Karnataka NewsBangalore News

ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋ ಮಹಿಳೆಯರಿಗೆ ಸಿಕ್ತು ಪರಿಹಾರ! ಇಲ್ಲಿದೆ ಮಾಹಿತಿ

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಮೂಲಕ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಮಹಿಳೆಯರಿಗೆ ಕೊಡುತ್ತಿರುವುದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬಹಳ ದೊಡ್ಡ ಸಹಾಯವಾಗಿದೆ ಎಂದೇ ಹೇಳಬಹುದು. ಸ್ವಾವಲಂಬಿ ಮಹಿಳೆಯರನ್ನು ಉತ್ತೇಜಿಸುವ ಗೃಹಲಕ್ಷ್ಮಿ ಯೋಜನೆ ಇಂದು ಕೋಟ್ಯಾಂತರ ಮಹಿಳೆಯರ ಪಾಲಿಗೆ ವರದಾನವಾಗಿದೆ.

ಆದರೆ ಶೇಕಡ 90% ನಷ್ಟು ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇನ್ನು 10% ನಷ್ಟು ಮಹಿಳೆಯರು ಅಥವಾ 4.86 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಯ 2,000 ಖಾತೆಗೆ (Bank Account) ಜಮಾ ಆಗದೆ ತಲೆಕೆಡಿಸಿಕೊಂಡಿದ್ದಾರೆ.

Gruha Lakshmi Yojana funds have been released, Check the women of this district

ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ; ಇಲ್ಲಿದೆ ಡೀಟೇಲ್ಸ್

“ಪಕ್ಕದ ಮನೆಯವರು ನಾವು ಒಟ್ಟಿಗೆ ಹೋಗಿ ಅರ್ಜಿ ಸಲ್ಲಿಸಿದ್ದೇವೆ ಆದರೆ ಅವರ ಖಾತೆಗೆ ಪ್ರತಿ ತಿಂಗಳು ಹಣ ಬರುತ್ತಿದೆ ನಮ್ಮ ಖಾತೆಗೆ ಮಾತ್ರ ಹಣ ಬರುತ್ತಿಲ್ಲ ಯಾಕೆ” ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಇದೇ ಕಾರಣಕ್ಕೆ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ!

ಸರ್ಕಾರ ಈಗಾಗಲೇ ತಿಳಿಸಿರುವಂತೆ ಸಾಕಷ್ಟು ಗೃಹಲಕ್ಷ್ಮಿ ಅರ್ಜಿಗಳಲ್ಲಿ ತೊಂದರೆ ಇದೆ. ಸರ್ಕಾರ ತಿಳಿಸಿರುವ ಮಾನದಂಡಗಳನ್ನು ಸಾಕಷ್ಟು ಜನ ಪಾಲಿಸಿಲ್ಲ. ಇದೇ ಕಾರಣಕ್ಕೆ ಅಂತಹ ಮಹಿಳೆಯರ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿಲ್ಲ. ಈ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಹತ್ತಿರದ ಸಿಡಿಪಿಓ ಕಚೇರಿಗೆ ಭೇಟಿ ನೀಡಬೇಕು.

ಇನ್ನೂ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಆಗದೇ ಇರೋರಿಗೆ ಭರ್ಜರಿ ಸುದ್ದಿ!

ನಿಮ್ಮ ಬ್ಯಾಂಕ್ ಖಾತೆಗೆ ಈ ಕೆಲಸ ಮಾಡಿಸಿ!

ಕೆವೈಸಿ (E-KYC ) ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುವುದು ನಿಮಗೂ ಗೊತ್ತಿರಬಹುದು. ಒಬ್ಬ ವ್ಯಕ್ತಿಯ ಖಾತೆಗೆ E-KYC ಆಗಿದ್ದರೆ ಅದು ಆತನ ಖಾತೆ ಎನ್ನುವುದಕ್ಕೆ ಸಾಕ್ಷಿ ಒದಗಿಸುತ್ತದೆ. ಜೊತೆಗೆ ಹಣಕಾಸಿನ ವಿಚಾರದಲ್ಲಿ ಯಾರೂ ಕೂಡ ಮೋಸ ಮಾಡಲು ಸಾಧ್ಯವಿಲ್ಲ.

