ಇನ್ಮುಂದೆ ಇಂತಹ ಜನರಿಗೆ ಗ್ಯಾಸ್ ಸಬ್ಸಿಡಿ ಹಣ ಸಿಗಲ್ಲ! ಸರ್ಕಾರ ಖಡಕ್ ನಿರ್ಧಾರ
Gas Cylinder Subsidy : ಹಣದುಬ್ಬರದ ಸಮಯದಲ್ಲಿ ಗ್ಯಾಸ್ ಸಿಲಿಂಡರ್ (LPG gas cylinder) ಮೇಲೆ ಸರ್ಕಾರ ಸಬ್ಸಿಡಿ (subsidy) ನೀಡಿದ್ದು ಜನರಿಗೆ ಹೆಚ್ಚು ಅನುಕೂಲವಾಗಿದೆ.
ಸಾಮಾನ್ಯ ಜನರಿಗೆ ದಿನ ಬಳಕೆಯ ಎಲ್ ಲ್ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿಗಳು ಹಾಗೂ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಪಡೆದುಕೊಂಡವರಿಗೆ 300 ರೂಪಾಯಿಗಳ ಸಬ್ಸಿಡಿ ಘೋಷಿಸಲಾಗಿದೆ.
ಸ್ವಂತ ಉದ್ಯೋಗಕ್ಕೆ 1 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ!
ಉಚಿತ ಗ್ಯಾಸ್ ಕನೆಕ್ಷನ್! (Free Gas Connection)
ಇಂದು ಲಕ್ಷಾಂತರ ಮಹಿಳೆಯರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಒಂದು ಉಚಿತ ಸಿಲಿಂಡರ್ ಗ್ಯಾಸ್ ಸ್ಟವ್ ಹಾಗೂ ಲೈಟರ್ ವಿತರಣೆ ಮಾಡಲಾಗುತ್ತಿದೆ. ಆದರೆ ಈಗ ಕೇಂದ್ರ ಸರ್ಕಾರ ಸಬ್ಸಿಡಿ ವಿಚಾರದಲ್ಲಿ ದೊಡ್ಡ ನಿರ್ಧಾರ ಕೈಗೊಂಡಿದ್ದು, ಮಾರ್ಚ್ 31ರ ಒಳಗೆ ಈ ಕೆಲಸ ಮಾಡಿಕೊಳ್ಳದೆ ಇದ್ದರೆ ನಿಮಗೆ ಸರ್ಕಾರದಿಂದ ಸಿಗುವ ಸಿಲಿಂಡರ್ ಸಬ್ಸಿಡಿ ಹಣ ಬರುವುದಿಲ್ಲ ನಿಮ್ಮ ಖಾತೆಗೆ (Bank Account) ಜಮಾ ಆಗುವುದಿಲ್ಲ.
ಕೆವೈಸಿ ಮಾಡಿ!
ಈಗಾಗಲೇ ತಿಳಿಸಿರುವಂತೆ ನೀವು ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಅದಕ್ಕೆ ಕೆವೈಸಿ (E-KYC ) ಆಗುವುದು ಕಡ್ಡಾಯವಾಗಿದೆ, ಇದರ ಜೊತೆಗೆ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದರೆ ಗ್ಯಾಸ್ ನಂಬರ್ ಕೂಡ ಕಡ್ಡಾಯವಾಗಿದೆ. ಬ್ಯಾಂಕ್ಗಳಲ್ಲಿ ಅಥವಾ ನೀವು ಎಲ್ಲಿ ಕೆಲಸ ಕನೆಕ್ಷನ್ ಪಡೆದುಕೊಂಡಿದ್ದೀರಾ ಅದೇ ಕೇಂದ್ರಕ್ಕೆ ಹೋಗಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ.
