ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ

ಇನ್ನು ಮುಂದೆ ಸ್ವಂತ ಮನೆ ಅಥವಾ ಆಸ್ತಿ ಹೊಂದಿರುವವರು ಆರ್ ಟಿ ಸಿ ಜೊತೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರ, ರಾಜ್ಯದಲ್ಲಿ ಇರುವ ಬಡ ರೈತರ (farmers ) ಅನುಕೂಲಕ್ಕಾಗಿ ಬೇರೆಬೇರೆ ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರಿಗೆ ಹೆಚ್ಚು ಅನುಕೂಲವಾಗಿದೆ. ಅಷ್ಟೇ ಅಲ್ಲದೆ ರೈತರ ಜಮೀನಿಗೆ (Property) ಸಂಬಂಧಪಟ್ಟಂತೆ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಈ ನಿಯಮಗಳ ಮೂಲಕ ರಾಜ್ಯದಲ್ಲಿ ಇರುವ ಸಣ್ಣ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಿಕೊಡಲಾಗಿದೆ.

ರಾಜ್ಯದಲ್ಲಿ ಸಾಕಷ್ಟು ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಅಂತಹ ಸ್ಥಳದಲ್ಲಿ ವಾಸಿಸುವ ರೈತರಿಗೆ ರಾಜ್ಯ ಸರ್ಕಾರ ‘ಪರಿಹಾರ ನಿಧಿ’ಯನ್ನು ಕೂಡ ಘೋಷಿಸಿದೆ. ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ.

ರೈತರ ಮಕ್ಕಳಿಗೆ ಸಿಗಲಿದೆ “ರೈತ ವಿದ್ಯಾನಿಧಿ” ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ - Kannada News

ಆರ್ ಟಿ ಸಿ ಆಧಾರ್ ಲಿಂಕ್! (RTC link with aadhaar)

ಗ್ರಾಹಕರು ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ಎಂದು ಸರ್ಕಾರ ತಿಳಿಸಿದೆ. ಯಾಕಂದ್ರೆ ರಾಜ್ಯದಲ್ಲಿ ಶೇಕಡ 70% ನಷ್ಟು ಸಣ್ಣ ರೈತರು ವಾಸಿಸುತ್ತಾರೆ. ಆದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಪ್ರಕಾರ ರಾಜ್ಯದಲ್ಲಿ ವಾಸಿಸುವ ರೈತರ ಸಂಖ್ಯೆ ಕೇವಲ 44% ಮಾತ್ರ. ಇದಕ್ಕೆ ಕಾರಣ ರೈತರ ಜಮೀನು ಆಸ್ತಿ ಯಾವುದು ಅಪ್ಡೇಟ್ ಆಗಿಲ್ಲ.

ಇನ್ನು ಮುಂದೆ ಸ್ವಂತ ಮನೆ ಅಥವಾ ಆಸ್ತಿ ಹೊಂದಿರುವವರು ಆರ್ ಟಿ ಸಿ ಜೊತೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಈ ರೀತಿ ಮಾಡುವುದರಿಂದ, ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಬಿಡುಗಡೆ ಆಗುವ ಯೋಜನೆಗಳು ಸಿಗುತ್ತವೆ.

ಈಗಾಗಲೇ ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗದೆ ಇರುವವರು ಮೊದಲು ತಮ್ಮ ಸ್ವಂತ ಜಮೀನು ಅಥವಾ ಇತರ ಆಸ್ತಿಗೆ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಿಸಬೇಕು.

ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಹಣ ಯಾರಿಗೆ ಸಿಗುತ್ತೆ? ಇಲ್ಲಿದೆ ಮಾಹಿತಿ

Property documentsಆಧಾರ್ ಲಿಂಕ್ ಮಾಡಿಸಿಕೊಳ್ಳುವುದು ಹೇಗೆ?

ರೈತರು ತಮ್ಮ ಭೂಮಿಯ ಪಹಣಿ ಜೊತೆಗೆ ಆಧಾರ ಲಿಂಕ್ ಮಾಡಿಸಿಕೊಳ್ಳುವುದು ಇನ್ನು ಮುಂದೆ ಕಡ್ಡಾಯ ಆಗಲಿದೆ ಇದಕ್ಕಾಗಿ ನೀವು ಆನ್ಲೈನ್ ನಲ್ಲಿಯೇ ಆಧಾರ್ ಲಿಂಕ್ ಮಾಡಿ ಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.

ರೇಷನ್ ಕಾರ್ಡ್ ಇರೋರಿಗೆ ಇದು ಖುಷಿಯ ವಿಚಾರ! ಈಗ ಸಿಗುತ್ತೆ ಇನ್ನಷ್ಟು ಬೆನಿಫಿಟ್

https://www.youtube.com/watch?v=jfhYEWBNlSY ಈ ವೆಬ್ ಸೈಟ್ ಗೆ ಹೋಗಿ ನಿಮ್ಮ ಆಸ್ತಿ ವಿವರ ಹಾಗೂ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಮಾಡಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಹೆಸರು ಯಾವಾಗಲೂ ಸರ್ಕಾರದ ಡೇಟಾ ಒಳಗೆ ಸಂಗ್ರಹವಾಗಿರುತ್ತದೆ ಹಾಗೂ ನಿಮಗೆ ಅನ್ವಯವಾಗುವಂತಹ ಯಾವುದೇ ಯೋಜನೆ ಜಾರಿಗೆ ಬಂದರೂ ಅದು ನಿಮ್ಮನ್ನು ತಲುಪುತ್ತದೆ.

Link Aadhaar to house, property, land, Here is important information

Follow us On

FaceBook Google News

Link Aadhaar to house, property, land, Here is important information