ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗಾಗಿ ಅರ್ಜಿ ಸಲ್ಲಿಸಿ ಆರು ತಿಂಗಳು ಕಳೆದರೂ ಕೂಡ ತಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಹುಬ್ಬಳ್ಳಿ ಮಹಿಳೆ ಒಬ್ಬಳು ಈಗ ಖುಷಿಯಲ್ಲಿ ಇದ್ದಾರೆ.

ಯಾಕಂದ್ರೆ ಅವರ ಖಾತೆಗೆ ಪೆಂಡಿಂಗ್ (pending amount) ಇರುವ ಎಲ್ಲಾ ಹಣ ಮೂರು ದಿನಗಳ ಅಂತರದಲ್ಲಿ ಜಮಾ ಆಗಿದೆ. ನಿಮ್ಮ ಖಾತೆಗೂ ಕೂಡ ಇನ್ನೂ ಬಾರದೇ ಇರುವ ಹಣ ಜಮಾ ಆಗಬೇಕಾ ಹಾಗಾದ್ರೆ ಮೊದಲು ಈ ಕೆಲಸ ಮಾಡಿ.

Gruha Lakshmi Yojana

ಸರ್ಕಾರ ಈಗಾಗಲೇ ತಿಳಿಸಿರುವಂತೆ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ (E-KYC) ಆಗಲೇಬೇಕು. ತಿಂಗಳ ಹಿಂದೆ ಕೆವೈಸಿ ಮಾಡಿಸಿದರೆ ಈಗ ಮತ್ತೊಮ್ಮೆ ಅದನ್ನು ಅಪ್ಡೇಟ್ ಮಾಡಿಕೊಳ್ಳಿ. ಅಷ್ಟೇ ಅಲ್ಲದೆ ಯಾವ ಮಹಿಳೆಯರ ಖಾತೆಗೆ ಒಂದೆರಡು ಕಂತಿನ ಹಣ ಬಂದಿದ್ದು, ಮುಂದಿನ ಕಂತಿನ ಹಣ ಜಮಾ ಆಗಿಲ್ಲವೋ ಅಂತವರು ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕಿನ ಶಾಖೆಗೆ ಹೋಗಿ ಎನ್ ಪಿ ಸಿ ಐ ಮ್ಯಾಪಿಂಗ್ (NPCI mapping) ಮಾಡಿಸಿಕೊಳ್ಳಿ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಸಿಹಿ ಸುದ್ದಿ! ಇದೇ ತಿಂಗಳು ಕಾರ್ಡ್ ವಿತರಣೆ

ನೀವು ಬ್ಯಾಂಕಿಗೆ ಹೋದಾಗ ಕೆವೈಸಿ ಆಗಿದೆ ಎಂದು ಹೇಳಬಹುದು ಆದರೆ ಕೆವೈಸಿ ಅಲ್ಲ ಎನ್ ಪಿ ಸಿ ಐ ಮ್ಯಾಪಿಂಗ್ ಆಗಬೇಕು ಎಂದು ಸ್ಪಷ್ಟವಾಗಿ ತಿಳಿಸಿ ಈ ಕೆಲಸ ಮಾಡಿಸಿಕೊಳ್ಳಿ. ಆಗ ತಪ್ಪದೆ 6 ಮತ್ತು 7ನೇ ಕಂತಿನ ಹಣ ನಿಮ್ಮ ಖಾತೆಗೆ ಬರುತ್ತದೆ. ಆದರೆ ಈಗಾಗಲೇ ಐದು ಕಂತಿನ ಹಣ, ಅಂದರೆ 10,000 ನಿಮ್ಮ ಖಾತೆಗೆ ಜಮಾ ಆಗಿದ್ದರೆ ಮತ್ತೆ ನೀವು NPCI mapping ಮಾಡಿಸಿಕೊಳ್ಳುವ ಅಗತ್ಯ ಇಲ್ಲ.

Gruha Lakshmi Yojanaಇನ್ನು ಸರ್ಕಾರ ಪೆಂಡಿಂಗ್ ಇರುವ ಹಣವನ್ನು ಕೂಡ ಮಹಿಳೆಯರ ಖಾತೆಗೆ ಜಮಾ ಮಾಡುತ್ತಿದ್ದು, ನೀವು ನಿಮ್ಮ ಬ್ಯಾಂಕ್ ನ ಖಾತೆಯಲ್ಲಿ ಸಮಸ್ಯೆ ಇದ್ದರೆ ತಕ್ಷಣ ಪೋಸ್ಟ್ ಆಫೀಸ್ (post office) ನಲ್ಲಿ ಉಳಿತಾಯ ಖಾತೆಯನ್ನು ಆರಂಭಿಸಿದರೆ ಆಟೋಮೆಟಿಕ್ ಆಗಿ ಗೃಹಲಕ್ಷ್ಮಿ ಹಣ ಜಮಾ ಆಗಲು ಆರಂಭವಾಗುತ್ತದೆ. ಈ ಬಗ್ಗೆ ಹಿಂದೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮಾಹಿತಿ ನೀಡಿದ್ದರು.

ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಪಡೆಯೋಕೆ ಹೀಗೆ ಮಾಡಿ

ಇನ್ನು ಸಿಡಿಪಿಓ ಕಚೇರಿ (CDPO) ಯಲ್ಲಿ ನಿಮ್ಮ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿ ಯಾವುದೇ ತಾಂತ್ರಿಕ ದೋಷದ (technical error) ಕಾರಣದಿಂದ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವುದಾದರೆ ಅದನ್ನು ಅವರ ಬಳಿಯೇ ಪರಿಹರಿಸಿಕೊಳ್ಳಬಹುದು.

ಹಾಗಾಗಿ ನಿಮ್ಮ ಗೃ ಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತಿ ಪ್ರತಿ, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ತೆಗೆದುಕೊಂಡು ಹತ್ತಿರದ ಸಿಡಿಪಿಓ ಕಚೇರಿಗೆ ಭೇಟಿ ನೀಡಿ ಹಣ ಜಮಾ ಆಗದೆ ಇರುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್!

Gruha Lakshmi Scheme pending money deposited into the account of such People