ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5,000 ರೂಪಾಯಿ ಪಿಂಚಣಿ!
Pension Scheme : ನಿವೃತ್ತಿಯ ನಂತರ ವೃದ್ಧರು ಯಾರ ಮುಂದೆಯೂ ಕೈ ಚಾಚದೆ, ಆರ್ಥಿಕವಾಗಿ ಸಮಸ್ಯೆ (financial problem) ಅನುಭವಿಸಬಾರದು ಎನ್ನುವ ಕಾರಣಕ್ಕೆ ಪಿಂಚಣಿ ಯೋಜನೆ (pension schemes) ಯನ್ನು ಸರ್ಕಾರ ಆರಂಭಿಸಿದೆ
ಪಿಂಚಣಿ ಯೋಜನೆಯಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳು ಇದ್ದು, ನೀವು ಎಲ್ಲಿ ಎಷ್ಟು ಹೂಡಿಕೆ ಮಾಡುತ್ತೀರಾ ಎನ್ನುವುದರ ಆಧಾರದ ಮೇಲೆ ನೀವು ಪ್ರತಿ ತಿಂಗಳು ಅಥವಾ ವರ್ಷಕ್ಕೆ ಎಷ್ಟು ಪಿಂಚಣಿ ಪಡೆದುಕೊಳ್ಳಬಹುದು ಎನ್ನುವುದು ನಿರ್ಧಾರವಾಗುತ್ತದೆ.
ಎಲ್ಲಾ ವರ್ಗದ ಜನರು ಎಲ್ಲಾ ಕಡೆಯಲ್ಲಿಯೂ ಕೆಲಸ ಮಾಡಿದ ನಂತರ ಪಿಂಚಣಿ ಸೌಲಭ್ಯ ನೀಡಲಾಗುವುದಿಲ್ಲ. ಸರ್ಕಾರಿ ನೌಕರರು ಹಾಗೂ ಕೆಲವು ಖಾಸಗಿ ಕಂಪನಿಗಳನ್ನು ಹೊರತುಪಡಿಸಿ ಬೇರೆ ಎಲ್ಲೂ ಪಿಂಚಣಿ ಸೌಲಭ್ಯ ಇರುವುದಿಲ್ಲ. ಇದನ್ನು ಪರಿಗಣಿಸಿ ಸರ್ಕಾರವೇ ಒಂದು ಪಿಂಚಣಿ ಯೋಜನೆಯ ಮೂಲಕ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸುತ್ತಿದೆ.
ಫಿಕ್ಸೆಡ್ ಡೆಪಾಸಿಟ್ ಮೇಲೆ ಅತಿ ಹೆಚ್ಚು ಬಡ್ಡಿ ದರ ನೀಡೋ ಬ್ಯಾಂಕುಗಳು ಇವು
ಅಟಲ್ ಪಿಂಚಣಿ ಯೋಜನೆ ( APY) ;
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಎಪಿ ವೈ ಅನ್ನು ನಿರ್ವಹಿಸುತ್ತದೆ. ಯೋಜನೆ ಅಡಿಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಉಳಿತಾಯ ಮಾಡಿದರೆ ಪ್ರತಿ ತಿಂಗಳು 5000 ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.
210ಗಳ ಹೂಡಿಕೆ ಮಾಡಿದ್ರೆ ನಿಮ್ಮ ಬದುಕು ಬಂಗಾರ!
ಅಟಲ್ ಪಿಂಚಣಿ ಯೋಜನೆ (Atal pension scheme) ಯಲ್ಲಿ ನೀವು ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ 1,000 ದಿಂದ 5,000 ರೂ. ವರೆಗೆ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.
ಪ್ರತಿದಿನ 87 ಉಳಿತಾಯ ಮಾಡಿದ್ರೆ 11 ಲಕ್ಷ ರೂಪಾಯಿ ನಿಮ್ಮದಾಗುತ್ತೆ! ಅದ್ಭುತ ಯೋಜನೆ
ಯಾರು ಈ ಪಿಂಚಣಿ ಯೋಜನೆಗೆ ಅರ್ಹರು?
18ರಿಂದ 44 ವರ್ಷ ವಯಸ್ಸಿನವರು ಪಿಂಚಣಿ ಯೋಜನೆಗೆ ಹೂಡಿಕೆ ಮಾಡಬಹುದು. ಅಕ್ಟೋಬರ್ 1,2022ರ ಅಧಿಸೂಚನೆಯ ಪ್ರಕಾರ, ಆದಾಯ ತೆರಿಗೆ ಪಾವತಿ ಮಾಡದೆ ಇರುವವರು ಈ ಯೋಜನೆಗೆ ಅರ್ಹರು.
ಮನೆ ಬಾಡಿಗೆಗೆ ನೀಡಿರುವ ಓನರ್ ಗಳಿಗೆ ಮಹತ್ವದ ಅಪ್ಡೇಟ್! ತಪ್ಪದೆ ತಿಳಿಯಿರಿ
ಎಷ್ಟು ಹೂಡಿಕೆ ಮಾಡಬೇಕು?
APY ಸ್ಕೀಮ್ ನಲ್ಲಿ ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುತ್ತೀರಿ ಎನ್ನುವುದರ ಆಧಾರದ ಮೇಲೆ, ನಿಮ್ಮ ಹೂಡಿಕೆಯ ಮೊತ್ತ ನಿರ್ಧಾರವಾಗುತ್ತದೆ. ಉದಾಹರಣೆಗೆ ನೀವು ನಿಮ್ಮ 18ನೇ ವರ್ಷ ವಯಸ್ಸಿನಲ್ಲಿ 60 ವರ್ಷಗಳ ನಂತರ 5000 ಪಿಂಚಣಿ ಪಡೆದುಕೊಳ್ಳಲು ಹೂಡಿಕೆ ಆರಂಭಿಸುವುದಾದರೆ ಪ್ರತಿ ತಿಂಗಳು 210 ರೂಪಾಯಿಗಳು, 3 ತಿಂಗಳಿಗೊಮ್ಮೆ 626, 6 ತಿಂಗಳಿಗೆ 1239 ಪಾವತಿ ಮಾಡಬೇಕು. ಇನ್ನು ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿಗಳ ಪಿಂಚಣಿ ಪಡೆದುಕೊಳ್ಳುವುದಿದ್ದರೆ, ಪ್ರತಿ ತಿಂಗಳು 42 ರೂಪಾಯಿಗಳನ್ನು ಉಳಿತಾಯ ಮಾಡಿದರೆ ಸಾಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಿ.
ಥಟ್ ಅಂತ ಸಿಗುತ್ತೆ ಸಾಲ! ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳೋಕೆ ಹೀಗೆ ಮಾಡಿ
Senior citizens will get Rs 5,000 pension every month in this scheme
Our Whatsapp Channel is Live Now 👇