Gruha Lakshmi Yojanaಇದೇ ಕಾರಣಕ್ಕೆ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುವ ಮಹಿಳೆಯರು ಕೂಡ ತಮ್ಮ ಖಾತೆಗೆ ಕೆವೈಸಿ ಮಾಡಿಸುವುದು ಕಡ್ಡಾಯ. ಒಂದು ವೇಳೆ ಆರು ತಿಂಗಳ ಹಿಂದೆ ನೀವು ಬ್ಯಾಂಕಿಗೆ ಹೋಗಿ ಕೆವೈಸಿ ಮಾಡಿಸಿ ಕೊಡಲು ತಿಳಿಸಿದರೆ, ಈಗ ಮತ್ತೊಮ್ಮೆ ಬ್ಯಾಂಕ್ ಸಿಬ್ಬಂದಿಗಳನ್ನು ಭೇಟಿ ಮಾಡಿ ಕೆವೈಸಿ, ಎನ್‌ಪಿಸಿಐ ಮ್ಯಾಪಿಂಗ್ ಆಗಿದ್ಯೋ ಇಲ್ವೋ ಎನ್ನುವುದನ್ನ ಚೆಕ್ ಮಾಡಿ ಆಗದೆ ಇದ್ರೆ ತಕ್ಷಣ ಈ ಕೆಲಸ ಮಾಡಿಸಿಕೊಳ್ಳಿ.

ರದ್ದಾದ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ನಿಮ್ಮ ಹೆಸರು ಸಹ ಇದಿಯಾ ಚೆಕ್ ಮಾಡಿ

ಗ್ರಾಮ ಪಂಚಾಯತ್ನಿಂದ ನೆರವು!

ಸರ್ಕಾರ ಮಹಿಳೆಯರಿಗೆ ಅರ್ಜಿ ಸಲ್ಲಿಸಿದ ಮೇಲೆ ಯಾರಿಗೂ ವಂಚನೆ ಆಗದೆ ಇರುವ ರೀತಿಯಲ್ಲಿ ಗೃಹಲಕ್ಷ್ಮಿ ಹಣವನ್ನು ತಲುಪಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಈಗಾಗಲೇ ಬೇರೆ ಬೇರೆ ರೀತಿಯ ಉಪಕ್ರಮಗಳನ್ನು ಕೈಗೊಂಡಿತ್ತು. ಗ್ರಾಮ ಪಂಚಾಯತ್ ನಲ್ಲಿ ಗೃಹಲಕ್ಷ್ಮಿ ಅದಾಲತ್, ಗೃಹಲಕ್ಷ್ಮಿ ಶಿಬಿರ ಗಳನ್ನೂ ನಡೆಸಲಾಗಿತ್ತು.

ಈಗಲೂ ಕೂಡ ಪ್ರತಿಯೊಂದು ಜಿಲ್ಲೆಯಲ್ಲಿಯೂ ಗೃಹಲಕ್ಷ್ಮಿ ಯಶಸ್ವಿ ಸಮಾವೇಶವನ್ನು ನಡೆಸಲಾಗುತ್ತಿದೆ. ಹಾಗಾಗಿ ಯಾವ ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿಲ್ಲವೂ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ, ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.

6ನೇ ಕಂತಿನ ಗೃಹಲಕ್ಷ್ಮಿ ಹಣ ಇಂತಹವರ ಖಾತೆಗೆ ಜಮಾ ಆಗೋದಿಲ್ಲ! ಇಲ್ಲಿದೆ ಕಾರಣ

6 ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದೆ.bಇನ್ನು 7ನೇ ಕಂತಿನ ಹಣ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಲಿದ್ದು, ಈ ಹಣವನ್ನು ಪಡೆದುಕೊಳ್ಳಲು ಮಹಿಳೆಯರು ತಕ್ಷಣ ತಮ್ಮ ಖಾತೆಯಲ್ಲಿ ಇರುವ ಲೋಪ ದೋಷಗಳನ್ನು ಪರಿಹರಿಸಿಕೊಳ್ಳಲು ಸರ್ಕಾರ ತಿಳಿಸಿದೆ.

who have not received Gruha Lakshmi Scheme money got a solution

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories