ಮೃತ ಮಹಿಳೆ ಅಕೌಂಟ್‌ಗೂ ಬರುತ್ತಾ ಗೃಹಲಕ್ಷ್ಮಿ ಯೋಜನೆ ಹಣ! ಮಹತ್ವದ ಮಾಹಿತಿ
Gruha Lakshmi Scheme : ಮೃತಪಟ್ಟ ಅತ್ತೆಯ ಖಾತೆ ಗೃಹಲಕ್ಷ್ಮಿ ಹಣ ಪಡೆಯಲು ಸೊಸೆಯ ಪರದಾಟ!
ಗೃಹಲಕ್ಷ್ಮಿ ಯೋಜನೆ (Gruha lakshmi scheme) ದಿನದಿಂದ ದಿನಕ್ಕೆ ಯಶಸ್ಸನ್ನು ಕಂಡಿದ್ದರು ಕೂಡ ಸಾಕಷ್ಟು ಲೋಪ ದೋಷಗಳು ಇಂದಿಗೂ ಇದೆ ಎಂದು ಹೇಳಬಹುದು.
ಕಳೆದ ಆರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣದ ಪ್ರಯೋಜನವನ್ನು ಸಾಕಷ್ಟು ಮಹಿಳೆಯರು ಪಡೆದುಕೊಂಡಿದ್ದಾರೆ. ಇತ್ತೀಚಿಗೆ ಬೆಳಕಿಗೆ ಬಂದಿರುವ ಪ್ರಕರಣ ಒಂದರಲ್ಲಿ ಬದುಕಿರುವ ಮಹಿಳೆಯ ಖಾತೆಗೆ (Bank Account) ಹಣ ಜಮಾ ಆಗದೇ ಇದ್ದರೂ, ಮರಣ ಹೊಂದಿದ ಮಹಿಳೆಯ ಖಾತೆಗೆ ಹಣ ಜಮಾ ಆಗಿರುವುದು ಚರ್ಚೆಗೆ ಕಾರಣವಾಗಿದೆ.
ಇಂತಹ ಮಹಿಳೆಯರ ಖಾತೆಗೆ ಜಮಾ ಆಯ್ತು ಗೃಹಲಕ್ಷ್ಮಿ ಪೆಂಡಿಂಗ್ ಹಣ! ಚೆಕ್ ಮಾಡಿ
ಘಟನೆಯ ಹಿನ್ನೆಲೆ!
ಗದಗ ಜಿಲ್ಲೆಯ (Gadag district) ನರಗುಂದ ತಾಲೂಕಿನ, ಜಗಾಪುರ ಗ್ರಾಮದ ನಿಂಗವ್ವ ಶಿವಪ್ಪ ಹೂಲಿ ಮಹಿಳೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅವರು 2022 ಆಗಸ್ಟ್ 26 ಕ್ಕೆ ಮರಣ ಹೊಂದಿದ್ದಾರೆ. ವಿಶೇಷ ಅಂದ್ರೆ ಅವರ ಖಾತೆಗೆ ಈಗ ಗೃಹಲಕ್ಷ್ಮೀ ಹಣ ಜಮಾ ಆಗಿದೆ.
ಒಂದಷ್ಟು ಜನ ಏನೇ ಪ್ರಯತ್ನ ಪಟ್ಟರು ತಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರೆ, ಅತ್ತ ನಿಶ್ಚಿಂತೆಯಿಂದ ಸತ್ತು ಸ್ವರ್ಗದಲ್ಲಿ ಮಲಗಿರುವ ಮಹಿಳೆಯ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿದೆ. ಈ ಹಣವನ್ನು ಪಡೆದುಕೊಳ್ಳಲು ಅವರ ಸೊಸೆ ಪರದಾಡುತ್ತಿದ್ದಾರೆ.
ನಿಂಗವ್ವ ಅವರು ತೀರಿಕೊಂಡ ನಂತರ ಅವರ ಸೊಸೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು. ಆದರೆ ಅವರ ಖಾತೆಗೆ ಹಣ ಇನ್ನು ಬಂದು ತಲುಪಿಲ್ಲ. ತನ್ನ ಅತ್ತೆಯ ಖಾತೆಗೆ ಬಂದಿರುವ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಡಿ ಎಂದು ಆಕೆ ಕೇಳಿಕೊಂಡಿದ್ದಾರೆ. ಮೃತರ ಸಹಿ ಇಲ್ಲದೆ ಅವರ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ತನ್ನ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಡಿ ಎಂದು ಬ್ಯಾಂಕ್ ಮೊರೆ ಹೋಗಿದ್ದಾರೆ ಸೊಸೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಸಿಹಿ ಸುದ್ದಿ! ಇದೇ ತಿಂಗಳು ಕಾರ್ಡ್ ವಿತರಣೆ
ಎಷ್ಟೇ ಪ್ರಯತ್ನ ಪಟ್ರು ನಿಂಗವ್ವ ಅವರ ಖಾತೆಯಲ್ಲಿ ಇರುವ ಹಣ ಸೊಸೆಯ ಖಾತೆಗೆ ಮಾತ್ರ ಬರುತ್ತಿಲ್ಲ. ಕೋಟ್ಯಾಂತರ ಮಹಿಳೆಯರ ಖಾತೆಗೆ ಹಣ ಜಮಾ ಮಾಡುತ್ತಿರುವ ಸರ್ಕಾರ ಸಾಕಷ್ಟು ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ ಯಾಕೆಂದರೆ ತಾಂತ್ರಿಕ ದೋಷದಿಂದಾಗಿ ಈ ರೀತಿಯ ಸಮಸ್ಯೆಗಳು ಉದ್ಭವ ಆಗುತ್ತಿವೆ.
ಆದರೆ ಇದರಿಂದ ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗದೆ ವಂಚನೆ ಆಗುತ್ತಿದೆ. ತಕ್ಷಣ ಸರ್ಕಾರ ಇದನ್ನ ಸರಿಪಡಿಸಿಕೊಂಡು ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುವಂತೆ ಮಾಡಬೇಕು.
ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಪಡೆಯೋಕೆ ಹೀಗೆ ಮಾಡಿ
ಗದಗ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ ಈಗಾಗಲೇ ಸುಮಾರು ಏಳರಿಂದ ಎಂಟು ಮೃತ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Deposit) ಆಗಿರುವುದು ಕಂಡುಬಂದಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಇನ್ನುವರೆಗೆ ನಿಮ್ಮ ಖಾತೆಗೆ ಬಾರದಿದ್ದರೆ CDPO ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಅಥವಾ ನಿಮ್ಮ ಬ್ಯಾಂಕ್ ಗೆ ಹೋಗಿ NPCI mapping ಮಾಡಿಸಿಕೊಳ್ಳಿ. ನಿಮ್ಮ ಕೆ ವೈ ಸಿ ಅಪ್ಡೇಟ್ ಮಾಡಿಸಿಕೊಂಡರೆ ನಿಮ್ಮ ಖಾತೆಗೆ ಆರು ಮತ್ತು ಏಳನೇ ಕಂತಿನ ಹಣ ಜಮಾ ಆಗಲಿದೆ.
Gruha Lakshmi Yojana money will deposit to account of the dead woman