ರದ್ದಾದ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ನಿಮ್ಮ ಹೆಸರು ಸಹ ಇದಿಯಾ ಚೆಕ್ ಮಾಡಿ

ಬಿಪಿಎಲ್ ಕಾರ್ಡ್ (BPL Ration card) ಎನ್ನುವುದು ಗ್ಯಾರಂಟಿ ಯೋಜನೆ (guarantee schemes) ಗಳಿಗೆ ಬಹಳ ಮುಖ್ಯವಾಗಿರುವ ದಾಖಲೆ

ಒಂದು ವೇಳೆ ರದ್ದಾಗಿರುವ ರೇಷನ್ ಕಾರ್ಡ್ (ration card cancelled list) ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ ಸರ್ಕಾರದಿಂದ ಪಡೆಯುತ್ತಿರುವ ಯಾವ ಯೋಜನೆಯ ಪ್ರಯೋಜನವು ಕೂಡ ನಿಮಗೆ ಸಿಗದೇ ಇರಬಹುದು.

ಅದರಲ್ಲಿಯೂ ಬಿಪಿಎಲ್ ಕಾರ್ಡ್ (BPL card) ಎನ್ನುವುದು ಗ್ಯಾರಂಟಿ ಯೋಜನೆ (guarantee schemes) ಗಳಿಗೆ ಬಹಳ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಈವರೆಗೆ ಯಾರ ಖಾತೆಗೆ ಡಿಬಿಟಿ (DBT ) ಹಣ ಬರುತ್ತದೆಯೋ, ಅಂಥವರು ಇನ್ನು ಮುಂದಿನ ದಿನಗಳಲ್ಲಿ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.

ಹೌದು,ಸರ್ಕಾರ ಈಗಾಗಲೇ ಲಕ್ಷಾಂತರ ಅನರ್ಹ ಪಡಿತರ ಚೀಟಿ ರದ್ದು ಪಡಿಸುವ ಕೆಲಸದಲ್ಲಿ ನಿರತವಾಗಿದೆ ಪ್ರತಿ ತಿಂಗಳು ಪರಿಶೀಲನೆ ನಡೆಸಿ, ಅನರ್ಹ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತಿದೆ. ಇಲ್ಲಿಯವರೆಗೆ ಸರಿ ಸುಮಾರು 4.59 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಅನರ್ಹ ಎಂದು ಘೋಷಿಸಿ ರದ್ದು ಪಡಿಸಲಾಗಿದೆ.

ರದ್ದಾದ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ನಿಮ್ಮ ಹೆಸರು ಸಹ ಇದಿಯಾ ಚೆಕ್ ಮಾಡಿ - Kannada News

ಯುವನಿಧಿ ಯೋಜನೆ ಹಣ ಪಡೆಯೋಕೆ ಹೊಸ ನಿಯಮ! ಇನ್ಮುಂದೆ ಈ ದಾಖಲೆ ಕಡ್ಡಾಯ

ಈಗಾಗಲೇ ಸರ್ಕಾರ ತಿಳಿಸಿರುವ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ (below poverty line) ಜನರನ್ನು ಹೊರತುಪಡಿಸಿ ಬೇರೆಯವರು ಅಂದರೆ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತವರಿಗೆ ಬುದ್ಧಿ ಕಲಿಸಲು ಅಂತಹ ಕಾರ್ಡ್ ರದ್ದುಪಡಿ (Ration Card correction) ಮಾಡಲು ಸರ್ಕಾರ ನಿರ್ಧರಿಸಿದೆ.

ಈಗಾಗಲೇ ಜನರಿಗೆ ಇದರ ಬಿಸಿ ಮುಟ್ಟಿದ್ದು, ಕಳೆದ ಕೇವಲ 15 ದಿನಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನರು ತಮ್ಮ ಬಿಪಿಎಲ್ ಪಡಿತರ ಕಾರ್ಡ್ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೋಟ್ಯಾಂತರ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ!

