ತಮ್ಮ ಹೊಲ ಅಥವಾ ಗದ್ದೆಗಳಲ್ಲಿ ಕಷ್ಟಪಟ್ಟು ದುಡಿಯುವ ರೈತರು (farmers) ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೂ ಕೂಡ ಬಹಳ ಶ್ರಮಿಸುತ್ತಾರೆ. ಎಷ್ಟೋ ಬಾರಿ ಎಷ್ಟೋ ರೈತರಿಗೆ ತಮ್ಮ ಮಕ್ಕಳನ್ನು ಸರಿಯಾಗಿ ಓದಿಸಲು ಆರ್ಥಿಕ ಸಮಸ್ಯೆ (financial problem) ಎದುರಾಗುತ್ತದೆ.
ಇದಕ್ಕಾಗಿ ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ರೈತ ಮಕ್ಕಳು ಸ್ಕಾಲರ್ಶಿಪ್ (Education scholarship) ಹಣ ಪಡೆದುಕೊಳ್ಳಬಹುದಾಗಿದೆ.
ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಹಣ ಯಾರಿಗೆ ಸಿಗುತ್ತೆ? ಇಲ್ಲಿದೆ ಮಾಹಿತಿ
ರೈತ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ನೀಡುತ್ತಿರುವ ಸರ್ಕಾರ!
ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಹಾಗೂ ಕೃಷಿ ಇಲಾಖೆಯ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮದ (CM Vidya Nidhi program) ಅಡಿಯಲ್ಲಿ ರೈತ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಗತ್ಯ ಇರುವ ಆರ್ಥಿಕ ನೆರವನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು.
ವೇತನ ಪಡೆಯಲು ಯಾರು ಅರ್ಹರು?
ಸಾಮಾನ್ಯ ರೈತರ ಮಕ್ಕಳು ತಮ್ಮ ಕುಟುಂಬದ ಆದಾಯ 2.5 ಲಕ್ಷ ವೀರದಂತೆ ಇದ್ದರೆ ಈ ಸ್ಕಾಲರ್ಶಿಪ್ (scholarship)ಗೆ ಅರ್ಜಿ ಸಲ್ಲಿಸಬಹುದು. ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ ಎಸ್ ಎಸ್ ಪಿ ಗೆ ಲಾಗಿನ್ ಆಗಿ ವಿದ್ಯಾರ್ಥಿಗಳು ತಮ್ಮ ಆದಾಯ ಪ್ರಮಾಣ ಪತ್ರವನ್ನು ಸಬ್ಮಿಟ್ ಮಾಡಬೇಕಾಗುತ್ತದೆ. ಫೆಬ್ರವರಿ 29 ಅಂದ್ರೆ ಕೊನೆಯ ದಿನದ ಒಳಗೆ ನಿಮ್ಮ ಆದಾಯ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.
ರೇಷನ್ ಕಾರ್ಡ್ ಇರೋರಿಗೆ ಇದು ಖುಷಿಯ ವಿಚಾರ! ಈಗ ಸಿಗುತ್ತೆ ಇನ್ನಷ್ಟು ಬೆನಿಫಿಟ್
ಯಾರಿಗೆ ಸಿಗುವುದಿಲ್ಲ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ?
ಭೂ ರಹಿತ ಕೃಷಿ ಕಾರ್ಮಿಕ ವಿದ್ಯಾರ್ಥಿ ವೇತನ ಹಾಗೂ 2023 24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾಮಾಜಿಕ ಕಲ್ಯಾಣ ಇಲಾಖೆ ವಿತರಣೆ ಮಾಡುವ ಸ್ಕಾಲರ್ಶಿಪ್ ಪ್ರಯೋಜನವನ್ನು ಈಗಾಗಲೇ ಪಡೆದುಕೊಂಡಿರುವವರಿಗೆ ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಸಿಗುವುದಿಲ್ಲ.
ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗಿನ್ನೂ ಹಣ ಬಂದಿಲ್ವಾ?
2024ರಲ್ಲಿ ರೈತ ಮಕ್ಕಳಿಗೆ ವಿತರಣೆ ಮಾಡಲಾಗುವ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಹ ವಿದ್ಯಾರ್ಥಿಗಳು (students) ರೈತ ವಿದ್ಯಾನಿಧಿ ವೆಬ್ಸೈಟ್ ಗೆ ಹೋಗಿ ಹೆಚ್ಚಿನ ಮಾಹಿತಿ ತಿಳಿದುಕೊಂಡು ಅಗತ್ಯ ಇರುವ ದಾಖಲೆಗಳನ್ನು ತಕ್ಷಣ ಅಪ್ಲೋಡ್ ಮಾಡಿ ಇದರಿಂದ ಯಾವುದೇ ಕಾರಣಕ್ಕೂ ಮಿಸ್ ಆಗದೆ ನಿಮ್ಮ ಖಾತೆಗೆ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ಹಣ ಬಂದು ಸೇರುತ್ತದೆ.
Farmers children will get Raita Vidyanidhi Education scholarship
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.