ಮನೆ ಬಾಡಿಗೆಗೆ ನೀಡಿರುವ ಓನರ್ ಗಳಿಗೆ ಮಹತ್ವದ ಅಪ್ಡೇಟ್! ತಪ್ಪದೆ ತಿಳಿಯಿರಿ
ಬಾಡಿಗೆ ಮನೆ ಒಪ್ಪಂದ ಒಂದು ವರ್ಷದ ಬದಲಿಗೆ 11 ತಿಂಗಳು ಮಾತ್ರ ಇರುತ್ತೆ ಯಾಕೆ ಗೊತ್ತಾ?
ನಾವು ದುಡಿಯುವುದಕ್ಕಾಗಿಯೋ ಅಥವಾ ಉನ್ನತ ವಿದ್ಯಾಭ್ಯಾಸ (higher education) ಮಾಡುವುದಕ್ಕಾಗಿಯೋ ಹಳ್ಳಿಯಿಂದ ನಗರಕ್ಕೆ ವಲಸೆ ಬರುವುದು ಸಹಜ. ಈ ರೀತಿ ಒಂದು ಊರಿಂದ ಇನ್ನೊಂದು ಊರಿಗೆ ಬಂದು ಜೀವನ ನಡೆಸಬೇಕು ಅಂದ್ರೆ ಉಳಿದುಕೊಳ್ಳಲು ಒಂದು ವಸತಿ ವ್ಯವಸ್ಥೆ ಆಗಲೇಬೇಕು.
ಇಂದು ಸಾಕಷ್ಟು ಜನ ವಸತಿಗಾಗಿ ಪಿಜಿ ಅಥವಾ ಹಾಸ್ಟೆಲ್ (hostel) ಅವಲಂಬಿಸಿದರೆ ಇನ್ನೂ ಸಾಕಷ್ಟು ಜನ ಬಾಡಿಗೆ ಮನೆಯಲ್ಲಿ (Rent House) ಉಳಿದುಕೊಳ್ಳುತ್ತಾರೆ.
ಸರ್ಕಾರದ ಹೊಸ ಯೋಜನೆ! ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ಪಡೆಯಿರಿ
ಇನ್ನು ಉಳಿದುಕೊಳ್ಳುವುದಕ್ಕೆ ಬಾಡಿಗೆ ಮನೆ (rented house) ತೆಗೆದುಕೊಂಡರೆ ಮನೆಯ ಮಾಲೀಕ (house owner) ಮತ್ತು ಬಾಡಿಗೆ ಪಡೆದುಕೊಳ್ಳುವ ವ್ಯಕ್ತಿಯ ನಡುವೆ ಒಂದು ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ. ಇದನ್ನು ರೆಂಟ್ ಅಗ್ರಿಮೆಂಟ್ (rent agreement) ಎಂದು ಕರೆಯುತ್ತಾರೆ.
ಈ ರೀತಿ ರೆಂಟ್ ಅಗ್ರಿಮೆಂಟ್ ಮಾಡಿಸಿಕೊಂಡಾಗ ಗಮನಿಸಿ ಇಲ್ಲದೆ ಇರಬಹುದು. ರೆಂಟ್ ಅಗ್ರಿಮೆಂಟ್ ಯಾವಾಗಲೂ ಒಂದು ವರ್ಷಕ್ಕೆ ಸೀಮಿತವಾಗಿರುವುದಿಲ್ಲ. ಮೊದಲಿಗೆ ಕೇವಲ 11 ತಿಂಗಳಲ್ಲಿ ಮಾತ್ರ ಮಾಡಲಾಗುತ್ತದೆ. 11 ತಿಂಗಳಾದ ನಂತರ ಒಪ್ಪಂದ ಪತ್ರವನ್ನು ರಿನಿವಲ್ ಮಾಡಲಾಗುತ್ತದೆ. ಈ ರೀತಿ 11 ತಿಂಗಳಿಗೆ ಯಾಕೆ ರೆಂಟ್ ಅಗ್ರಿಮೆಂಟ್ ಇರುತ್ತೆ ಗೊತ್ತಾ?
ಥಟ್ ಅಂತ ಸಿಗುತ್ತೆ ಸಾಲ! ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ
ಭಾರತೀಯ ನೊಂದಾವಣಿ ಕಾಯ್ದೆ ಪ್ರಕಾರ 12 ತಿಂಗಳು ಯಾವುದೇ ಆಸ್ತಿಯ ಬಾಡಿಗೆ ಅಥವಾ ಖರೀದಿ ಮಾಡಿದರೆ ಅದನ್ನ ಅಧಿಕೃತವಾಗಿ ನೋಂದಾಯಿಸಿಕೊಳ್ಳುವುದು ಅತ್ಯಗತ್ಯ. ಈ ರೀತಿ ನೋಂದಾವಣೆ ಮಾಡಿಕೊಳ್ಳುವ ಸಮಯದಲ್ಲಿ, ಸ್ಟ್ಯಾಂಪ್ ಡ್ಯೂಟಿ ಶುಲ್ಕ ಪಾವತಿಸಬೇಕು.
ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ರೆಂಟ್ ಅಗ್ರಿಮೆಂಟ್ ಅನ್ನು ಕೇವಲ ಹನ್ನೊಂದು ತಿಂಗಳಿಗೆ ಮಾಡಲಾಗುತ್ತದೆ. 11 ತಿಂಗಳು ಒಪ್ಪಂದ ಯಾವುದೇ ಕಾನೂನು ಬಾಧ್ಯತೆಗೆ ಒಳಪಡದೆ ಇರುವುದರಿಂದ ಈ ರೀತಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.
ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ? ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ?
ಬಾಡಿಗೆ ಒಪ್ಪಂದ 5 ವರ್ಷ ಅಥವಾ 10 ವರ್ಷಕ್ಕೆ ಮಾಡಿಕೊಂಡಿದ್ದರೆ 3% stamp duty fee ಪಾವತಿಸಬೇಕಾಗುತ್ತದೆ. 20 ವರ್ಷಗಳಿಗಿಂತ ಕಡಿಮೆ ಅವಧಿಯ ಒಪ್ಪಂದಕ್ಕೆ 6% ಸ್ಟಾಂಪ್ ಡ್ಯೂಟಿ ಶುಲ್ಕ ಪಾವತಿಸಬೇಕು. ಅಂದರೆ ಈ ಶುಲ್ಕ ಸಾವಿರ ರೂಪಾಯಿಗಳವರೆಗೂ ಇರಬಹುದು.
ಇನ್ನು ಇದರ ಜೊತೆಗೆ 12 ವರ್ಷಗಳ ವರೆಗೆ ಒಂದೇ ಮನೆಯಲ್ಲಿ ಒಬ್ಬ ವ್ಯಕ್ತಿ ವಾಸಿಸಿದರೆ ಆತ ಆ ಮನೆಯ ವಾರಿಸುದಾರ ಆಗಬಹುದು. ಎನ್ನುವ ಕಾನೂನು ಇರುವುದರಿಂದ ಬಾಡಿಗೆ ಮನೆಯಲ್ಲಿ ಒಂದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡರೆ ಅದು ನಿರಂತರವಾಗಿ 12 ವರ್ಷಗಳ ಅವಧಿಯವರೆಗೂ ಆಗಬಹುದು.
ಆದರೆ 11 ತಿಂಗಳ ಒಪ್ಪಂದದಿಂದಾಗಿ ಪ್ರತಿವರ್ಷ ಹೊಸ ಒಪ್ಪಂದ ಪತ್ರ ಮಾಡಿಸಲಾಗುತ್ತದೆ. ಹೀಗಾಗಿ 12 ವರ್ಷ ಅಲ್ಲ, 20 ವರ್ಷ ಒಂದೇ ಸ್ಥಳದಲ್ಲಿ ಒಬ್ಬ ವ್ಯಕ್ತಿ ವಾಸಿಸಿದರು ಕೂಡ ಒಪ್ಪಂದದ ಪ್ರಕಾರ ಪ್ರತಿ ವರ್ಷ ಹೊಸ ವರ್ಷವೇ ಆಗಿರುತ್ತದೆ.
Important update for house Owners who Given House for rent