ಫಿಕ್ಸೆಡ್ ಡೆಪಾಸಿಟ್ ಮೇಲೆ ಅತಿ ಹೆಚ್ಚು ಬಡ್ಡಿ ದರ ನೀಡೋ ಬ್ಯಾಂಕುಗಳು ಇವು

Fixed Deposit : ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಬಡ್ಡಿ ದರ (rate of interest) ವನ್ನು ನೀಡುತ್ತವೆ. ಸ್ಥಿರ ಠೇವಣಿಯಲ್ಲಿ ಬಡ್ಡಿದರ ಕನಿಷ್ಠ 3 - 4.26% ನಿಂದ ಆರಂಭವಾಗುತ್ತದೆ

Fixed Deposit : ಭವಿಷ್ಯಕ್ಕಾಗಿ ನೀವು ಹಣ ಹೂಡಿಕೆ (Investment) ಮಾಡಲು ಪ್ರಯತ್ನಿಸುತ್ತಿದ್ದರೆ ಅಥವಾ ನಿಮ್ಮ ಬಳಿ ಇರುವ ಹಣವನ್ನು ಸ್ಥಿರ ಠೇವಣಿ (fixed deposit) ಇಟ್ಟು ಹಣ ಹೆಚ್ಚಾಗುವಂತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಲೇಖನವನ್ನು ಒಮ್ಮೆ ಓದಿ. ಯಾವ ಬ್ಯಾಂಕ್ ನಲ್ಲಿ, ಇರೋ ಠೇವಣಿಗೆ ಎಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಬಡ್ಡಿ ದರ (rate of interest) ವನ್ನು ನೀಡುತ್ತವೆ. ಖಾಸಗಿ ವಲಯದ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಬಡ್ಡಿದರಕ್ಕೂ ಸರ್ಕಾರಿ ವಲಯದ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದರೆ ಸಿಗುವ ಬಡ್ಡಿದರಕ್ಕೂ ವ್ಯತ್ಯಾಸವಿದೆ. ಸ್ಥಿರ ಠೇವಣಿಯಲ್ಲಿ ಬಡ್ಡಿದರ ಕನಿಷ್ಠ 3 – 4.26% ನಿಂದ ಆರಂಭವಾಗುತ್ತದೆ. ಗರಿಷ್ಠ 7.25% ವರೆಗೂ ಇರಬಹುದು.

ಪ್ರತಿದಿನ 87 ಉಳಿತಾಯ ಮಾಡಿದ್ರೆ 11 ಲಕ್ಷ ರೂಪಾಯಿ ನಿಮ್ಮದಾಗುತ್ತೆ! ಅದ್ಭುತ ಯೋಜನೆ

ಫಿಕ್ಸೆಡ್ ಡೆಪಾಸಿಟ್ ಮೇಲೆ ಅತಿ ಹೆಚ್ಚು ಬಡ್ಡಿ ದರ ನೀಡೋ ಬ್ಯಾಂಕುಗಳು ಇವು - Kannada News

ಈ 5 ಬ್ಯಾಂಕುಗಳು ನೀಡುತ್ತವೆ ಉತ್ತಮ ಬಡ್ಡಿದರ!

ಎಚ್ ಡಿ ಎಫ್ ಸಿ ಬ್ಯಾಂಕ್- ಒಂದು ವರ್ಷದಿಂದ 15 ತಿಂಗಳುಗಳ ನಡುವಿನ ಎಫ್ ಡಿ ಮೇಲೆ 6.6% ನಷ್ಟು ಬಡ್ಡಿ ಪಡೆಯಬಹುದು. ನಾಲ್ಕು ವರ್ಷದ ಏಳು ತಿಂಗಳಿನಿಂದ 55 ತಿಂಗಳ ವರೆಗಿನ ಎಫ್ ಡಿ ಮೇಲೆ 7.20% ನಷ್ಟು ಬಡ್ಡಿ ದರ ಸಿಗುತ್ತದೆ.

