ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯೂ (Gruha Lakshmi Scheme) ಒಂದಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಯೋಜನೆ ಜಾರಿ ಮಾಡಲಾಗಿದೆ.

ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ (Bank Account) ೨೦೦೦ ರೂ. ಸರ್ಕಾರದಿಂದ ಜಮಾ ಮಾಡಲಾಗುತ್ತದೆ. ಈ ಯೋಜನೆಗೆ ೨೦೨೩ರ ಆಗಸ್ಟ್ ನಲ್ಲಿ ಚಾಲನೆ ನೀಡಲಾಯಿತು. ಆದರೂ ಈ ಯೋಜನೆ ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ.

Here's a big update for Gruha Lakshmi Yojana Money Deposit

ಈವರೆಗೂ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಹಣ ನೀಡಲು ಸಾಧ್ಯವಾಗಿಲ್ಲ. ಶೇ.೮೦ ರಷ್ಟು ಜನರಿಗೆ ಮಾತ್ರ ಡಿಬಿಟಿ ಮೂಲಕ ಹಣ ಜಮಾ ಆಗುತ್ತಿದೆ ಎನ್ನುವ ಮಾಹಿತಿ ಬಂದಿದೆ.

ರೇಷನ್ ಕಾರ್ಡ್ ಇರೋರಿಗೆ ಇದು ಖುಷಿಯ ವಿಚಾರ! ಈಗ ಸಿಗುತ್ತೆ ಇನ್ನಷ್ಟು ಬೆನಿಫಿಟ್

ಒಂದು ವೇಳೆ ಈ ಹಣ ಪಡೆದುಕೊಳ್ಳುತ್ತಿದ್ದ ಮಹಿಳೆ ಮೃತಪಟ್ಟರೆ ಆ ಹಣ ಯಾರಿಗೆ ಸೇರಬೇಕು? ಎನ್ನುವ ಸಮಸ್ಯೆ ಎದುರಾಗಿದೆ. ಅದಕ್ಕೂ ಸಹ ಸರ್ಕಾರಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ೭ ಕಂತುಗಳ ಹಣ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಿದ ಶೇ.೮೦ ರಷ್ಟು ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತಿದೆ.

ಜಮಾ ಆಗದ ಕೆಲ ಮಹಿಳೆಯರು ತಮ್ಮ ಖಾತೆಗೆ ಹಣ ಜಮಾ ಆಗುತ್ತಿಲ್ಲ (Money Deposit) ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಸರ್ಕಾರವು ನಿಮ್ಮ ಬ್ಯಾಂಕ್ ಖಾತೆ ಪರಿಶೀಲನೆ ಮಾಡಿಕೊಳ್ಳಿ, ಅದರಲ್ಲಿ ಏನಾದರೂ ತಾಂತ್ರಿಕ ದೋಷ ಇದ್ದರೆ ಹಣ ಜಮಾ ಮಾಡಲು ಆಗುವುದಿಲ್ಲ. ಅಲ್ಲದೆ ಖಾತೆಯಲ್ಲಿ ಒಂದು ವೇಳೆ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿಯೂ ಖಾತೆ ಆರಂಭಿಸಿ ಅದನ್ನು ಗೃಹ ಲಕ್ಷ್ಮಿ ಯೋಜನೆಗೆ ಜೋಡಣೆ ಮಾಡಬಹುದು ಎಂದು ತಿಳಿಸಿತ್ತು. ಇದರ ಜೊತೆ ಇ-ಕೆವೈಸಿ ಮಾಡಲೂ ಸಹ ಮನವಿ ಮಾಡಿಕೊಂಡಿತ್ತು.

ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗಿನ್ನೂ ಹಣ ಬಂದಿಲ್ವಾ?

Gruha Lakshmi Yojanaಮನೆಯ ಯಜಮಾನಿ ಮೃತಪಟ್ಟರೆ ಯಾರ ಖಾತೆಗೆ ಹೋಗುತ್ತೆ ಹಣ?

ಗೃಹ ಲಕ್ಷ್ಮಿ ಯೋಜನೆ ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿದೆ. ಇದೀಗ ಹೊಸ ಗೊಂದಲ ಶುರುವಾಗಿದ್ದು, ಈ ಗೃಹ ಲಕ್ಷ್ಮಿ ಹಣ ಪಡೆಯುವ ಮಹಿಳೆ ಮೃತಪಟ್ಟರೆ ಆ ಹಣ ಯಾರ ಖಾತೆಗೆ (Bank Account) ಜಮಾ ಆಗಲಿದೆ ಎಂದು ಮಹಿಳೆಯರು ಕೇಳುತ್ತಿದ್ದಾರೆ.

ಕುರಿ-ಕೋಳಿ-ಹಂದಿ ಸಾಕಣೆ ಮಾಡೋರಿಗೆ ಖುಷಿ ಸುದ್ದಿ; ತರಬೇತಿ ಜೊತೆ ಸಿಗುತ್ತೆ ಪ್ರೋತ್ಸಾಹ ಧನ

ಇದಕ್ಕೆ ಕಾರಣವೂ ಇದೆ. ಗದಗ ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಯೊಬ್ಬರು ಮೃತಪಟ್ಟಿದ್ದರು. ಅವರಿಗೆ ೨-೩ ಕಂತಿನ ಹಣ ಜಮಾ ಆಗಿತ್ತು. ಅವರು ಮೃತಪಟ್ಟ ನಂತರವೂ ಹಣ ಜಮಾ ಆಗುತ್ತಿತ್ತು. ಆಗ ಆಕೆಯ ಕುಟುಂಬದವರು ಗೃಹ ಲಕ್ಷ್ಮಿ ಹಣ ಪಡೆಯುವ ಮಹಿಳೆ ಮೃತಪಟ್ಟಿದ್ದಾರೆ. ಆ ಖಾತೆಗೆ ಬರುವ ಹಣವನ್ನು ಯಾರ ಖಾತೆಗೆ ವರ್ಗಾಯಿಸಬೇಕು ಎಂದು ಕೇಳಿದ್ದಾರೆ. ಇದಕ್ಕೆ ಸರ್ಕಾರದಿಂದ ಸ್ಪಷ್ಟನೆಯೂ ಬಂದಿದೆ.

ಒಂದು ವೇಳೆ ಗೃಹ ಲಕ್ಷ್ಮಿ ಫಲಾನುಭವಿ ಮೃತಪಟ್ಟಿದ್ದರೆ ಆಕೆಯ ಕುಟುಂಬದ ಹಿರಿಯ ಸೊಸೆ ಪಡಿತರ ಚೀಟಿಯಲ್ಲಿ (Ration Card) ಮನೆಯ ಯಜಮಾನಿಯ ಜಾಗದಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಂಡು ಅರ್ಜಿ ಸಲ್ಲಿಸಿದರೆ ಅವರಿಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ರೈತರಿಗೆ ಭರ್ಜರಿ ಉಡುಗೊರೆ ನೀಡಿದ ಸರ್ಕಾರ; ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ

who will get the Gruha lakshmi Scheme money if Beneficiary Died