ಬ್ಯಾಂಕ್ ಚೆಕ್ ಹಿಂಭಾಗದಲ್ಲಿ ಏಕೆ ಸೈನ್ ಮಾಡಬೇಕು! ನಿಜವಾದ ಕಾರಣ ಏನು ಗೊತ್ತಾ?
Bank Cheque Book : ಚೆಕ್ ನಲ್ಲಿ ಇರುವ ಸಹಿ, ಗ್ರಾಹಕರ PAN ಸಂಖ್ಯೆ ಮೊದಲಾದ ದಾಖಲೆಗಳನ್ನು ಪರಿಶೀಲಿಸಿದ ನಂತರವಷ್ಟೇ ಹಣಕಾಸಿನ ವ್ಯವಹಾರವನ್ನು ಮಾಡಲಾಗುತ್ತದೆ.
Bank Cheque Book : ಸಾಮಾನ್ಯವಾಗಿ ನಾವು ದೈನಂದಿನ ಜೀವನದಲ್ಲಿ ಹಲವಾರು ಕೆಲಸಗಳನ್ನು ಮಾಡುತ್ತೇವೆ. ಆದರೆ ಇವೆಲ್ಲ ನಮಗೆ ಒಂದು ಪ್ರಕ್ರಿಯೆ ಆಗಿರುತ್ತೆ ಅಷ್ಟೇ. ಅದಕ್ಕೆ ಕಾರಣ (reason) ಏನು? ನಾವು ಹೀಗೆಯೇ ಯಾಕೆ ಮಾಡಬೇಕು ಎಂದು ಪ್ರಶ್ನೆಯನ್ನು ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ನಾವು ಮಾಡುತ್ತಿರುವ ಕೆಲಸ ಯಾಕೆ ಎನ್ನುವ ವಿಚಾರ ನಮಗೆ ತಿಳಿದರೆ ಆ ಕೆಲಸವನ್ನು ಮಾಡಲು ಇನ್ನಷ್ಟು ಆಸಕ್ತಿ ಮೂಡುತ್ತದೆ.
ಉದಾಹರಣೆಗೆ ನಾವು ಬ್ಯಾಂಕಿನಲ್ಲಿ ಒಂದು ಚೆಕ್ (bank cheque) ಬರೆದು ಹಾಕುತ್ತೇವೆ ಎಂದು ಭಾವಿಸಿ. ಚೆಕ್ ಬರೆಯುವಾಗ, ಅದಕ್ಕೆ ಕೆಲವು ಅದರದ್ದೇ ಆದ ನಿಯಮಗಳು ಇವೆ.
ನಾವು ಚೆಕ್ನಲ್ಲಿ ಒಂದು ಸಣ್ಣ ತಪ್ಪು ಮಾಡಿದರು ಕೂಡ ಆ ಚೆಕ್ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಇಂತಹ ನಿಯಮಗಳನ್ನು ಯಾಕೆ ಮಾಡಿದ್ದಾರೆ ಎನ್ನುವ ಬಗ್ಗೆ ನಮಗೆ ಅರಿವು ಇರುವುದಿಲ್ಲ. ಪ್ರಮುಖ ವಿಚಾರದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಮುಂದೆ ಓದಿ!
ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ! ಈ ತಪ್ಪು ಮಾಡಿದ್ರೆ ಕಟ್ಟಬೇಕು 10,000 ದಂಡ
ಬ್ಯಾಂಕ್ ನಲ್ಲಿ ಚೆಕ್ ನ ನಿಯಮಗಳು! (Bank cheque rules)
ಇಂದು ನಾವು ಹೆಚ್ಚಾಗಿ ಡಿಜಿಟಲ್ ಪೇಮೆಂಟ್ (digital payment) ಅನ್ನು ನೆಚ್ಚಿಕೊಂಡಿದ್ದೇವೆ. ಆನ್ಲೈನ್ (online payment) ಮೂಲಕವೇ ಎಲ್ಲಾ ರೀತಿಯ ಹಣಕಾಸಿನ ವ್ಯವಹಾರವನ್ನು ಕೂಡ ಮಾಡುತ್ತೇವೆ. ಆದಾಗ್ಯೂ ಕೆಲವು ಬ್ಯಾಂಕಿನ ಕೆಲಸಕ್ಕೆ ನಾವು ಚೆಕ್ ಬರೆಯುವ ಅನಿವಾರ್ಯತೆ ಇರುತ್ತದೆ. ದೊಡ್ಡ ದೊಡ್ಡ ಕಂಪನಿ ವ್ಯವಹಾರಗಳನ್ನು ಮಾಡುವಾಗ ಅಥವಾ ದೊಡ್ಡ ವ್ಯಾಪಾರಗಳನ್ನು ಮಾಡುವಾಗ ಬ್ಯಾಂಕಿನ ಚೆಕ್ ಎನ್ನುವುದು ಬಹಳ ಮಹತ್ವದ್ದಾಗಿರುತ್ತದೆ.
