ಕುರಿ-ಕೋಳಿ-ಹಂದಿ ಸಾಕಣೆ ಮಾಡೋರಿಗೆ ಖುಷಿ ಸುದ್ದಿ; ತರಬೇತಿ ಜೊತೆ ಸಿಗುತ್ತೆ ಪ್ರೋತ್ಸಾಹ ಧನ

ಕೃಷಿಯಲ್ಲಿ ನಷ್ಟ ಉಂಟಾದಾಗ ಉಪಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆಯಂತವುಗಳು ಲಾಭ ತಂದುಕೊಡುತ್ತವೆ.

Bengaluru, Karnataka, India
Edited By: Satish Raj Goravigere

ಇಂದು ಕೃಷಿ ಕ್ಷೇತ್ರವು ಬಹಳ ಸಂಕಷ್ಟದಲ್ಲಿದೆ. ರೈತರಿಗೆ ಕೂಲಿಕಾರರು ಸರಿಯಾಗಿ ಸಿಗದ ಕಾರಣ ಅನೇಕ ರೈತರು ಕೃಷಿ ಮಾಡಲು ಮುಂದಾಗುತ್ತಿಲ್ಲ. ಅಲ್ಲದೆ ಕಳೆದ ಸಾಲಿನಲ್ಲಿ ಮಳೆಯು ಕೈಕೊಟ್ಟಿದ್ದರಿಂದ ರೈತರು ಭಿತ್ತನೆ ಮಾಡಿದ ಬೆಳೆಗಳೆಲ್ಲ ಹೊಲದಲ್ಲಿಯೇ ಒಣಗಿ ಹೋಗಿದ್ದವು.

ಹಾಗಾಗಿ ರೈತರು ಕೃಷಿಯ ಜೊತೆ ಉಪಕಸುಬುಗಳನ್ನು ಮಾಡಿದರೆ ಆರ್ಥಿಕವಾಗಿ ಸದೃಢರಾಗಿರಬಹುದು. ಕೃಷಿಯಲ್ಲಿ ನಷ್ಟ ಉಂಟಾದಾಗ ಉಪಕಸುಬುಗಳಾದ ಹೈನುಗಾರಿಕೆ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆಯಂತವುಗಳು ಲಾಭ ತಂದುಕೊಡುತ್ತವೆ.

Government subsidies for sheep and Poultry farming

ಹಾಗಾಗಿ ಪ್ರತಿಯೊಬ್ಬ ರೈತರು ಕೃಷಿಯ ಜೊತೆ ಉಪ ಕಸುಬು ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಈ ಬಾರಿಯ ಬಜೆಟ್ನಲ್ಲಿ ಕುರಿ, ಹಂದಿ, ಕೋಳಿ ಸಾಕಾಣಿಕೆ ಮಾಡುವವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಘೋಷಣೆ ಮಾಡಿದೆ.

ರೈತರಿಗೆ ಭರ್ಜರಿ ಉಡುಗೊರೆ ನೀಡಿದ ಸರ್ಕಾರ; ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ

ರೈತ ಮಹಿಳೆಯರಲ್ಲಿ ಹೈನುಗಾರಿಕೆ ಮಾಡುವುದನ್ನು ಪ್ರೋತ್ಸಾಹಿಸಲು ಹಸು ಎಮ್ಮೆ ಖರೀದಿ ಮಾಡಿದ ಸಾಲವನ್ನು (Loan) ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಶೇ.೬ ರ ಬಡ್ಡಿದರಲ್ಲಿ ಸಹಾಯಧನ ನೀಡಲಾಗುವುದು.

ಹಂದಿ ಮತ್ತು ಕುರಿ ಸಾಕಾಣಿಕೆ ಮಾಡುವವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ.

ಈ ಬಾರಿ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಮುಂದುವರಿಸಲಾಗುವುದು. ಈ ಯೋಜನೆ ಅಡಿಯಲ್ಲಿ ರಾಜ್ಯದ ೧೦ ಸಾವಿರ ಕುರಿಗಾಹಿಯಗಳಿಗೆ ಸಹಾಯಧನ ನೀಡಲಾಗುವುದು. ಜೊತೆಗೆ ಅಮೃತಮಹಲ್, ಹಳ್ಳಿಕಾರ್, ಖಿಲಾರಿ ಹಸುಗಳ ಸಂವರ್ಧನೆ ಮಾಡಿ ಸರ್ಕಾರದಿಂದಲೇ ಉತ್ತಮ ಕರುಗಳನ್ನು ಒದಗಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಪೆಂಡಿಂಗ್ ಹಣ ಪಡೆಯೋಕೆ ಈ ಕೆಲಸ ಮಾಡಿ!

Pig Farming Businessಜಿಲ್ಲಾ ಕೇಂದ್ರದಲ್ಲಿರುವ ತಜ್ಞ ಪಶುವೈದ್ಯಕೀಯ ಕೇಂದ್ರಗಳನ್ನು ತಾಲೂಕು ಮಟ್ಟದಲ್ಲಿ ಪ್ರಾರಂಭಿಸಲಾಗುವುದು. ಪ್ರಥಮ ಹಂತದಲ್ಲಿ ರಾಜ್ಯದಲ್ಲಿ ಆಯ್ದ ೨೦ ತಾಲೂಕು ಕೇಂದ್ರದಲ್ಲಿ ಇಂತಹ ಪಾಲಿಕ್ಲಿನಿಕ್ ಕೇಂದ್ರಗಳನ್ನು ತೆರೆಯಲಾಗುವುದು.

ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ಗಳಾಗಿ ಮೇಲ್ದಜೆಗೇರಿಸಲು ಈ ಬಾರಿಯ ಬಜೆಟ್ನಲ್ಲಿ ೧೦ ಕೋಟಿ ರೂ. ಮೀಸಲಿಡಲಾಗಿದೆ. ಶಿಥಿಲಾವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ೨೦೦ ಪಶುವೈದ್ಯ ಸಂಸ್ಥೆಗಳನ್ನು ೧೦೦ ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್; ಫೆಬ್ರವರಿ ತಿಂಗಳ ಹಣ ಪಡೆಯೋಕೆ ಹೀಗೆ ಮಾಡಿ

ತಲೆತಲಾಂತರದಿಂದ ಕುರಿ/ ಮೇಕೆ ಸಾಕಣೆ ಮಾಡುತ್ತಿರುವ ರಕ್ಷಣೆಗೆ ವಲಸೆ ಕುರಿಗಾಹಿಗಳ ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. ಸಂಚಾರಿ ಕುರಿಗಾಹಿಗಳು ಅವರು ಇರುವ ಜಾಗದಲ್ಲೇ ಕುರಿ ಮೇಕೆಗಳಿಗೆ ವೈದ್ಯರಿಂದ ಬೇಕಾಗುವ ಲಸಿಕೆ ಹಾಕಿಸಲಾಗುವುದು.

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ಸಹ ವಿತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಬಾರಿ ಮಂಡಿಸಿದ ಆಯವ್ಯಯದಲ್ಲಿ ಪ್ರಕಟಿಸಿದ್ದಾರೆ.
ಈ ಮೂಲಕ ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕುರಿಗಾಹಿಗಳ ಬದುಕಿನ ಅಭಿವೃದ್ಧಿಯತ್ತವೂ ಚಿತ್ತ ಹರಿಸಿದ್ದಾರೆ.

Good news for poultry, sheep and pig farmers, Incentives are available along with training