Story Highlights
ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿಕೊಂಡರೆ ನೀವು ಎಷ್ಟು ದಂಡ ಪಾವತಿ ಮಾಡಬೇಕು ಗೊತ್ತಾ?
ಸಾಮಾನ್ಯವಾಗಿ ನೀವು ಬ್ಯಾಂಕಿನಲ್ಲಿ ಖಾತೆ ತೆರೆದಾಗ (bank account) ಹಾಗೂ ಠೇವಣಿ (deposit) ಇಟ್ಟಾಗ ಬ್ಯಾಂಕ್ ಗಳು ನಿಮಗೆ ಪಾಸ್ ಬುಕ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (Credit Card and Debit Card) ಜೊತೆಗೆ ಚೆಕ್ ಬುಕ್ ಅನ್ನು ಕೂಡ ನೀಡುತ್ತವೆ.
ಈ ರೀತಿ ಚೆಕ್ ಬುಕ್ (bank cheque book) ತೆಗೆದುಕೊಂಡು ಪ್ರತಿಯೊಬ್ಬರು ಚೆಕ್ ಬಳಸುತ್ತಾರೆ ಎಂದಲ್ಲ ಆದರೆ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ತೊಡಗಿರುವವರು ವ್ಯಾಪಾರಸ್ಥರು ಚೆಕ್ ನ್ನು ಬಳಸುತ್ತಾರೆ.
ಆದರೆ ಬ್ಯಾಂಕ್ ಚೆಕ್ ಬಳಸುವಾಗ ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚೆಕ್ ಬೌನ್ಸ್ (cheque bounce) ಪ್ರಕರಣಗಳು ಕೂಡ ಜಾಸ್ತಿ ಆಗುತ್ತಿದ್ದು ಚೆಕ್ ಬೌನ್ಸ್ ಆದ್ರೆ ಆ ವ್ಯಕ್ತಿಗೆ ಅಂದರೆ ಚೆಕ್ ಕೊಟ್ಟ ವ್ಯಕ್ತಿಗೆ ಜೈಲು ಶಿಕ್ಷೆ ಜೊತೆಗೆ ಭಾರಿ ದಂಡವನ್ನು ಕೂಡ ವಿಧಿಸಲಾಗುತ್ತದೆ.
ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ; ಪ್ರತಿದಿನ ಸಿಗಲಿದೆ ₹500 ರೂಪಾಯಿ!
ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ ಬಾಲಿವುಡ್ ನಿರ್ದೇಶಕ!
ಬಾಲಿವುಡ್ ನಲ್ಲಿ ಖಾಕಿ, ದಿ ಲೆಜೆಂಡ್ ಆಫ್ ದಿ ಭಗತ್ ಸಿಂಗ್, ಲಜ್ಜಾ, ದಾಮಿನಿ ಮೊದಲದ ಸಿನಿಮಾಗಳನ್ನು ನಿರ್ದೇಶಕ ಖ್ಯಾತ ನಿರ್ದೇಶಕ ರಾಜಕುಮಾರ ಸಂತೋಷಿ (Rajkumar Santoshi) ಇದೀಗ ಚೆಕ್ ಬೌನ್ಸ್ ಪ್ರಕರಣದಿಂದಾಗಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ, ಜೊತೆಗೆ ಎರಡು ಕೋಟಿ ರೂಪಾಯಿಗಳವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.
ಈ ಪ್ರಕರಣ ಮುನ್ನಡೆಗೆ ಬಂದ ನಂತರ ಸಂತೋಷ ಅವರು ಅರೆಸ್ಟ್ ಆದ 24 ಗಂಟೆಗಳಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದರು. ಆದರೆ ಈಗ ಪ್ರಕರಣ ಸಾಬೀತಾಗಿದ್ದು ಜೈಲು ಶಿಕ್ಷೆ ಅನುಭವಿಸುವಂತೆ ಆಗಿದೆ.
ಬ್ಯಾಂಕ್ ಚೆಕ್ ಹಿಂಭಾಗದಲ್ಲಿ ಏಕೆ ಸೈನ್ ಮಾಡಬೇಕು! ನಿಜವಾದ ಕಾರಣ ಏನು ಗೊತ್ತಾ?
ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ ಬಾಲಿವುಡ್ ನ ಖ್ಯಾತ ನಿರ್ದೇಶಕ (Director) ಮತ್ತು ನಿರ್ಮಾಪಕ ರಾಜಕುಮಾರ ಸಂತೋಷಿ ಅವರು ಸಿನಿಮಾ ಮಾಡಿಕೊಡುವುದಾಗಿ ಹೇಳಿ, ಜಾಮ್ ನಗರದ ಪ್ರಮುಖ ಕೈಗಾರಿಕೋದ್ಯಮಿ, ಶಿಪ್ಪಿಂಗ್ ಮ್ಯಾಗ್ನೆಟ್ ಅಶೋಕ್ ಲಾಲ್ ಅವರ ಬಳಿ 1.1 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರುತ್ತಾರೆ. ಹಾಗೂ ಇದಕ್ಕೆ ಬದಲಾಗಿ 11 ಚೆಕ್ ಗಳನ್ನು ನೀಡಿದರು.
ಆದರೆ ಈ ಚೆಕ್ ಗಳೆಲ್ಲವೂ ಬೌನ್ಸ್ ಆಗಿವೆ. ಎಷ್ಟೋ ಬಾರಿ ಕರೆ ಮಾಡಿ ಅಶೋಕ ಲಾಲ್ ಅವರು ಮಾತನಾಡಲು ಪ್ರಯತ್ನಿಸಿದರು ರಾಜಕುಮಾರ ಅವರು ಉತ್ತರ ನೀಡಿದೆ ಇರುವ ಹಿನ್ನೆಲೆಯಲ್ಲಿ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ (negotiable instrument Act) ಪ್ರಕರಣ ದಾಖಲಿಸಲಾಗಿತ್ತು.
ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ! ಈ ತಪ್ಪು ಮಾಡಿದ್ರೆ ಕಟ್ಟಬೇಕು 10,000 ದಂಡ
ಯಾವ ಸಂದರ್ಭದಲ್ಲಿ ಚೆಕ್ ಬೌನ್ಸ್ ಆಗಬಹುದು?
ಒಬ್ಬ ವ್ಯಕ್ತಿಗೆ ಚೆಕ್ ಕೊಟ್ಟು ನಿಮ್ಮ ಖಾತೆಯಲ್ಲಿ ಅಷ್ಟು ಬ್ಯಾಲೆನ್ಸ್ ಇಲ್ಲದೆ ಇದ್ದರೆ
ಚೆಕ್ ನಲ್ಲಿ ಇರುವ ಸಹಿ ಮ್ಯಾಚ್ ಆಗದೆ ಇದ್ದರೆ
ಚೆಕ್ ನಕಲಿ ಎನ್ನುವ ಶಂಕೆ ಬಂದರೆ
ಚೆಕ್ ನಲ್ಲಿ ಕಂಪನಿಯ ಮುದ್ರೆ ಇಲ್ಲದೆ ಇದ್ದರೆ
ಚೆಕ್ ನಲ್ಲಿ ಖಾತೆಯ ಸಂಖ್ಯೆ ತಪ್ಪಾದಾಗ
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡುವವರಿಗೆ ಆರ್‌ಬಿಐ ಹೊಸ ಸೂಚನೆ! ಇಲ್ಲಿದೆ ಮಾಹಿತಿ
ಚೆಕ್ ಬೌನ್ಸ್ ಆದರೆ ಎಷ್ಟು ದಂಡ ಪಾವತಿಸಬೇಕು ಗೊತ್ತಾ?
ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881, ಸೆಕ್ಷನ್ 138 ಅಡಿಯಲ್ಲಿ ಆದರೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಚೆಕ್ ನಲ್ಲಿ ಬರೆದಿರುವಷ್ಟು ಮೊತ್ತ ಅಥವಾ ಅದಕ್ಕಿಂತ ಎರಡು ಪಟ್ಟು ಹೆಚ್ಚಿನ ಮೊತ್ತವನ್ನು ದಂಡವಾಗಿ ಪಾವತಿಸಬೇಕು. ಅಥವಾ ಎರಡೂ ಶಿಕ್ಷೆಯನ್ನು ಅನುಭವಿಸ ಬೇಕಾಗಬಹುದು. ಚೆಕ್ ಬೌನ್ಸ್ ಯಾವ ರೀತಿಯ ಪ್ರಕರಣ ಯಾರಿಗೆ ಎಷ್ಟು ಹಾನಿಯಾಗಿದೆ ಎನ್ನುವುದರ ಆಧಾರದ ಮೇಲೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
How much is the penalty if your Cheque bounce