ರೈತರಿಗೆ ಭರ್ಜರಿ ಉಡುಗೊರೆ ನೀಡಿದ ಸರ್ಕಾರ; ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ

ರಾಜ್ಯದ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವುದು, ರಾಗಿ ಬೆಳೆಯುವ ರೈತರ ಪ್ರತಿ ಎಕರೆಗೆ 10,000 ರೂ. ನೀಡುವುದು ಯೋಜನೆಯ ಉದ್ದೇಶ

Bengaluru, Karnataka, India
Edited By: Satish Raj Goravigere

ರೈತರು ಈ ದೇಶದ ಆಧಾರಸ್ತಂಬ. ರೈತರು ಇಲ್ಲದ ದೇಶವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿಯೇ ಯಾವುದೇ ಪಕ್ಷದ ಸರ್ಕಾರವಿದ್ದರೂ ತನ್ನ ಬಜೆಟ್ನಲ್ಲಿ ರೈತರಿಗೆ ಮೊದಲ ಆಧ್ಯತೆ ನೀಡುತ್ತದೆ.

ಅದರಂತೆ ಈ ಬಾರಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು (Farmer Scheme) ಘೋಷಣೆ ಮಾಡಿದೆ. ಅದರಲ್ಲೂ ರಾಜ್ಯ ಸರ್ಕಾರವು ರೈತ ಸಿರಿ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದೆ.

ನಿಮ್ಮ ಆಸ್ತಿ, ಜಮೀನಿನ ಪಹಣಿ ಪತ್ರಕ್ಕೆ

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಪೆಂಡಿಂಗ್ ಹಣ ಪಡೆಯೋಕೆ ಈ ಕೆಲಸ ಮಾಡಿ!

ಹಾಗಾದರೆ ರೈತ ಸಿರಿ ಯೋಜನೆ ಎಂದರೆ ಏನು? ಯಾರೆಲ್ಲ ಈ ಯೋಜನೆ ಅಡಿಯಲ್ಲಿ ಲಾಭ ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಸಾವಯವ ಕೃಷಿ ಹಾಗೂ ರಾಗಿ ಬೆಳೆಯುವುದನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆ ಜಾರಿಗೆ ತರಲಾಗಿದೆ. ರಾಗಿ ಬೆಳೆಯುವ ರೈತರ ಪ್ರತಿ ಎಕರೆಗೆ 10,000 ರೂ.ಗಳನ್ನು ಸರ್ಕಾರವು ಪ್ರೋತ್ಸಾಹ ಧನವಾಗಿ ನೀಡುತ್ತದೆ.

ಈ ಯೋಜನೆಯನ್ನು 2019-20 ರ ಬಜೆಟ್ನಲ್ಲಿಯೇ ಘೋಷಣೆ ಮಾಡಲಾಗಿತ್ತು. ಆದರೆ ಅನುಷ್ಠಾನಕ್ಕೆ ತರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಸರ್ಕಾರವು ಈ ಬಾರಿ ಮತ್ತೊಮ್ಮೆ ರೈತ ಸಿರಿ ಯೋಜನೆ ಜಾರಿಗೆ ತರುವುದಾಗಿ ಘೋಷಣೆ ಮಾಡಿದೆ.

ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್; ಫೆಬ್ರವರಿ ತಿಂಗಳ ಹಣ ಪಡೆಯೋಕೆ ಹೀಗೆ ಮಾಡಿ

ರೈತ ಸಿರಿ ಯೋಜನೆಯ ಉದ್ದೇಶಗಳು:

ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು, ರಾಜ್ಯದಲ್ಲಿ ಕೃಷಿ ಮಾಡುವ ಪ್ರದೇಶವನ್ನು ಹೆಚ್ಚು ವಿಸ್ತರಿಸುವುದು, ರಾಜ್ಯದ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವುದು, ರಾಗಿ ಬೆಳೆಯುವ ರೈತರ ಪ್ರತಿ ಎಕರೆಗೆ 10,000 ರೂ. ನೀಡುವುದು

Farmerಅರ್ಹತೆ ಏನು?

ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಬೇಕು.

ಅರ್ಜಿದಾರರು ರೈತರಾಗಿದ್ದು, ಅವರ ಹೆಸರಿನಲ್ಲಿಯೇ ಜಮೀನು ಇರಬೇಕು.

ರೈತರು ಮುಖ್ಯವಾಗಿ ರಾಗಿ ಬೆಳೆಯುವವರಾಗಿರಬೇಕು.

ರೈತರು ಕನಿಷ್ಟ 1 ಹೆಕ್ಟೇರ್ ಕೃಷಿ ಭೂಮಿ ಹೊಂದಿರಬೇಕು.

ಮೃತ ಮಹಿಳೆ ಅಕೌಂಟ್‌ಗೂ ಬರುತ್ತಾ ಗೃಹಲಕ್ಷ್ಮಿ ಯೋಜನೆ ಹಣ! ಮಹತ್ವದ ಮಾಹಿತಿ

ಅರ್ಜಿ ಸಲ್ಲಿಸುವುದು ಹೇಗೆ?:

ಅರ್ಜಿ ಸಲ್ಲಿಸಲು ಬಯಸುವ ರೈತರು ಮೊದಲು ಕರ್ನಾಟಕ ರಾಜ್ಯದ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಮುಖಪುಟದಲ್ಲಿ ಸೇವೆಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈಗ ನಿಮ್ಮ ಮುಂದೆ ಹಲವಾರು ಆಯ್ಕೆಗಳು ಕಾಣುತ್ತವೆ. ಅಲ್ಲಿ ರೈತ ಸಿರಿ ಯೋಜನೆಯ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಕಾಣುವ ಎಲ್ಲ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಇಂತಹ ಮಹಿಳೆಯರ ಖಾತೆಗೆ ಜಮಾ ಆಯ್ತು ಗೃಹಲಕ್ಷ್ಮಿ ಪೆಂಡಿಂಗ್ ಹಣ! ಚೆಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ್ (Aadhaar Card)
ಅರ್ಜಿದಾರರ ಜಮೀನಿಗೆ ಸಂಬಂಧಿಸಿದ ದಾಖಲೆಗಳು (Property Documents)
ಶಾಶ್ವತ ನಿವಾಸಿ ಪ್ರಮಾಣ ಪತ್ರ.
ವಿಳಾಸ ಪುರಾವೆ (Address Proof)
ಪಡಿತರ ಚೀಟಿ (Ration Card)
ಬ್ಯಾಂಕ್ ಖಾತೆಯ ವಿವರಗಳು (Bank Account Details)
ಮೊಬೈಲ್ ನಂಬರ್ (Mobile Number)
ಅರ್ಜಿದಾರರ ಭಾವಚಿತ್ರ ನೀಡಬೇಕಾಗುತ್ತದೆ.

Government gave huge gift to farmers, 10 thousand per acre in this Scheme