ಬ್ಯಾಂಕ್ ನಲ್ಲಿ ಚೆಕ್ ಬರೆಯುವಾಗ ನಮ್ಮ ಹೆಸರು, ದಿನಾಂಕ, ಯಾಕಾಗಿ ಈ ಚೆಕ್ ಬರೆಯುತ್ತಿದ್ದೇನೆ, ಚೆಕ್ ನ ಮೊತ್ತ ಎಷ್ಟು ಎಲ್ಲಾ ಮಾಹಿತಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ನಂತರ ಚೆಕ್ ನ ಬಲಭಾಗದ ಮೂಲೆಯಲ್ಲಿ ಒಂದು ಸಹಿಯನ್ನು ಕೂಡ ಮಾಡಬೇಕು.
ಇಷ್ಟೆಲ್ಲ ಮಾಡಿದ ನಂತರವೂ ಬ್ಯಾಂಕ್ ನ ಸಿಬ್ಬಂದಿಗಳು ಚೆಕ್ ನೀಡಿದರೆ ಹಿಂಭಾಗದಲ್ಲಿಯೂ ಒಂದು ಸಹಿ ಮಾಡುವಂತೆ ಹೇಳುತ್ತಾರೆ ಇದಕ್ಕೆ ನಿಜವಾದ ಕಾರಣ ಏನು ಗೊತ್ತಾ!?
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಆರ್‌ಬಿಐ ಹೊಸ ಸೂಚನೆ! ಇಲ್ಲಿದೆ ಮಾಹಿತಿ
ಚೆಕ್ ನ ಹಿಂಬಾಗದಲ್ಲಿ ಸಹಿ ಮಾಡಲು ಕಾರಣ ಏನು? (Signature on cheque back side)
ನಿಮ್ಮ ಖಾತೆಗೆ ಹಣವನ್ನು ಹಾಕಲು ಅಥವಾ ಹಿಂಪಡೆಯಲು ಬ್ಯಾಂಕ್ ಗೆ ಚೆಕ್ ಅನ್ನು ತೆಗೆದುಕೊಂಡು ಹೋಗುತ್ತೀರಿ. ಬರೆದ ನಂತರ ಅದನ್ನು ಕ್ಯಾಶಿಯರ್ ಗೆ ಕೊಟ್ಟು ಹಣವನ್ನ ಹಿಂಪಡೆಯುತ್ತೀರಿ. ಇದು ಒಂದು ಪ್ರಕ್ರಿಯೆ. ಹಾಗಿದ್ದರೆ ಸರಿ ಒಂದು ವೇಳೆ ಗ್ರಾಹಕ ಪುನಃ ಬಂದು ತನ್ನ ಹಣವನ್ನ ಹಿಂತಿರುಗಿ ಕೊಡುವಂತೆ ಕ್ಯಾಶಿಯರ್ ಅನ್ನು ಕೇಳಿದರೆ ಆತನ ಬಳಿ ಯಾವುದೇ ಪುರಾವೆ ಇರುವುದಿಲ್ಲ.