ಮನೆ ಇಲ್ಲದ ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗುತ್ತೆ ಸ್ವಂತ ಮನೆ! ಅರ್ಜಿ ಸಲ್ಲಿಸಿ
ಆನ್ಲೈನ್ ನಲ್ಲಿಗೆ ಕೆವೈಸಿ ಮಾಡಿಸಿಕೊಳ್ಳಬಹುದು! (E-KYC in online )
ಇನ್ನು ಸಾಕಷ್ಟು ಜನ ಆಫ್ಲೈನ್ ಮೂಲಕ ಕೆವೈಸಿ ಮಾಡಿಸಿಕೊಳ್ಳುವ ಕಾರಣಕ್ಕೆ ಮನೆಯಿಂದ ಹೊರಗೆ ಹೋಗಿ ಕೆವೈಸಿ ಮಾಡಿಸುವ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಆದರೆ ಆನ್ಲೈನ್ ಮೂಲಕವೂ ಅವಕಾಶ ನೀಡಲಾಗಿದ್ದು ಕೊನೆಪಕ್ಷ ಈ ರೀತಿ ಕೆವೈಸಿ ಮಾಡಿಸಿಕೊಳ್ಳಿ.
*ಮೊದಲು https://www.mylpg.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ.
*HP, bhart gas, Indane gas ಈ ಮೂರು ಆಯ್ಕೆಗಳು ಕಾಣಿಸುತ್ತವೆ. ಇದರಲ್ಲಿ ಯಾವ ಕಂಪನಿಯ ಗ್ರಾಹಕರು ನೀವು ಎಂಬುದನ್ನು ನೋಡಿ ಆ ಸಿಂಬಲ್ ಮೇಲೆ ಕ್ಲಿಕ್ ಮಾಡಿ.
*ಈಗ ನೇರವಾಗಿ ಆ ಕಂಪನಿಯ ವೆಬ್ಸೈಟ್ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಕೆವೈಸಿ ಪ್ರಕ್ರಿಯೆ ಮಾಡಲು ಅವಕಾಶ ಇದೆ.
ಸ್ವಂತ ಮನೆ ಕಟ್ಟಲು ನಿಮಗೂ ಸಿಗುತ್ತೆ ಹೋಮ್ ಲೋನ್! ಅರ್ಹತೆ ಚೆಕ್ ಮಾಡಿಕೊಳ್ಳಿ
*ನಿಮ್ಮ ಮೊಬೈಲ್ ಸಂಖ್ಯೆ ಗ್ರಾಹಕರ ಸಂಖ್ಯೆ ಗ್ಯಾಸ್ ಐಡಿ ಮೊದಲಾದ ವಿವರಗಳನ್ನು ಭರ್ತಿ ಮಾಡಬೇಕು.
*ನಂತರ ಆಧಾರ್ ಪರಿಶೀಲನೆ ಇರುತ್ತದೆ ಇದಕ್ಕೆ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್ ಗೆ ಓಟಿಪಿ (OTP) ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ.
*ಈಗ ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಕೆ ವೈ ಸಿ ಮಾಡಲು ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ.
ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿರುವಂತೆ ಮಾರ್ಚ್ 31 ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಲು ಕೊನೆಯ ದಿನಾಂಕವಾಗಿದೆ. ಇದಾದ ಬಳಿಕ ನೀವು ಕೆವೈಸಿ ಮಾಡಿಸಿಕೊಳ್ಳುತ್ತೇನೆ ಎಂದು ಹೇಳಿದರು ಕೂಡ ನಿಮ್ಮ ಖಾತೆಗೆ ಹಣ ರದ್ದಾಗಿರುವುದು ಮತ್ತೆ ಬಿಡುಗಡೆ ಆಗುವುದಿಲ್ಲ. ಹಾಗಾಗಿ ಪ್ರತಿ ತಿಂಗಳು ಸರ್ಕಾರದಿಂದ ಸಿಗುವ ಸಬ್ಸಿಡಿ ಪಡೆಯಲು ಮೊದಲು ಕೆವೈಸಿ ಅಪ್ಡೇಟ್ ಅಥವಾ ಕೆವೈಸಿ ಲಿಂಕ್ ಮಾಡಿಸಿಕೊಳ್ಳಿ.
ಚೀ.. ಹಂದಿ ಸಾಕಾಣಿಕೆ ಅಂತ ಹಗುರವಾಗಿ ನೋಡಬೇಡಿ, ಇದೆ ಲಕ್ಷ ಲಕ್ಷಗಳಲ್ಲಿ ಆದಾಯ!
such people will not get gas Cylinder subsidy money