ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣಕ್ಕಾಗಿ ಕಾಯುತ್ತಿರುವ ಜನರಿಗೆ ಹೊಸ ಅಪ್ಡೇಟ್
ಗೃಹಲಕ್ಷ್ಮಿ ಯೋಜನೆಯ ಹಣ ಬಹುತೇಕ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರ ಖಾತೆಗೆ (Bank Account) ಜಮಾ ಆಗಿದೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಡಿಯಲ್ಲಿ 12,000ಗಳನ್ನು ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯಡಿಯಲ್ಲಿ ಪ್ರತಿ ಕುಟುಂಬವು ಬೇರೆ ಬೇರೆ ಮೊತ್ತದ ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಾಗಿದೆ.
ಇದಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರಣ ಎಂದು ಹೇಳಬಹುದು. ಇದೀಗ ಈ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಮುಂದಿನ ಕಂತಿನ ಹಣ ಬಿಡುಗಡೆಯ ಬಗ್ಗೆ ಮಾಹಿತಿಯನ್ನು ನೀಡಿದೆ.
ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋ ಮಹಿಳೆಯರಿಗೆ ಸಿಕ್ತು ಪರಿಹಾರ! ಇಲ್ಲಿದೆ ಮಾಹಿತಿ
ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ತಿಳಿದುಕೊಳ್ಳುವುದು ಹೇಗೆ?
ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬಹುತೇಕ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರ ಖಾತೆಗೆ (Bank Account) ಜಮಾ ಆಗಿದೆ. ಆದರೂ ಕೂಡ ಇನ್ನೂ ಒಂದಿಷ್ಟು ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ.
ಇನ್ನು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು ಹಳ್ಳಿಯಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಸಾಕಷ್ಟು ಅನುಕೂಲ ಇಲ್ಲ ಅಥವಾ ಅವರಿಗೆ ಹೀಗೆ ತಿಳಿಯಬಹುದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಆಗಾಗ ಬ್ಯಾಂಕಿಗೆ ಹೋಗಿ ಪ್ರಶ್ನೆ ಮಾಡುವಂತೆ ಆಗಿದೆ.
ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳು 13 ರಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಡಿ ಬಿ ಟಿ (DBT) ಹಣ ನಿಮ್ಮ ಖಾತೆಯನ್ನು ತಲುಪಬೇಕು.
ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ; ಇಲ್ಲಿದೆ ಡೀಟೇಲ್ಸ್
ನಿಮಗೆ ಮೊದಲ ಒಂದೆರಡು ಕಂತಿನ ಹಣ ಬಂದಿದ್ದು, 6ನೇ ಕಂತಿನ ಹಣ ಇದುವರೆಗೆ ಬಂದಿಲ್ಲ ಎಂದಾದರೆ ತಕ್ಷಣ ನಿಮ್ಮ ಬ್ಯಾಂಕ್ ಗೆ ಹೋಗಿ ಕೆ ವೈ ಸಿ (KYC) ಅಪ್ಡೇಟ್ ಮಾಡಿಸಿಕೊಳ್ಳಿ. ಆಧಾರ್ ಸೀಡಿಂಗ್ ನಿಮ್ಮ ಬ್ಯಾಂಕ ಖಾತೆಗೆ ಆಗಿರಬಹುದು ಆದರೆ ಅದರ ಅಪ್ಡೇಟ್ ಮಾಡಿಸುವುದು ಬಹಳ ಮುಖ್ಯ ಜೊತೆಗೆ ಎನ್‌ಪಿಸಿಐ ಮ್ಯಾಪಿಂಗ್ ಆಗಿದ್ಯೋ ಇಲ್ಲವೋ ಚೆಕ್ ಮಾಡಿ.
ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಸಕಲ ತಯಾರಿ ನಡೆಸಿದೆ. ಫೆಬ್ರವರಿ ತಿಂಗಳಿನ ಹಣವನ್ನು ಮಾರ್ಚ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ ಮಾರ್ಚ್ 20 ನೇ ತಾರೀಖಿನ ಒಳಗೆ ಪ್ರತಿಯೊಬ್ಬ ಮಹಿಳೆಯರಿಗೂ ಏಳನೇ ಕಂತಿನ ಹಣವೂ ಕೂಡ ವರ್ಗಾವಣೆ ಆಗಲಿದೆ.
ಇದನ್ನು ನೀವು ನಿಮಗೆ ಬರುವ ಸಂದೇಶದ ಮೂಲಕ ತಿಳಿದುಕೊಳ್ಳಬಹುದು. ಅಥವಾ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿದ್ರೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಸಿಗುತ್ತದೆ.
ಇನ್ನೂ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಆಗದೇ ಇರೋರಿಗೆ ಭರ್ಜರಿ ಸುದ್ದಿ!
ಅನ್ನಭಾಗ್ಯ ಯೋಜನೆಯ ಮುಂದಿನ ಕಂತಿನ ಹಣ ಬಿಡುಗಡೆ ಅಪ್ಡೇಟ್!
ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 35 ಕೆಜಿ ಉಚಿತ ಅಕ್ಕಿ ಸಿಗುತ್ತಿದೆ. ಇನ್ನೂ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಕೇಂದ್ರ ಸರ್ಕಾರದ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ.
ಸರ್ಕಾರ ಹೆಚ್ಚುವರಿ ಯಾಗಿ 5 ಕೆಜಿ ಅಕ್ಕಿಯನ್ನು ಒದಗಿಸಬೇಕಿತ್ತು. ಆದರೆ ಇದು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ ಪ್ರತಿಯೊಬ್ಬ ಸದಸ್ಯರು ಐದು ಕೆಜಿ ಅಕ್ಕಿಗೆ ಬದಲಾಗಿ 170ಗಳನ್ನು ಪಡೆದುಕೊಳ್ಳುತ್ತಿದ್ದಾನೆ.
ರದ್ದಾದ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ನಿಮ್ಮ ಹೆಸರು ಸಹ ಇದಿಯಾ ಚೆಕ್ ಮಾಡಿ
ಇನ್ನು ಅನ್ನ ಭಾಗ್ಯ ಯೋಜನೆಯ ಫೆಬ್ರವರಿ ತಿಂಗಳಿನ ಹಣ ಮಾರ್ಚ್ 13ನೇ ತಾರೀಖಿನ ಆಸುಪಾಸಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ರೇಷನ್ ಕಾರ್ಡ್ ರದ್ದುಪಡಿ ಕಾರ್ಯವು ಕೂಡ ಹಿನ್ನೆಲೆಯಲ್ಲಿ ನಡೆಯುತ್ತಿರುವುದರಿಂದ ಅನ್ನ ಭಾಗ್ಯ ಯೋಜನೆಯ ಈ ಕಂತಿನ ಹಣ ನಿಮಗೆ ಬಾರದೆ ಇದ್ರೆ, ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ರದ್ದಾಗಿರುವ ರೇಷನ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಕೊಂಡಿದ್ಯಾ ಎನ್ನುವುದನ್ನ ಚೆಕ್ ಮಾಡಿ.
New update for people Who waiting for Gruha Lakshmi, Annabhagya Yojana money