http://www.pmvishwakarma.gov.in/ ಈ ವೆಬ್ ಸೈಟ್ ನಲ್ಲಿ ವಿಶ್ವಕರ್ಮ ಯೋಜನೆಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

Another scheme of the central government, Get 500 Rupees every day

Follow us On

FaceBook Google News

Another scheme of the central government, Get 500 Rupees every day