ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಆರ್‌ಬಿಐ ಹೊಸ ಸೂಚನೆ! ಇಲ್ಲಿದೆ ಮಾಹಿತಿ

Bank Loan : ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ನಲ್ಲಿ ತೆಗೆದುಕೊಳ್ಳುವ ಸಾಲ (Loan) ಕ್ಕೆ ಸಂಬಂಧಪಟ್ಟ ಹಾಗೆ ಮಹತ್ವದ ಸೂಚನೆ ಒಂದನ್ನು ನೀಡಿದ ಯಾವುದೇ ರೀತಿಯ ಸಾಲವನ್ನು ನೀವು ಬ್ಯಾಂಕ್ ನಲ್ಲಿ ಮಾಡುವುದಿದ್ದರೆ, ಅದಕ್ಕಿಂತ ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳುವುದು ಸೂಕ್ತ.

ಆರ್ ಬಿ ಐ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ನೀಡಿರುವ ಮಾರ್ಗಸೂಚಿ ಏನು ಎಂಬುದನ್ನು ನೋಡೋಣ.

ಇನ್ಮುಂದೆ ಇಂತಹ ಜನರಿಗೆ ಗ್ಯಾಸ್ ಸಬ್ಸಿಡಿ ಹಣ ಸಿಗಲ್ಲ! ಸರ್ಕಾರ ಖಡಕ್ ನಿರ್ಧಾರ

ಸಾಮಾನ್ಯವಾಗಿ ನಮಗೆ ಯಾವುದೇ ತುರ್ತು ಹಣದ ಅಗತ್ಯ ಇದ್ದಾಗ ಅಥವಾ ಯಾವುದೇ ರೀತಿಯ ಹಣಕಾಸಿನ ವಹಿವಾಟು ಮಾಡುವುದಿದ್ದರೆ ಅದಕ್ಕೆ ಬ್ಯಾಂಕ್ (Bank) ಅನ್ನು ಅವಲಂಬಿಸುತ್ತೇವೆ. ಕೇಂದ್ರ ಬ್ಯಾಂಕ್, ಗ್ರಾಹಕರು ಬ್ಯಾಂಕ್ ನಲ್ಲಿ ಹಣದ ವಹಿವಾಟು (money transaction) ಮಾಡಿದಾಗ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಆಗಾಗ ಕೆಲವು ನಿಯಮಗಳನ್ನು ಪರಿಷ್ಕರಿಸುತ್ತದೆ ಹಾಗೂ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಇದೀಗ ಗ್ರಾಹಕರ ಹಿತ ದೃಷ್ಟಿಯಿಂದ ಮತ್ತೊಂದು ಹೊಸ ಮಾರ್ಗಸೂಚಿಯನ್ನು ಆರ್‌ಬಿಐ ತಿಳಿಸಿದೆ.

ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಆರ್ ಬಿ ಐ ಗೈಡ್ ಲೈನ್ಸ್!

ಕೀ ಫ್ಯಾಕ್ಟ್ ಸ್ಟೇಟ್‌ ಮೆಂಟ್’ (KFS- Key Fact Statement), ಇನ್ನು ಮುಂದೆ ಬ್ಯಾಂಕ್ ನವರು ಒದಗಿಸಬೇಕು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಿದೆ. ಈ ಸ್ಟೇಟ್ಮೆಂಟ್ ನಲ್ಲಿ, ಚಿಲ್ಲರೆ ಮತ್ತು MSME (Micro, Small and Medium Enterprises) ಸಾಲ ತೆಗೆದುಕೊಳ್ಳುವ ಗ್ರಾಹಕರಿಗೆ ಬಡ್ಡಿ ಮತ್ತು ಸಾಲಕ್ಕೆ ಸಂಬಂಧಪಟ್ಟ ನಿಯಮಗಳನ್ನು ಒಳಗೊಂಡಿದೆ.

ಸ್ವಂತ ಉದ್ಯೋಗಕ್ಕೆ 1 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ!

