Loan Scheme : ಕೇಂದ್ರ ಸರ್ಕಾರ (Central government) ಬಡ ವರ್ಗದ ಜನರಿಗೆ ಅನುಕೂಲವಾಗುವಂತೆ ಹಾಗೂ ಅವರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಜೀವನ ನಡೆಸುವಂತೆ ಸಾಕಷ್ಟು ಬೇರೆಬೇರೆ ಯೋಜನೆಗಳನ್ನು ಜಾರಿಗೆ ತಂದಿದೆ.
ನಿಮಗೆಲ್ಲರಿಗೂ ಕರೋನ (Covid-19) ಸಮಯ ನೆನಪಿರಬಹುದು. ಆ ಸಮಯದಲ್ಲಿ ಸಾಕಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಆದರೆ ಇನ್ನೊಂದಿಷ್ಟು ಜನ ಜೀವನವನ್ನೇ ಕಳೆದುಕೊಂಡಿದ್ದಾರೆ. ಯಾಕೆಂದರೆ ಈ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಬೀದಿ ವ್ಯಾಪಾರಿಗಳು (Street vendors) ವ್ಯಾಪಾರವೇ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿತ್ತು.
ನಿಮ್ಮ 3 ಲಕ್ಷಕ್ಕೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು
ಇಂಥವರ ಜೀವನವನ್ನು ಮತ್ತೆ ರೂಪಿಸುವ ಸಲುವಾಗಿ ಅವರು ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಸಹಾಯವಾಗುವಂತೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಚನೆ ಅಡಿಯಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ರೂ. 50,000ಗಳವರೆಗೆ ಬೀದಿ ವ್ಯಾಪಾರಿಗಳು ಸಾಲ ಸೌಲಭ್ಯ (Loan) ಪಡೆಯಬಹುದಾಗಿದೆ.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಪ್ರಯೋಜನಗಳು!
ಬೀದಿ ವ್ಯಾಪಾರಿಗಳು ಅಂದರೆ ತರಕಾರಿ ಮಾರಾಟ ಮಾಡುವವರು, ತಳ್ಳುವ ಗಾಡಿಯಲ್ಲಿ ಹಣ್ಣು ಹೂವು ಮಾರಾಟ ಮಾಡುವವರು, ಅಥವಾ ರಸ್ತೆ ಬದಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿರುವವರು, ಪಾನ್ ಶಾಪ್ ನಡೆಸುವವರು, ಐರನ್ ಮಾಡುವವರು ಹೀಗೆ ಬೇರೆ ಬೇರೆ ರೀತಿಯ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅಡಿಯಲ್ಲಿ ಗ್ಯಾರಂಟಿ ತೆಗೆದುಕೊಳ್ಳದೆ 50,000ಗಳ ಸಾಲ ನೀಡಲಾಗುವುದು.
ಮೊದಲ ಹಂತದಲ್ಲಿ 10,000ಗಳನ್ನು ನೀಡಲಾಗುತ್ತದೆ. ಇದನ್ನು 12 ತಿಂಗಳುಗಳಲ್ಲಿ ಅಂದರೆ ಒಂದು ವರ್ಷದಲ್ಲಿ ಮರುಪಾವತಿ ಮಾಡಬೇಕು. ನಂತರ 20,000ಗಳನ್ನು ನೀಡಲಾಗುತ್ತದೆ. ಇನ್ನು ಮೂರನೇ ಹಂತದಲ್ಲಿ 50,000ಗಳನ್ನು ಪಡೆದುಕೊಳ್ಳಬಹುದು. ಈ ಸಾಲದ ಮೊತ್ತಕ್ಕೆ 7% ನಷ್ಟು ಬಡ್ಡಿ ಪಾವತಿಸಬೇಕು.
ಇಂತಹ ಮಹಿಳೆಯರು ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ 2.67 ಲಕ್ಷ! ಬಂಪರ್ ಯೋಜನೆ
ಪ್ರತಿದಿನ ಕೇವಲ 87 ರೂಪಾಯಿ ಉಳಿತಾಯ ಮಾಡಿದ್ರೆ 11 ಲಕ್ಷ ನಿಮ್ಮದಾಗುತ್ತೆ!
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಸಾಲ ಪಡೆದುಕೊಳ್ಳುವುದು ಹೇಗೆ? (How to get loan)
ಸಾಮಾನ್ಯವಾಗಿ ಸಾಲ ತೆಗೆದುಕೊಳ್ಳುವುದು ಅಂದ್ರೆ ಸಾಕಷ್ಟು ಗ್ಯಾರಂಟಿ ಅಥವಾ ಭದ್ರತೆಯನ್ನು ಬ್ಯಾಂಕಿಗೆ ನೀಡಬೇಕು. ಆದರೆ ಈ ಯೋಜನೆಯಡಿಯಲ್ಲಿ 50,000 ಸಾಲಕ್ಕೆ ಯಾವುದೇ ರೀತಿಯ ಗ್ಯಾರಂಟಿ ಕೊಡಬೇಕಾಗಿಲ್ಲ.
ನೀವು ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಇದ್ರೆ ಸಾಕು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡುವಂತೆ ಕೇಳಬಹುದು.
ಸ್ವಂತ ಬಿಸಿನೆಸ್ ಮಾಡೋರಿಗೆ ಸಿಗಲಿದೆ 3 ಲಕ್ಷ! ಬಡ್ಡಿಯನ್ನು ಕೂಡ ಸರ್ಕಾರವೇ ಕಟ್ಟುತ್ತೆ
ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಸುಮಾರು 43 ಪರ್ಸೆಂಟ್ ನಷ್ಟು ಮಹಿಳಾ ವ್ಯಾಪಾರಸ್ಥರೇ ಸಾಲ ಸೌಲಭ್ಯ ಪಡೆದುಕೊಂಡಿರುವುದು ವಿಶೇಷ. ಯೋಜನೆಗಾಗಿ 9,100 ಕೋಟಿ ರೂಪಾಯಿಗಳನ್ನು ಸರ್ಕಾರ ವೆಚ್ಚ ಮಾಡಿದೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ 70 ಲಕ್ಷಕ್ಕೂ ಅಧಿಕ ಜನ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
If you have Aadhaar card, you will get 50,000 rupees from the government
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.