ಕೇವಲ ಕರ್ನಾಟಕ ರಾಜ್ಯ ಒಂದರಲ್ಲಿಯೆ 1.27 ಕೋಟಿ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗಿದೆ. ಇದರಿಂದ ಸುಮಾರು 4.36 ಕೋಟಿ ಜನರು ಲಾಭ ಪಡೆದುಕೊಂಡಿದ್ದಾರೆ. ಆದರೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅದರದೇ ಆದ ಮಾನದಂಡಗಳನ್ನು 2016ನೇ ಇಸ್ವಿಯಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಆದರೆ ಈ ಮಾನದಂಡಗಳ ಒಳಗೆ ಬಾರದೆ ಇರುವವರು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವವರು ಕೂಡ ಸರ್ಕಾರದಿಂದ ಸಿಗುವ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಹಾಗೂ ಉಚಿತ ಪಡಿತರ ಪಡೆದುಕೊಳ್ಳುವುದಕ್ಕೆ ಬಿಪಿಎಲ್ ಕಾರ್ಡ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಈ ರೀತಿ ಅಕ್ರಮವಾಗಿ ಬಿಬಿಎಲ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಬಾರಿ ಪ್ರಮಾಣದ ದಂಡ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

6ನೇ ಕಂತಿನ ಗೃಹಲಕ್ಷ್ಮಿ ಹಣ ಇಂತಹವರ ಖಾತೆಗೆ ಜಮಾ ಆಗೋದಿಲ್ಲ! ಇಲ್ಲಿದೆ ಕಾರಣ

BPL Ration Cardಬಾಳ ಕಟ್ಟುನಿಟ್ಟಿನಿಂದ ಆಹಾರ ಇಲಾಖೆಯ ಕಡೆಯಿಂದ ಜನರ ರೇಷನ್ ಕಾರ್ಡ್ ಪರಿಶೀಲನೆ ನಡೆಯುತ್ತಿದೆ. ಹೀಗಾಗಿ ಯಾರು ಅನರ್ಹರು ಅಂತವರಿಗೆ ಬಿಪಿಎಲ್ ಕಾರ್ಡ್ ಕೊಡಲಾಗುವುದಿಲ್ಲ. ಅದರ ಬದಲು ಎಪಿಎಲ್ ಕಾರ್ಡ್ (APL Card) ಹೊಂದಿರಬಹುದು. ಇದೇ ಕಾರಣಕ್ಕೆ ಇಂದು ಲಕ್ಷಾಂತರ ಜನರು ತಮ್ಮ ಬಿಪಿಎಲ್ ಕಾರ್ಡ್ ಅನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ ಎನ್ನಬಹುದು.

ಹೊಸ ರೇಷನ್ ಕಾರ್ಡಿಗಾಗಿ ಕಾದು ಕುಳಿತವರಿಗೆ ಸಿಹಿ ಸುದ್ದಿ! ಇಲ್ಲಿದೆ ಬಿಗ್ ಅಪ್ಡೇಟ್

ಬಿಪಿಎಲ್ ಅನರ್ಹರ ಪಟ್ಟಿಯ ಲಿಸ್ಟ್ ಚೆಕ್ ಮಾಡುವುದು ಹೇಗೆ?

ಆಹಾರ ಇಲಾಖೆ ಪ್ರತಿ ತಿಂಗಳು ಕೂಡ ಅನರ್ಹರ ಬಿಪಿಎಲ್ ಕಾರ್ಡ್ ಪರಿಶೀಲನೆ ಮಾಡಿ ರಿಜೆಕ್ಟ್ ಮಾಡಿದ ನಂತರ ಆ ಲಿಸ್ಟ್ ಅನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡುತ್ತದೆ ಹಾಗಾಗಿ ನೀವು ಅಲ್ಲಿ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.

*ಮೊದಲು https://ahara.kar.nic.in/Home/EServices ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

*ಎಡಬಾಗದಲ್ಲಿ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.

*ಇ – ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

*show cancelled/suspended list ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

ರೈತರ ಮಕ್ಕಳಿಗೆ ಸಿಗಲಿದೆ “ರೈತ ವಿದ್ಯಾನಿಧಿ” ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

*ಈಗ ಹೊಸ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ವರ್ಷ ಮೊದಲಾದವುಗಳನ್ನು ಆಯ್ಕೆ ಮಾಡಿ go ಎಂದು ಕೊಡಿ. ಈಗ ನೀವು ಯಾವ ವರ್ಷ ಯಾವ ತಿಂಗಳು ಆಯ್ಕೆ ಮಾಡಿದ್ದೀರೋ, ಆ ತಿಂಗಳಿನಲ್ಲಿ ರದ್ದಾಗಿರುವ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರು ಕೂಡ ಇದ್ರೆ ಸರ್ಕಾರದ ಯೋಜನೆಯ ಪ್ರಯೋಜನಗಳು ಇನ್ನು ಮುಂದೆ ನಿಮಗೆ ಸಿಗುವುದಿಲ್ಲ ಎಂದು ಅರ್ಥ.

Canceled ration card list published, Check if your name is also there

Follow us On

FaceBook Google News

Canceled ration card list published, Check if your name is also there