RBI Rulesವಾಣಿಜ್ಯ ಬ್ಯಾಂಕ್ (commercial bank) ಗಳಲ್ಲಿ ತೆಗೆದುಕೊಳ್ಳುವವರಿಗೆ, ಮೈಕ್ರೋ ಫೈನಾನ್ಸ್ ಸಾಲ (micro finance loan) ಗಳಿಗೆ KFS ಕಡ್ಡಾಯ ಎಂದು, ಆರ್ ಬಿ ಐ ಫೆಬ್ರವರಿ 16ನೇ ತಾರೀಖಿನಂದು ಸುತ್ತೋಲೆ ಹೊರಡಿಸಿದೆ. ಈ ನಿಯಮವನ್ನು ಎಲ್ಲಾ ಬ್ಯಾಂಕುಗಳು ಪಾಲಿಸಲೇಬೇಕು.

KFS ಬಗ್ಗೆ ಸ್ಪಷ್ಟನೆ ನೀಡಿದ ಗವರ್ನರ್!

ಧ್ವನಿ ಮಾಸಿಕ ಹಣಕಾಸು ನೀತಿ ಪ್ರಕಟಿಸಿರುವ ಆರ್ ಬಿ ಐ ಗವರ್ನರ್ ಶಕ್ತಿ ಕಾಂತ್ ದಾಸ್ ಗ್ರಾಹಕರಿಗೆ ವಿಧಿಸುವ ಸಾಲದ ಬಡ್ಡಿ, ಶುಲ್ಕ ಹಾಗೂ ಇತರ ಮಾಹಿತಿಗಳನ್ನು ಸರಿಯಾಗಿ ಒದಗಿಸಬೇಕು ಎಂದು ಬ್ಯಾಂಕ್ ಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿದಾಗ ಸಾಕಷ್ಟು ಗ್ರಾಹಕರಿಗೆ ತಮ್ಮ ಸಾಲದ ಬಡ್ಡಿ ಅಥವಾ ಇತರ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ.

ಮನೆ ಇಲ್ಲದ ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗುತ್ತೆ ಸ್ವಂತ ಮನೆ! ಅರ್ಜಿ ಸಲ್ಲಿಸಿ

ಎಷ್ಟೋ ಜನ ವಾರ್ಷಿಕವಾಗಿ ಅಥವಾ ಅರ್ಧ ವಾರ್ಷಿಕ ಶುಲ್ಕವನ್ನು ಬ್ಯಾಂಕ್ ಗಳು ವಿಧಿಸಿದಾಗ ಅದನ್ನು ಪ್ರಶ್ನೆ ಮಾಡಿದೆ ಶುಲ್ಕ ಪಾವತಿ ಮಾಡುತ್ತಾರೆ. ಆದರೆ ಇಂತಹ ಯಾವುದೇ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಗ್ರಾಹಕರಿಗೆ ಅವರು ತೆಗೆದುಕೊಳ್ಳುವ ಸಾಲದ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಬೇಕು ಎಂದು ಆರ್ ಬಿ ಐ ಸೂಚಿಸಿದೆ.

ಯಾವುದೇ ಸಾಲದಾತ ಬ್ಯಾಂಕ್ ಇನ್ನು ಮುಂದೆ ಗ್ರಾಹಕರಿಗೆ ಅರ್ಥವಾಗುವ ಸರಳ ಹಾಗೂ ಸುಲಭ ಭಾಷೆಯಲ್ಲಿ ಸಾಲಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಳಗೊಂಡಿರುವ KFS ಒದಗಿಸಬೇಕು ಎಂದು ಆರ್ ಬಿ ಐ ತಿಳಿಸಿದೆ. ಆರ್ ಬಿ ಐ ನ ಈ ನಿಯಮದಿಂದಾಗಿ ಬ್ಯಾಂಕ್ ಗಳು ಸಾಲಗಾರರಿಗೆ ಹೆಚ್ಚಿನ ಪಾರದರ್ಶಕ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.

ಸ್ವಂತ ಮನೆ ಕಟ್ಟಲು ನಿಮಗೂ ಸಿಗುತ್ತೆ ಹೋಮ್ ಲೋನ್! ಅರ್ಹತೆ ಚೆಕ್ ಮಾಡಿಕೊಳ್ಳಿ

RBI new update for Loan borrowers in any bank

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories