ಸ್ವಂತ ಮನೆ ಕಟ್ಟಲು ನಿಮಗೂ ಸಿಗುತ್ತೆ ಹೋಮ್ ಲೋನ್! ಅರ್ಹತೆ ಚೆಕ್ ಮಾಡಿಕೊಳ್ಳಿ

Home Loan : ಮನೆಕಟ್ಟುವ (built your own house) ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ದೊಡ್ಡ ಮೊತ್ತದ ಹಣವಂತೂ ಬೇಕೆ ಬೇಕು. ಹೆಚ್ಚಿನವರ ಬಳಿ ಅಷ್ಟು ದೊಡ್ಡ ಮೊತ್ತದ ನಗದು ಹಣ ಇರುವುದೂ ಇಲ್ಲ. ಇಂತಹ ಸಂದರ್ಭದಲ್ಲಿ ನಾವು ಮೊರೆ ಹೋಗುವುದೇ ಬ್ಯಾಂಕ್ ನಲ್ಲಿ ಸಿಗುವ ಹೋಂ ಲೋನ್ ಗೆ.
ಹೌದು, ಮನೆ ಕಟ್ಟುವ ಖರ್ಚನ್ನು ನಿಭಾಯಿಸಲು ಗೃಹ ಸಾಲ (Home loan) ತೆಗೆದುಕೊಳ್ಳುವುದು ಸೂಕ್ತ. ಆದರೆ ಯಾರೇ ಮನೆ ಕಟ್ಟಬೇಕು ಎಂದು ಬಯಸಿದರೂ ಮನೆ ಕಟ್ಟಲು ಹೋಂ ಲೋನ್ ಸಿಗುತ್ತದೆಯೇ ಎಂದರೆ ಖಂಡಿತವಾಗಿಯೂ ಇಲ್ಲ. ಅದಕ್ಕೆ ಅದರದ್ದೇ ಆದ ಅರ್ಹತೆ, ನೀತಿ ನಿಯಮಗಳು ಇವೆ.
ಒಂದೊಂದು ಬ್ಯಾಂಕ್ ಒಂದೊಂದು ರೀತಿಯ ಗೃಹ ಸಾಲ ನಿಯಮ ಮತ್ತು ಬಡ್ಡಿ ದರ (rate of interest) ವನ್ನು ಹೊಂದಿರುತ್ತವೆ. ನಾವು ಈ ಲೇಖನದಲ್ಲಿ ನಿಮಗೆ ಗೃಹ ಸಾಲ ಪಡೆದುಕೊಳ್ಳುವುದಕ್ಕೆ ಯಾವ ರೀತಿ ನಿಮ್ಮ ಅರ್ಹತೆಗಳನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವ ಮಾಹಿತಿ ನೀಡುತ್ತಿದ್ದೇವೆ.
ಭಾರಿ ಇಳಿಕೆಯಾದ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳ ದರ! ಇಲ್ಲಿದೆ ಹೊಸ ಬೆಲೆಗಳು
ಕ್ರೆಡಿಟ್ ಸ್ಕೋರ್ (Credit score)
ನಿಮ್ಮ ಕ್ರೆಡಿಟ್ ಇತಿಹಾಸವನ್ನು ಸೂಚಿಸುವ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (CIBIL score) ಎನ್ನುವುದು ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಅಥವಾ ಇತರ ಹಣಕಾಸಿನ ವ್ಯವಹಾರಕ್ಕೆ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಿಬಿಲ್ ಸ್ಕೋರ್ ಉತ್ತಮವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ.
ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿ ಇಲ್ಲ ಎಂದಾದರೆ ನೀವು ಬ್ಯಾಂಕಿನಲ್ಲಿ ತೆಗೆದುಕೊಂಡ ಸಾಲವನ್ನು ಹಿಂತಿರುಗಿಸಲು ಅನರ್ಹರು ಎಂದು ಅರ್ಥವಾಗುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕಿನಿಂದ ಸುಲಭವಾಗಿ ಸಾಲ ಸೌಲಭ್ಯ ಕೂಡ ಸಿಗುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಕ್ರೆಡಿಟ್ ಸ್ಕೋರನ್ನು ಉತ್ತಮಗೊಳಿಸಿಕೊಳ್ಳಬೇಕು.
