Karnataka NewsBangalore News

ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗಿನ್ನೂ ಹಣ ಬಂದಿಲ್ವಾ?

ಕೇಂದ್ರ ಸರ್ಕಾರದ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನ ಸೇರಿ ಪಡಿತರ ಚೀಟಿ ಹೊಂದಿರುವವರಿಗೆ, ಪಡಿತರ ವಿತರಣೆ ಮಾಡಲಾಗುತ್ತದೆ. ಬಿಪಿಎಲ್, ಅಂತ್ಯೋದಯ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಅನ್ನು ಅವರವರ ಆದಾಯದ ಮೇರೆಗೆ ಅಥವಾ ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ವಿತರಣೆ ಮಾಡಲಾಗುತ್ತದೆ.

ಬಡತನ ರೇಖೆಗಿಂತ ಕೆಳಗಿರುವ ಅಥವಾ ಅದಕ್ಕಿಂತ ಬಡವರಿಗೆ AAY card, BPL card ವಿತರಣೆ ಮಾಡಲಾಗಿದೆ, ಅದೇ ರೀತಿ ಪಡಿತರವನ್ನ ಹೊರತುಪಡಿಸಿ ಒಂದು ಗುರುತಿನ ಚೀಟಿಯಾಗಿ ಹಾಗೂ ಕೆಲವು ಸಬ್ಸಿಡಿ ಗಳನ್ನು ಪಡೆದುಕೊಳ್ಳಲು APL card ಪ್ರಯೋಜನ ಪಡೆದುಕೊಳ್ಳಬಹುದು.

Do this if Annabhagya Yojana money not reached your Bank account yet

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಪೆಂಡಿಂಗ್ ಹಣ ಪಡೆಯೋಕೆ ಈ ಕೆಲಸ ಮಾಡಿ!

ಈಗಾಗಲೇ ದೇಶದಲ್ಲಿ ಕೋಟ್ಯಾಂತರ ಜನ ಪಡಿತರ ಚೀಟಿ (Ration Card) ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಉಚಿತ ಪಡಿತರ ವಿತರಣೆ ವಿಚಾರಕ್ಕೆ ಬಂದರೆ ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಿಂದಲೂ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ತಾನು ಕೂಡ ಐದು ಕೆಜಿ ಅಕ್ಕಿಯನ್ನು ಫಲಾನುಭವಿಗಳಿಗೆ ಉಚಿತವಾಗಿ ಕೊಡುವುದಾಗಿ ಹೇಳಿತ್ತು.

ಅಂದರೆ ಹತ್ತು ಕೆಜಿ ಅಕ್ಕಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗಬೇಕಿತ್ತು. ರಾಜ್ಯ ಸರ್ಕಾರದ ಬಳಿ ಎಷ್ಟು ದೊಡ್ಡ ಮೊತ್ತದ ಅಕ್ಕಿ ದಾಸ್ತಾನು ಇಲ್ಲದೆ ಇರುವ ಕಾರಣ ಹಾಗೂ ಬೇರೆ ರಾಜ್ಯಗಳಲ್ಲಿ ಪ್ರಯತ್ನಿಸಿದರು ಅಕ್ಕಿ ಪಡೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಅಕ್ಕಿಯ ಬದಲು ಹಣವನ್ನು ವಿತರಣೆ ಮಾಡಲಾಗುತ್ತದೆ.

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಉಚಿತ ಅಕ್ಕಿ ಹಾಗೂ ಇನ್ನೂ ಐದು ಕೆಜಿಗೆ, ಪ್ರತಿ ಕೆಜಿಗೆ 34 ರೂಪಾಯಿಗಳಂತೆ 170ಗಳನ್ನು ಪ್ರತಿ ಸದಸ್ಯರಿಗೂ ಕೊಡಲಾಗುತ್ತಿದೆ. ಅಂದರೆ ಮನೆಯ ಯಜಮಾನನ ಖಾತೆಗೆ (Bank Account) ಡಿಬಿಟಿ ಮಾಡಲಾಗುತ್ತದೆ.

ಅದೇ ರೀತಿ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 35 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತದೆ. ಇನ್ನು ಮಿತಿಯ ಆಧಾರದ ಮೇಲೆ ಎಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಕೆಜಿ ಅಕ್ಕಿ ಸಿಗುತ್ತಿದೆ.

ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್; ಫೆಬ್ರವರಿ ತಿಂಗಳ ಹಣ ಪಡೆಯೋಕೆ ಹೀಗೆ ಮಾಡಿ

Annabhagya Schemeಅನ್ನಭಾಗ್ಯ ಯೋಜನೆಯ ಗೊಂದಲಗಳು!

ಸಾಕಷ್ಟು ಫಲಾನುಭವಿಗಳು ರಾಜ್ಯ ಸರ್ಕಾರಕ್ಕೆ ನಮಗೆ ಹಣದ ಬದಲು ಅಕ್ಕಿಯನ್ನೇ ವಿತರಣೆ ಮಾಡಿ ಎಂದು ಮನವಿ ಮಾಡಿದ್ದು, ವಿಪಕ್ಷ ನಾಯಕರು ಸರ್ಕಾರಕ್ಕೆ ಅಕ್ಕಿ ಒದಗಿಸಲು ಸಾಧ್ಯವಾಗದೇ ಇರುವುದರಿಂದ ಸರ್ಕಾರ ಬರಿ ಬಾಯಿ ಮಾತಿನಲ್ಲಿ ಹೇಳಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದ್ದು ಅಕ್ಕಿ ಕೊಡಲು ಸಾಧ್ಯವಾಗದೆ ಇದ್ದರೂ ಹಣವನ್ನ ಕೊಡುತ್ತಿರುವುದರಿಂದ ಫಲಾನುಭವಿಗಳಿಗೆ ಯಾವುದೇ ರೀತಿಯ ಮೋಸ ಆಗಿಲ್ಲ ಎಂದು ಹೇಳಿಕೊಂಡಿದೆ. ಹೀಗಾಗಿ ಕಳೆದ ಜುಲೈ ತಿಂಗಳಿನಿಂದ ಅಂದರೆ ಕಳೆದ ಆರು ತಿಂಗಳಿನಿಂದಲೂ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಯ ಹಣವನ್ನು ರಾಜ್ಯ ಸರ್ಕಾರ ಜಮಾ ಮಾಡುತ್ತಿದೆ.

ಮೃತ ಮಹಿಳೆ ಅಕೌಂಟ್‌ಗೂ ಬರುತ್ತಾ ಗೃಹಲಕ್ಷ್ಮಿ ಯೋಜನೆ ಹಣ! ಮಹತ್ವದ ಮಾಹಿತಿ

ಫೆಬ್ರವರಿ ತಿಂಗಳ ಹಣ ಬಿಡುಗಡೆಯಲ್ಲಿ ವಿಳಂಬ!

ಇನ್ನು ಈಗಾಗಲೇ ಅನ್ನ ಭಾಗ್ಯ ಯೋಜನೆಯ ಫೆಬ್ರವರಿ ತಿಂಗಳ ಹಣ ಕೂಡ ಬಿಡುಗಡೆ ಆಗಬೇಕಿತ್ತು. ಸರ್ಕಾರದ ಮಾಹಿತಿಯ ಪ್ರಕಾರ ಫೆಬ್ರವರಿ ತಿಂಗಳ ಕೊನೆಯ ಒಳಗೆ ಫೆಬ್ರವರಿ ತಿಂಗಳಿನ ಹಣ ಬಿಡುಗಡೆ ಆಗಲಿದೆ, ಪ್ರತಿಯೊಬ್ಬರ ಖಾತೆ ಸೇರಲಿದೆ.

ಒಂದು ವೇಳೆ ಫಲಾನುಭವಿಗಳ ಖಾತೆಗೆ ಹಣಬಾರದೆ ಇದ್ದರೆ ಕೆಲವು ತಾಂತ್ರಿಕ ದೋಷಗಳಿಂದಾಗಿ ಸಮಸ್ಯೆ ಉಂಟಾಗಿರಬಹುದು. ಇಂತಹ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.

ಇಂತಹ ಮಹಿಳೆಯರ ಖಾತೆಗೆ ಜಮಾ ಆಯ್ತು ಗೃಹಲಕ್ಷ್ಮಿ ಪೆಂಡಿಂಗ್ ಹಣ! ಚೆಕ್ ಮಾಡಿ

Annabhagya Yojana money release for the month of February

Our Whatsapp Channel is Live Now 👇

Whatsapp Channel

Related Stories