ಇನ್ಮುಂದೆ ಈ 10 ಲಕ್ಷ ಆದಾಯಕ್ಕೂ ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ! ಇಲ್ಲಿದೆ ಮಾಹಿತಿ
ಇನ್ಮುಂದೆ ಈ 10 ಲಕ್ಷದ ಆದಾಯಕ್ಕೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ; ಯಾರಿಗೆ ಸಿಗಲಿದೆ ಈ ಸೌಲಭ್ಯ?
ದುಡಿಯುವ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲಾ ಒಂದು ರೀತಿಯಲ್ಲಿ ಟ್ಯಾಕ್ಸ್ (tax) ಪಾವತಿ ಮಾಡಲೇಬೇಕು. ಆದಾಯ ತೆರಿಗೆ ಇಲಾಖೆ (income tax department) ತೆರಿಗೆ ಸ್ಲಾಬ್ (tax slab ) ಗೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ರೀತಿಯ ನಿಯಮಗಳನ್ನು ಕೂಡ ವಿಧಿಸಿದೆ
2.5 ಲಕ್ಷ ರೂಪಾಯಿಗಳ ಆದಾಯವನ್ನು ಪಡೆಯುತ್ತಾನೆ ಎಂದಾದರೆ ಅದಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿಸುವ ಅಗತ್ಯ ಇಲ್ಲ, ಅದಕ್ಕಿಂತ ಹೆಚ್ಚಿನ ದುಡಿಮೆ ನೀವು ಹೊಂದಿದ್ದರೆ ಆಗ ತೆರಿಗೆ ಪಾವತಿಸಬೇಕು.
ನಿಮ್ಮತ್ರ ಕೇವಲ ಆಧಾರ್ ಕಾರ್ಡ್ ಇದ್ರೆ, ಸರ್ಕಾರದಿಂದಲೇ ಸಿಗುತ್ತೆ 50,000 ರೂಪಾಯಿ
ಈ 10 ಲಕ್ಷಕ್ಕೆ ಇಲ್ಲ ಆದಾಯ ತೆರಿಗೆ!
ಸಾಮಾನ್ಯವಾಗಿ ತೆರಿಗೆ ಪಾವತಿ ಮಾಡುವವರು ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚನೆ ಮಾಡುತ್ತಾರೆ. ಅದರಲ್ಲೂ ಆದಾಯ ಸ್ವಲ್ಪ ಜಾಸ್ತಿ ಇದ್ದು ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಯಾವ ಮಾರ್ಗ ಇದೆ ಎಂದು ಹುಡುಕುತ್ತಿರುತ್ತಾರೆ.
ಹಾಗೆ ನೀವು ಕೂಡ 10 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿ ಪಡೆದುಕೊಳ್ಳಬೇಕು ಅಂದ್ರೆ ಈ ಒಂದು ಕೆಲಸ ಮಾಡಬೇಕು. ಈ ರೀತಿ ಮಾಡಿದರೆ ನೀವು ತೆರಿಗೆ ವಿನಾಯಿತಿ ಹಾಗೂ ಇತರ ತೆರಿಗೆ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳುತ್ತೀರಿ. 10 ಲಕ್ಷ ರೂಪಾಯಿಗಳಿಗೆ ತೆರಿಗೆ ಕಟ್ಟದೆ ಯುವ ರೀತಿ ಕಾನೂನು ಬದ್ಧವಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.
ನಿಮ್ಮ 3 ಲಕ್ಷಕ್ಕೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು
* 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಇದ್ದರೆ ಸ್ಟ್ಯಾಂಡರ್ಡ್ ಡಿಡಕ್ಷನ್ (Sanderd Deduction) 50,000 ರಿಯಾಯಿತಿ ನೀಡಲಾಗುತ್ತದೆ.
*ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಈ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ 1.5 ಲಕ್ಷ ರೂಪಾಯಿಗಳ ವರೆಗೆ ರಿಯಾಯಿತಿ ಪಡೆಯಬಹುದು. ಉದಾಹರಣೆಗೆ PPF, EPF, ELSS, NSC ನಂತರ ಕೆಲವು ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಿ ರಿಯಾಯಿತಿ ಪಡೆಯಬಹುದು. ಅಲ್ಲಿಗೆ 10 ಲಕ್ಷದಲ್ಲಿ ನಿಮ್ಮ ತೆರಿಗೆ ಪಾವತಿ ಮಾಡುವ ಹಣ 8.5 ಲಕ್ಷ ರೂಪಾಯಿಗಳಿಗೆ.
*ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಲ್ಲಿ ನೀವು ವರ್ಷಕ್ಕೆ 50 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಿದರೆ, ರಿಯಾಯಿತಿ ಪಡೆಯಬಹುದು. ಸೆಕ್ಷನ್ 80CCD (1B) 50,000ಗಳ ತೆರಿಗೆ ಉಳಿತಾಯ ಮಾಡಬಹುದು. ಅಲ್ಲಿಗೆ ನಿಮ್ಮ ಆದಾಯ 8 ಲಕ್ಷಕ್ಕೆ ಇಳಿಕೆ ಆಯ್ತು.
*ಆದಾಯ ತೆರಿಗೆ ಸೆಕ್ಷನ್ 24B ಗ್ರಹ ಸಾಲ ತೆಗೆದುಕೊಂಡರೆ ಒಡ್ಡಿಯ ಮೇಲೆ ಎರಡು ಲಕ್ಷ ರೂಪಾಯಿಗಳ ವರೆಗೆ ರಿಯಾಯಿತಿ ಸಿಗುತ್ತದೆ. ಅಲ್ಲಿಗೆ ನಿಮ್ಮ ತೆರಿಗೆ ಪಾವತಿ ಆದಾಯ ಆರು ಲಕ್ಷ ರೂಪಾಯಿಗಳಿಗೆ ಇಳಿಕೆಯಾಯಿತು.
ಪ್ರತಿದಿನ ಕೇವಲ 87 ರೂಪಾಯಿ ಉಳಿತಾಯ ಮಾಡಿದ್ರೆ 11 ಲಕ್ಷ ನಿಮ್ಮದಾಗುತ್ತೆ!
*ನೀವು ಆರೋಗ್ಯ ವಿಮೆ ಮಾಡಿಸಿದರೆ 25,000 ರೂಪಾಯಿಗಳ ತೆರಿಗೆ ವಿನಾಯಿತಿ ಹಾಗೂ ಹಿರಿಯರ ಹೆಸರಿನಲ್ಲಿ ವಿಮೆ ಮಾಡಿಸಿದರೆ 50,000 ರೂಪಾಯಿಗಳ ತೆರಿಗೆ ವಿನಾಯಿತಿಯನ್ನು ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ ಪಡೆಯಬಹುದು. ಅಲ್ಲಿಗೆ 75,000ಗಳ ತೆರಿಗೆ ಪಾವತಿ ಕಡಿಮೆ ಆಯಿತು ಈಗ ನಿಮ್ಮ ಟ್ಯಾಕ್ಸ್ ಪಾವತಿಸುವ ಭಾದ್ಯತೆ 5.25 ಲಕ್ಷ ರೂಪಾಯಿಗಳು.
*ಇನ್ನು ಯಾರಿಗಾದರೂ ದೇಣಿಕೆಯಾಗಿ ಹಣ ನೀಡಿದರೆ ಆದಾಯ ತೆರಿಗೆಯ ಸೆಕ್ಷನ್ 80G ಅಡಿಯಲ್ಲಿ 25,000 ತೆರಿಗೆ ವಿನಾಯಿತಿ ಸಿಗುತ್ತದೆ. ಅಲ್ಲಿಗೆ ನಿಮ್ಮ ತೆರಿಗೆ ಪಾವತಿಸುವ ಬಾಧ್ಯತೆ ಐದು ಲಕ್ಷ ರೂಪಾಯಿಗಳಿಗೆ ಇಳಿಕೆ ಆಯಿತು.
ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ 5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಅಲ್ಲಿಗೆ ನೀವು ಸಂಪೂರ್ಣ ಹತ್ತು ಲಕ್ಷ ರೂಪಾಯಿಗಳಿಗೆ ತೆರಿಗೆ ಕಟ್ಟುವ ಕೆಲಸ ಇಲ್ಲ, ಅಂದ್ರೆ ಎಷ್ಟು ದೊಡ್ಡ ಮೊತ್ತದ ಹಣ ಉಳಿತಾಯವಾಯಿತು ನೋಡಿ!
ಇಂತಹ ಮಹಿಳೆಯರು ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ 2.67 ಲಕ್ಷ! ಬಂಪರ್ ಯೋಜನೆ
No need to pay any tax on this income of 10 lakhs from now on