ಸ್ವಂತ ಉದ್ಯೋಗಕ್ಕೆ 1 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ!

ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ಹೇಗೆ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು, ಅರ್ಜಿ ಹಾಕುವ ಪ್ರಕ್ರಿಯೆ ಹೇಗೆ ತಿಳಿಯಿರಿ

Business Loan : ಸ್ವಂತ ಉದ್ಯೋಗ (own business) ಆರಂಭಿಸುವವರಿಗಾಗಿಯೇ ಸ್ವಂ ಉದ್ಯೋಗ ಯೋಜನೆ (swayam udyog Yojana) ಯನ್ನು ಜಾರಿಗೆ ತರಲಾಗಿದ್ದು ಈ ಮೂಲಕ ಸಣ್ಣ ಪುಟ್ಟ ಉದ್ಯೋಗ ಮಾಡುವವರು ಬಂಡವಾಳವನ್ನು ಸರ್ಕಾರದಿಂದ ಪಡೆದುಕೊಳ್ಳಬಹುದು.

ಸ್ವಯಂ ಉದ್ಯೋಗ ಯೋಜನೆಯ ಅಡಿಯಲ್ಲಿ ಹೇಗೆ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು, ಅರ್ಜಿ ಹಾಕುವ ಪ್ರಕ್ರಿಯೆ ಹೇಗೆ ಎನ್ನುವ ವಿವರಗಳು ಈ ಲೇಖನದಲ್ಲಿ ಇದೆ ಮುಂದೆ ಓದಿ.

ಹೊಸದಾಗಿ ಮದುವೆಯಾದ ದಂಪತಿಗಳಿಗೆ ಸಿಗಲಿದೆ 50,000 ಸಹಾಯಧನ! ಪಡೆಯಿರಿ

Fixed Deposit

ಇಂಥವರಿಗೆ ಆರಂಭಿಸಲಾಗಿದೆ ಸ್ವಯಂ ಉದ್ಯೋಗ ಯೋಜನೆ!

ಸ್ವಯಂ ಉದ್ಯೋಗ ಯೋಜನೆಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ಕರ್ನಾಟಕ ರಾಜ್ಯದ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ (KMDC) ದಿಂದ ಈ ಯೋಜನೆಯನ್ನು ಘೋಷಿಸಲಾಗಿದೆ. ಇದರಿಂದ ಜೈನ, ಬೌದ್ಧ, ಮುಸ್ಲಿಂ, ಕ್ರಿಶ್ಚಿಯನ್ ಪಾರ್ಸಿ, ಆಂಗ್ಲೋ ಇಂಡಿಯನ್ ಜನಾಂಗದವರು ಪ್ರಯೋಜನ ಪಡೆದುಕೊಳ್ಳಬಹುದು.

ಸ್ವಯಂ ಉದ್ಯೋಗ ಆರಂಭಿಸಲು ಅಂದರೆ ಸಣ್ಣಪುಟ್ಟ ವ್ಯಾಪಾರ ಮಾಡಲು, ಗುಡಿ ಕೈಗಾರಿಕೆ ಆರಂಭಿಸಲು, ಕೃಷಿ ಆಧಾರಿತ ಚಟುವಟಿಕೆಯನ್ನು ಮಾಡಲು ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಘಟಕ ವೆಚ್ಚ 33% ಅಥವಾ ಗರಿಷ್ಠ ಒಂದು ಲಕ್ಷ ರೂಪಾಯಿಗಳ ಸಹಾಯಧನ ನೀಡಲಾಗುವುದು.

ಹೊಸ ರೇಷನ್ ಕಾರ್ಡ್ ವಿತರಣೆಗೆ ಡೇಟ್ ಫಿಕ್ಸ್; ಬಿಪಿಎಲ್ ಕಾರ್ಡ್ ವಿತರಣೆಗೆ ನಿರ್ಧಾರ

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು! (Eligibility to apply)

*ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
*ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು.
*ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ ಗ್ರಾಮೀಣ ಪ್ರದೇಶದಲ್ಲಿ ಇರುವವರಿಗೆ 81,000 ಹಾಗೂ ನಗರ ಪ್ರದೇಶದಲ್ಲಿ ಇರುವವರಿಗೆ 1,03,000 ಒಳಗಿರಬೇಕು.
*ಅರ್ಜಿದಾರರು ಅಥವಾ ಕುಟುಂಬದ ಸದಸ್ಯರು ಯಾವುದೇ ಸರ್ಕಾರಿ ನೌಕರಿಯಲ್ಲಿ ಇರಬಾರದು.
*KMDC ಸುಸ್ತಿದಾರರಾಗಿರುವ ಸದಸ್ಯರು ಅರ್ಜಿ ಸಲ್ಲಿಸಬಹುದು.

ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬರಬೇಕು ಅಂದ್ರೆ ಈ ಕೆಲಸ ಮಾಡಲೇಬೇಕು!

Business Loanಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ಆಧಾರ್ ಕಾರ್ಡ್
ನಿವಾಸ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಜಾತಿ ಅಥವಾ ಅಲ್ಪಸಂಖ್ಯಾತರ ಪ್ರಮಾಣ ಪತ್ರ
ಯೋಜನೆಯ ವರದಿ

ಸಿಹಿ ಸುದ್ದಿ! ಏ.1ರಿಂದ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡುಗಳು ವಿತರಣೆ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಅಧಿಕೃತ ವೆಬ್ಸೈಟ್ https://kmdconline.karnataka.gov.in/Portal/login ಭೇಟಿ ನೀಡಿ ಈ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸ್ವಂತ ಉದ್ಯೋಗ ಮಾಡಲು ಹಣಕಾಸಿನ ನೆರವನ್ನು ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 29 2024. (Last date to apply February 29, 2024)

Get Business Loan Upto 1 Lakh by this Government Scheme

Related Stories