ಹೊಸ ರೇಷನ್ ಕಾರ್ಡಿಗಾಗಿ ಕಾದು ಕುಳಿತವರಿಗೆ ಸಿಹಿ ಸುದ್ದಿ! ಇಲ್ಲಿದೆ ಬಿಗ್ ಅಪ್ಡೇಟ್

ಯೋಜನೆಗಳ ಪ್ರಯೋಜನವನ್ನು ಪಡೆಯಲು ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಇರಬೇಕು

ಸರ್ಕಾರ (State government) ದಿಂದ ಅನುಮೋದನೆಗೊಂಡು ಜನರಿಗೆ ತಲುಪುತ್ತಿರುವ ಯೋಜನೆಗಳು ಸಾಕಷ್ಟು. ರಾಜ್ಯ ಸರ್ಕಾರ ಇರಲಿ, ಕೇಂದ್ರ ಸರ್ಕರವಿರಲಿ, ಜನರ ಸ್ವಾವಲಂಬನೆಯ ಜೀವನ (independence life) ಕ್ಕೆ ಅನುಕೂಲವಾಗುವಂತಹ ಹಾಗೂ ಜನರ ಹಸಿವನ್ನು ನೀಗಿಸುವಂತಹ ಪ್ರಯತ್ನವನ್ನು ಮಾಡುತ್ತದೆ. ಈ ಪ್ರಯತ್ನಕ್ಕೆ ಒಂದು ಸಾಕ್ಷಿ ಎಂದರೆ ಬಡ ಜನರಿಗೆ ಪಡಿತರ ವಿತರಣೆ ಮಾಡುವುದು.

ರಾಜ್ಯದಲ್ಲಿ ವಾಸಿಸುವ ಅದೆಷ್ಟೋ ಜನರು ಇಂದು ಉಚಿತವಾಗಿ ಪಡಿತರ ಧಾನ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇದರ ಜೊತೆಗೆ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳಂತಹ ಯೋಜನೆಗಳ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ಇದೆಲ್ಲ ಸಾಧ್ಯವಾಗುವುದು ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಇದ್ದಾಗ ಮಾತ್ರ.

ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ

ಹೊಸ ರೇಷನ್ ಕಾರ್ಡ್ ವಿತರಣೆಗೆ ರಾಜ್ಯ ಸರ್ಕಾರದ ಚಿಂತನೆ! (New ration card distribution)

ಈಗಾಗಲೇ ರಾಜ್ಯ ಸರ್ಕಾರಕ್ಕೆ ವಿಧಾನಸಭಾ ಎಲೆಕ್ಷನ್ಗೂ (vidhansabha election) ಮೊದಲೇ ಸಲ್ಲಿಕೆ ಆಗಿರುವ ರೇಷನ್ ಕಾರ್ಡ್ ಅಪ್ಲಿಕೇಶನ್ (Ration card applications) ಗಳು ಸುಮಾರು ಮೂರು ಲಕ್ಷದಷ್ಟು ವಿತರಣೆ ಮಾಡುವುದಕ್ಕೆ ಸರ್ಕಾರ ಬಹಳ ವಿಳಂಬ ಮಾಡಿದೆ, ಇಲ್ಲಿಯವರೆಗೆ ಅಗತ್ಯ ಇರುವವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

BPL Ration Cardಆರು ಇಲಾಖೆಯ ಸಚಿವ ಕೆ ಹೆಚ್ ಮುನಿಯಪ್ಪ (K. H muniyappa) ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಕೆ ಆಗಿದೆ ಅಂತ ಅರ್ಜಿಗಳನ್ನು ಮೊದಲು ಪರಿಶೀಲಿಸಬೇಕು, ಪರಿಶೀಲಿಸಿದ ನಂತರ ಯಾರು ಅರ್ಹರು ಅವರಿಗೆ ಈ ಅರ್ಜಿ ಸ್ವೀಕಾರಗೊಂಡಿರುವ ಬಗ್ಗೆ ಮಾಹಿತಿ ಒದಗಿಸಬೇಕು.

ರೈತರ ಮಕ್ಕಳಿಗೆ ಸಿಗಲಿದೆ “ರೈತ ವಿದ್ಯಾನಿಧಿ” ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

ಇನ್ನು ಈ ಅರ್ಜಿಗಳಲ್ಲಿ ಎಪಿಎಲ್ (APL Card) ಕಾರ್ಡಿಗೆ ಸೇರುವ ಅರ್ಜಿಗಳು ಎಷ್ಟು ಹಾಗೂ ಬಿಪಿಎಲ್ ಕಾರ್ಡ್ ಕಾಗಿ ಸಲ್ಲಿಕೆ ಆಗಿರುವ ಅರ್ಜಿಗಳು ಎಷ್ಟು ಎಂಬುದನ್ನು ಸರ್ಕಾರ ಪರಿಶೀಲಿಸಬೇಕು. ಈ ಹಿನ್ನೆಲೆಯಲ್ಲಿ ಇದೇ ಬರುವ ಮಾರ್ಚ್ 31ನೇ ತಾರೀಕಿನವರೆಗೆ ಅರ್ಜಿಗಳನ್ನು ಪರಿಶೀಲನೆ ಮಾಡಿ ಏಪ್ರಿಲ್ ಒಂದನೇ ತಾರೀಖಿನಿಂದ ಹೊಸ ಪಡಿತರ ಚೀಟಿ ವಿತರಣೆ ಆರಂಭವಾಗುತ್ತದೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದರು.

ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸಬಹುದೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಖಂಡಿತವಾಗಿಯೂ ಹೌದು. ಏಪ್ರಿಲ್ ಒಂದರಿಂದ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಹೊಸ ಕಾರ್ಡ್ ವಿತರಣೆ ಮಾಡಲಾಗುವುದು

ಇದರ ಜೊತೆ ಜೊತೆಯಲಿ ಇನ್ನಷ್ಟು ಪಡಿತರ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸ್ವೀಕಾರ ಕೂಡ ಮಾಡಲಾಗುವುದು ಎಂದು ಸರ್ಕಾರ ತಿಳಿಸಿ. ಮೆಡಿಕಲ್ ಎಮರ್ಜೆನ್ಸಿ (medical emergency) ಸಮಯದಲ್ಲಿ ಸರ್ಕಾರದ ಪ್ರಯೋಜನ ಪಡೆದುಕೊಳ್ಳುವುದಕ್ಕೆ ತುರ್ತು ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಸುಲಭವಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ.

ಲೇಬರ್ ಕಾರ್ಡ್ ಪಡೆದುಕೊಳ್ಳಲು ಮತ್ತೊಮ್ಮೆ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ!

ಒಟ್ಟಿನಲ್ಲಿ ಇಲ್ಲಿಯವರೆಗೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಕಾದು ಕುಳಿತವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ ಹಾಗೂ ಹೊಸ ಅರ್ಜಿ ಸಲ್ಲಿಸುವವರಿಗೂ ಕೂಡ ಅನುಕೂಲ ಮಾಡಿಕೊಡಲಿದೆ ಎನ್ನಬಹುದು.

Good news for those waiting for new ration card, Here’s the big update