ಚೀ.. ಹಂದಿ ಸಾಕಾಣಿಕೆ ಅಂತ ಹಗುರವಾಗಿ ನೋಡಬೇಡಿ, ಇದೆ ಲಕ್ಷ ಲಕ್ಷಗಳಲ್ಲಿ ಆದಾಯ!
ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ (Credit Card) ಮೂಲಕ ವ್ಯವಹಾರ ಮಾಡುವವರಾಗಿದ್ದರೆ ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡಬೇಕು ಅಥವಾ ನಿಗದಿತ ಸಮಯಕ್ಕಿಂತ ಮೊದಲೇ ಪಾವತಿ ಮಾಡಿದರು ಕೂಡ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿರುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ ಮಿತಿಯ 20- 30% ಕಡಿಮೆ ಕ್ರೆಡಿಟ್ ಬಳಸುವ ಅನುಪಾತವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ಬಾರಿಗೆ ಹಲವು ಕ್ರೆಡಿಟ್ ಉತ್ಪನ್ನಗಳಿಗೆ ಅರ್ಜಿ ಸಲ್ಲಿಸುವುದು ಕ್ರೆಡಿಟ್ ಸ್ಕೋರ್ (Credit Score) ಕಡಿಮೆ ಮಾಡಬಹುದು.
ದೀರ್ಘಾವಧಿಯ ಗೃಹ ಸಾಲ ಆಯ್ಕೆ ಮಾಡಿಕೊಳ್ಳಿ! (Long period home loan)
ಗೃಹ ಸಾಲ (Home Loan) ಮಾಡುವಾಗ ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯ ನೀವು ಎಷ್ಟು ವರ್ಷಗಳ ಅವಧಿಗೆ ಹಣ ಮರುಪಾವತಿ ಮಾಡಲು ಸಾಲ ಪಡೆದುಕೊಳ್ಳುತ್ತೀರಿ ಎಂಬುದು ದೀರ್ಘಾವಧಿಯ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಪಾವತಿಸಬೇಕಾದ ಈ ಎಂ ಐ (EMI) ಮೊತ್ತ ಕಡಿಮೆ ಇರುತ್ತದೆ. ಇದರಿಂದ ನೀವು ಪ್ರತಿ ತಿಂಗಳು ಹೆಚ್ಚು ಆರ್ಥಿಕ ಹೊರೆ ಇಲ್ಲದೆ ಇಎಂಐ ಮೂಲಕ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತದೆ.
ಜಂಟಿ ಗೃಹ ಸಾಲ ತೆಗೆದುಕೊಳ್ಳುವುದು!
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಜಂಟಿಯಾಗಿ ಗೃಹ ಸಾಲ (Home Loan) ತೆಗೆದುಕೊಳ್ಳುವುದಕ್ಕೆ ಅವಕಾಶ ಇರುತ್ತದೆ ತಂದೆ ಮಗ ಗಂಡ ಹೆಂಡತಿ ಹೀಗೆ ಒಟ್ಟಿಗೆ ನೀವು ಗೃಹ ಸಾಲವನ್ನು ತೆಗೆದುಕೊಂಡಾಗ ಇಬ್ಬರ ಆದಾಯವು ಕೂಡ ಇಲ್ಲಿ ಪರಿಗಣಿಸಲಾಗುತ್ತದೆ. ಹಾಗಾಗಿ ಒಬ್ಬರ ಆದಾಯ ಕಡಿಮೆ ಇದ್ದು ಇನ್ನೊಬ್ಬರ ಆದಾಯ ಹೆಚ್ಚಿದ್ದರೆ ಇದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ.
ಗ್ಯಾಸ್ ಸಬ್ಸಿಡಿ ಕುರಿತು ಮೋದಿ ಸರ್ಕಾರದ ಪ್ರಮುಖ ಘೋಷಣೆ! ಇಲ್ಲಿದೆ ಬಿಗ್ ಅಪ್ಡೇಟ್
ಕಡಿಮೆ ಅವಧಿಯ ಇಎಂಐ ಪಾವತಿಸುವುದು!
