ಥಟ್ ಅಂತ ಸಿಗುತ್ತೆ ಸಾಲ! ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ

Credit Score for Loan : ನೀವು ಈ ರೀತಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಂಡರೆ ಸುಲಭವಾಗಿ ಸಾಲ ಪಡೆಯಬಹುದು!

Credit Score for Loan : ಸಾಕಷ್ಟು ಅನಿವಾರ್ಯತೆಯ ಸಂದರ್ಭದಲ್ಲಿ ನಮಗೆ ಬ್ಯಾಂಕ್ನಿಂದ ವಯಕ್ತಿಕ ಸಾಲ (personal loan) ಅಥವಾ ಇತರ ಸಾಲ ಪಡೆದುಕೊಳ್ಳುವ ಸಂಭವ ಬರಬಹುದು.

ಆದರೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗಬೇಕು ಅಂದ್ರೆ ನಮ್ಮ ಕ್ರೆಡಿಟ್ ಸ್ಕೋರ್ (credit score) ಉತ್ತಮವಾಗಿರಬೇಕು, ಒಂದು ವೇಳೆ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (CIBIL score) ಚೆನ್ನಾಗಿ ಇಲ್ಲದೆ ಇದ್ರೆ ಸುಲಭವಾಗಿ ಸಾಲ ಸೌಲಭ್ಯ ಸಿಗುವುದಿಲ್ಲ.

ಸಾಲ ಮರುಪಾವತಿ ಮಾಡಲು ನಿಮಗೆ ಸಾಮರ್ಥ್ಯ ಇದೆ ಎಂದು ಬ್ಯಾಂಕ್ ಪರಿಗಣಿಸುವುದಿಲ್ಲ. ಹಾಗಾಗಿ ನೀವು ನಿಮ್ಮ ಹಣಕಾಸಿನ ವ್ಯವಹಾರದ ಮೂಲಕ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು.

ಥಟ್ ಅಂತ ಸಿಗುತ್ತೆ ಸಾಲ! ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ - Kannada News

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ? ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ?

ಏನಿದು ಕ್ರೆಡಿಟ್ ಸ್ಕೋರ್?

ವ್ಯಕ್ತಿಯ ಕ್ರೆಡಿಟ್ ಇತಿಹಾಸದ ಮೂರು ಅಂಕೆಗಳ ಸಾರಾಂಶವೇ ಕ್ರೆಡಿಟ್ ಸ್ಕೋರ್ ಎನ್ನಬಹುದು. ಒಬ್ಬ ವ್ಯಕ್ತಿಯ ಟ್ರಾನ್ಸ್ ಯೂನಿಯನ್ ಕ್ರೆಡಿಟ್ ಸ್ಕೋರ್ 300 ರಿಂದ 900 ವರೆಗೆ ಇರುತ್ತದೆ.

ಸಾಲಕ್ಕೆ ಕ್ರೆಡಿಟ್ ಸ್ಕೋರ್ ಯಾಕೆ ಅಗತ್ಯ? (Why credit score is important for loan)

ಸಾಲದಲ್ಲಿ ಎರಡು ರೀತಿಯ ಸಾಲಗಳಿಗೆ ಒಂದು ಸುರಕ್ಷಿತ ಸಾಲ (secured loan) ಇನ್ನೊಂದು ಅಸುರಕ್ಷಿತ ಸಾಲ (unsecured loan) ಸುರಕ್ಷಿತ ಸಾಲದಲ್ಲಿ ಸಾಲ ಮಾಡುವ ವ್ಯಕ್ತಿಯ ಆಸ್ತಿ ಪತ್ರ ಅಥವಾ ಇತರ ಅಡಮಾನ ಆಧಾರದ ಮೇಲೆ ಸಾಲ ನೀಡಲಾಗುತ್ತದೆ.

ಉದಾಹರಣೆಗೆ ಗೃಹ ಸಾಲ (Home Loan), ವಾಹನ ಸಾಲ (Vehicle Loan), ಚಿನ್ನದ ಮೇಲಿನ ಸಾಲ (Gold Loan) ಮೊದಲಾದವುಗಳು ಸುರಕ್ಷಿತ ಸಾಲವಾಗಿದೆ. ಇನ್ನು ಎರಡನೆಯದಾಗಿ ಅಸುರಕ್ಷಿತ ಸಾಲ.. ಇದಕ್ಕೆ ಯಾವುದೇ ಮೇಲಾದಾರವಿಲ್ಲದೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ; ಪ್ರತಿದಿನ ಸಿಗಲಿದೆ ₹500 ರೂಪಾಯಿ!