ಇದಕ್ಕಾಗಿ ಚೆಕ್ ಹಿಂಭಾಗದಲ್ಲಿ ಸಹಿ ಮಾಡಿಸಿಕೊಳ್ಳುತ್ತಾರೆ. ನಿಮ್ಮ ಚೆಕ್ ಗೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳು ಒಳಗೊಂಡಿವೆ ಎಂಬುದನ್ನು ಖಚಿತಪಡಿಸುತ್ತದೆ. ಒಂದು ನಿಯಮವನ್ನ ಪಾಲಿಸುವುದಕ್ಕಾಗಿ ಈ ರೀತಿ ಚೆಕ್ ಹಿಂಭಾಗದಲ್ಲಿ ಸಹಿ ಹಾಕಿಸಿಕೊಳ್ಳುತ್ತಾರೆ.
ಚೆಕ್ ನ ಹಿಂಭಾಗದಲ್ಲಿ ಸಹಿ ಮಾಡಲು ಇನ್ನೊಂದು ಮುಖ್ಯವಾದ ಕಾರಣ ಏನೆಂದರೆ ನೀವು ಟೋಕನೈಸ್ ಮಾಡಿದ ನಂತರ ಚೆಕ್ ಕಳೆದು ಹೋಗಿದೆ ಎಂದು ಭಾವಿಸಿ ಅಂತಹ ಸಂದರ್ಭದಲ್ಲಿ ನಿಮ್ಮ ಪಡೆದುಕೊಂಡ ವ್ಯಕ್ತಿ ಬ್ಯಾಂಕಿಗೆ ಬಂದು ಹಣ ವಿತ್ ಡ್ರಾ ಮಾಡಬಹುದು.
ಇನ್ಮುಂದೆ ಇಂತಹ ಜನರಿಗೆ ಗ್ಯಾಸ್ ಸಬ್ಸಿಡಿ ಹಣ ಸಿಗಲ್ಲ! ಸರ್ಕಾರ ಖಡಕ್ ನಿರ್ಧಾರ
ಹಿಂಭಾಗದಲ್ಲಿ ಸಹಿ ಮಾಡದೆ ಇದ್ದರೆ ವಂಚನೆ ಆಗಬಹುದು. ಚೆಕ್ ಹಿಂಭಾಗದಲ್ಲಿ ನೀವು ಸಹಿ ಮಾಡಿದ್ದು, ನಿಮ್ಮ ಕಳೆದು ಹೋದ ಚೆಕ್ ಅನ್ನು ಬ್ಯಾಂಕಿಗೆ ಯಾರು ತೆಗೆದುಕೊಂಡು ಬಂದಿದ್ದಾರೋ ಆ ವ್ಯಕ್ತಿಗೆ ಮತ್ತೊಮ್ಮೆ ಸಹಿ ಮಾಡಲು ಹೇಳಿದಾಗ, ಆತನಿಗೆ ಸಹಿ ಮಾಡಲು ಗೊತ್ತಿಲ್ಲದೆ ಇದ್ದರೆ ಸಿಕ್ಕಿಹಾಕಿಕೊಳ್ಳುತ್ತಾನೆ.
ಚೆಕ್ ನಲ್ಲಿ ಇರುವ ಸಹಿ, ಗ್ರಾಹಕರ PAN ಸಂಖ್ಯೆ ಮೊದಲಾದ ದಾಖಲೆಗಳನ್ನು ಪರಿಶೀಲಿಸಿದ ನಂತರವಷ್ಟೇ ಹಣಕಾಸಿನ ವ್ಯವಹಾರವನ್ನು ಮಾಡಲಾಗುತ್ತದೆ. ಬ್ಯಾಂಕ್ ತನ್ನ ಹಾಗೂ ಗ್ರಾಹಕರ ಹಿತ ದೃಷ್ಟಿಯಿಂದ ಈ ಎಲ್ಲ ನಿಯಮಗಳನ್ನು ಮಾಡಿದೆ ಎನ್ನಬಹುದು. ಹಾಗಾಗಿ ಮುಂದಿನ ಬಾರಿ ಬ್ಯಾಂಕಿನಲ್ಲಿ ಚೆಕ್ ಬರೆಯುವಾಗ ಚೆಕ್ ನ ಹಿಂಭಾಗದಲ್ಲಿ ಸಹಿ ಮಾಡುವುದನ್ನು ಮಾತ್ರ ಮರೆಯಬೇಡಿ.
Why sign on the back of a bank Cheque, Do you know the reason