ಗೃಹ ಸಾಲವನ್ನು ಹತ್ತರಿಂದ ಇಪ್ಪತ್ತು ವರ್ಷಗಳ ಅವಧಿಗೆ ತೆಗೆದುಕೊಳ್ಳಬಹುದು. ಹಾಗಾಗಿ ನೀವು ಇತರ ಯಾವುದೇ ರೀತಿಯ ವಾಹನ ಸಾಲ ಚಿನ್ನದ ಸಾಲ ಮೊದಲಾದ ಸಾಲ ತೆಗೆದುಕೊಂಡಿದ್ದರೆ ಅವುಗಳನ್ನು ಮೊದಲು ತೀರಿಸಿ. ಇದರಿಂದ ನಿಮ್ಮ ಆದಾಯ ನಿಮ್ಮ ಬಳಿಯೇ ಉಳಿಯುತ್ತದೆ ಹಾಗೂ ಗೃಹ ಸಾಲದ ಇ ಎಂಐ ಅನ್ನು ಸುಲಭವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಹೆಚ್ಚುವರಿ ಆದಾಯದ ಮೂಲ!
ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ನಿಮಗೆ ಗೃಹ ಸಾಲವನ್ನು ನೀಡುವುದಕ್ಕೂ ಮೊದಲು ನಿಮ್ಮ ಆದಾಯದ ಪರಿಶೀಲನೆ ನಡೆಸುತ್ತದೆ ಹಾಗಾಗಿ ನೀವು ನಿಮ್ಮ ನಿಮ್ಮ ಆದಾಯದ ಜೊತೆಗೆ ಒಂದಿಷ್ಟು ಬೇರೆಬೇರೆ ಆದಾಯದ ಮೂಲವನ್ನು ಕೂಡ ಹೆಚ್ಚಿಸಿಕೊಂಡರೆ ಸಮಸ್ಯೆ ಇಲ್ಲದೆ ಗೃಹ ಸಾಲವನ್ನು ಬಹಳ ಬೇಗ ಮಂಜೂರು ಮಾಡಿಸಿಕೊಳ್ಳಬಹುದು.
ಗೃಹ ಸಾಲವನ್ನು ತೆಗೆದುಕೊಳ್ಳುವುದಕ್ಕೂ ಮೊದಲು ಸಾಲದ ಮೇಲಿನ ಬಡ್ಡಿ ದರವನ್ನು ಪರಿಶೀಲಿಸಿ. ಇನ್ನು ಮನೆ ಖರೀದಿ ಸಮಯದಲ್ಲಿ ಸ್ಟ್ಯಾಂಪ್ ಡ್ಯೂಟಿ ಶುಲ್ಕ (stamp duty fee) ಪಾವತಿ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಿ ಒಂದು ವೇಳೆ ಪಾವತಿ ಆಗದೆ ಇದ್ದರೆ ಕಡಿಮೆ ಮೊತ್ತದ ಗೃಹ ಸಾಲ ಮಂಜೂರಾಗುತ್ತದೆ. ನೀವು ನಿರ್ಮಾಣ ಮಾಡುವ ಅಥವಾ ಖರೀದಿ ಮಾಡುವ ಮನೆಗಿಂತ ಹೆಚ್ಚಿನ ಮೊತ್ತದ ಸಾಲವನ್ನು ಬ್ಯಾಂಕ್ ನೀಡುವುದಿಲ್ಲ ಎಂಬುದು ಗಮನದಲ್ಲಿರಲಿ. ಹಾಗಾಗಿ ಸರಿಯಾದ ದಾಖಲೆ ಮತ್ತು ಮಾಹಿತಿಗಳನ್ನು ಕೊಡಬೇಕಾಗುತ್ತದೆ.
You can also get a home loan to build your own house, Do the Eligibility Check
ದೀರ್ಘಾವಧಿಯ ಗೃಹ ಸಾಲ ಆಯ್ಕೆ ಮಾಡಿಕೊಳ್ಳಿ! (Long period home loan)