ಕ್ರೆಡಿಟ್ ಕಾರ್ಡ್ ಹಾಗೂ ವೈಯಕ್ತಿಕ ಸಾಲಗಳು ಅಸುರಕ್ಷಿತ ಸಾಲ ಎನಿಸಿಕೊಳ್ಳುತ್ತವೆ. ಹೀಗಾಗಿ ಬ್ಯಾಂಕುಗಳು ಮತ್ತು NBFC ಗಳು ಅಸುರಕ್ಷಿತ ಸಾಲವನ್ನು ನೀಡುವುದಕ್ಕೆ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು ಪರಿಗಣಿಸುತ್ತವೆ. ಹಾಗಾಗಿ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಕನಿಷ್ಠ 750 ರಿಂದ 900ರವರೆಗೆ ಇದ್ದರೆ ಸುಲಭ ಸಾಲ ಸಿಗುತ್ತದೆ.

credit scoreಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ?

ಸರಿಯಾದ ಸಮಯಕ್ಕೆ ಮರುಪಾವತಿ!
ನೀವು ಈಗಾಗಲೇ ಯಾವುದೇ ವಸ್ತು ಖರೀದಿ ಅಥವಾ ಸಾಲ ಪಡೆದುಕೊಂಡು ಪಾವತಿ ಮಾಡುತ್ತಿದ್ದರೆ ಅದನ್ನ ಸರಿಯಾದ ಸಮಯಕ್ಕೆ ಪಾವತಿ ಮಾಡಿ ಜೊತೆಗೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ಅದರ ಬಿಲ್ ಅನ್ನು ಕೂಡ ದಿನಾಂಕ ಮುಗಿಯುವುದರ ಒಳಗೆ ಪಾವತಿ ಮಾಡಿ.

ಈ ರೀತಿ ಮಾಡುವುದರಿಂದ ಆಟೋಮ್ಯಾಟಿಕ್ ಆಗಿ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ. ಜವಾಬ್ದಾರಿಯುತ ಸಾಲಗಾರ ಎಂದು ನಿಮಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ಬ್ಯಾಂಕ್ ಚೆಕ್ ಹಿಂಭಾಗದಲ್ಲಿ ಏಕೆ ಸೈನ್ ಮಾಡಬೇಕು! ನಿಜವಾದ ಕಾರಣ ಏನು ಗೊತ್ತಾ?

ಕಡಿಮೆ ಅವಧಿಯಲ್ಲಿ ಹೆಚ್ಚು ಸಾಲಕ್ಕೆ ಅರ್ಜಿ!

ಕಡಿಮೆ ಅವಧಿಯಲ್ಲಿ ಅಂದರೆ ಅಲ್ಪಾವಧಿಯಲ್ಲಿ ಹೆಚ್ಚು ಬೇರೆ ಬೇರೆ ರೀತಿಯ ಸಾಲಕ್ಕೆ ಹಾಗೂ ಕ್ರೆಡಿಟ್ ಕಾರ್ಡ್ ಗಳಿಗೆ ಅಪ್ಲೈ ಮಾಡುವುದನ್ನು ತಪ್ಪಿಸಬೇಕು.

ಸುರಕ್ಷಿತ ಮತ್ತು ಅಸುರಕ್ಷಿತ ಲೋನ್ ಗಳನ್ನು ಮಿಶ್ರಣಗೊಳಿಸುವುದು!

ಸುರಕ್ಷಿತ ಮತ್ತು ಅಸುರಕ್ಷಿತ ಎರಡು ರೀತಿಯ ಲೋನ್ ತೆಗೆದುಕೊಂಡಿದ್ದರೆ ಒಂದಕ್ಕೊಂದು ಮ್ಯಾನೇಜ್ ಮಾಡುವುದರ ಮೂಲಕ ಕ್ರೆಡಿಟ್ ಸ್ಕೋರ್ ಸ್ಥಿರವಾಗಿರುವಂತೆ ಮಾಡಿಕೊಳ್ಳುವುದು.

Here’s how to boost your credit score to Get Loan

Follow us On

FaceBook Google News

Here's how to boost your credit score to Get Loan