ಐಸಿಐಸಿಐ ಬ್ಯಾಂಕ್ – ಈ ಬ್ಯಾಂಕ್ ನಲ್ಲಿ 3%ನಿಂದ 7.25% ವರೆಗೆ ಬಡ್ಡಿ ಪಡೆಯಬಹುದು. 15 ತಿಂಗಳುಗಳಿಂದ ಎರಡು ವರ್ಷಗಳ ಅವರಿಗೆ 7.2% ನಷ್ಟು ಬಡ್ಡಿ ದರ ಪಡೆಯಬಹುದು. ಒಂದು ವರ್ಷದಿಂದ 15 ತಿಂಗಳುಗಳ fd ಮೇಲೆ 6.5% ಬಡ್ಡಿದರ ಕೊಡಲಾಗುವುದು.

ಮನೆ ಬಾಡಿಗೆಗೆ ನೀಡಿರುವ ಓನರ್ ಗಳಿಗೆ ಮಹತ್ವದ ಅಪ್ಡೇಟ್! ತಪ್ಪದೆ ತಿಳಿಯಿರಿ

Fixed Depositsಬ್ಯಾಂಕ್ ಆಫ್ ಬರೋಡ- ಈ ಬ್ಯಾಂಕ್ ನಲ್ಲಿ ಎರಡರಿಂದ ಮೂರು ವರ್ಷಗಳ ಅವಧಿಯ ಎಫ್ ಡಿ ಠೇವಣಿಯ ಮೇಲೆ 7.25% ಬಡ್ಡಿದರ ಸಿಗುತ್ತದೆ.

ಎಸ್ ಬಿ ಐ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಮಾನ್ಯ ಗ್ರಾಹಕರ ಎಫ್ ಡಿ ಠೇವಣಿಯ ಮೇಲೆ 3%, ನಿಂದ 7% ವರೆಗೆ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ 50 ಬೇಸಿಸ್ ಪಾಯಿಂಟ್ ಆಧಾರದ ಮೇಲೆ ಬಡ್ಡಿ ದರ ಸ್ವಲ್ಪ ಜಾಸ್ತಿ ಸಿಗುತ್ತದೆ ಎನ್ನಬಹುದು. ಮೂರರಿಂದ ಐದು ವರ್ಷಗಳ ಅವಧಿಯ ನಡುವೆ ಎಫ್ ಡಿ (FD) ಇಟ್ಟರೆ 6.75% ನಷ್ಟು ಬಡ್ಡಿ ಸಿಗುತ್ತದೆ. ಎರಡರಿಂದ ಮೂರು ವರ್ಷಗಳ ಅವಧಿಗೆ 7.% ನಷ್ಟು ಬಡ್ಡಿ ಪಡೆಯಬಹುದು.

ಸರ್ಕಾರದ ಹೊಸ ಯೋಜನೆ! ಪ್ರತಿ ತಿಂಗಳು 3,000 ರೂಪಾಯಿ ಪಿಂಚಣಿ ಪಡೆಯಿರಿ

ಕೋಟಕ್ ಮಹಿಂದ್ರ ಬ್ಯಾಂಕ್ – ಈ ಬ್ಯಾಂಕ್ ನಲ್ಲಿ 4ರಿಂದ 7.25% ವರೆಗೆ ಬಡ್ಡಿ ಪಡೆಯಬಹುದು. ಒಂದು ವರ್ಷದಿಂದ ಗರಿಷ್ಟ ಎರಡು ವರ್ಷಗಳ ಅವಧಿಗೆ 7.25% ನಷ್ಟು ಬಡ್ಡಿದರ ಸಿಗುತ್ತದೆ. 180 ದಿನಗಳ ಅವಧಿಗೆ 7% ನಷ್ಟು ಬಡ್ಡಿ ಕೊಡಲಾಗುವುದು. ಈಗ ಈ ಬಡ್ಡಿ ಆಧಾರದ ಮೇಲೆ ನೀವು ಎಲ್ಲಿ, ಯಾವಾಗ, ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು.

These are the banks that offer the highest interest rates on fixed deposit

Follow us On

FaceBook Google News