ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸರ್ಕಾರ; ಇಲ್ಲಿದೆ ಡೀಟೇಲ್ಸ್

ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವುದು ಬಹಳ ಮುಖ್ಯ.

ರಾಜ್ಯ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವುದು ಬಹಳ ಮುಖ್ಯ.

ಆದ್ರೆ ಈ ಯೋಜನೆಗಳನ್ನು ಘೋಷಿಸುವುದಕ್ಕೂ ಮೊದಲೇ ಅಂದರೆ 2020 ರಿಂದಲೇ ಸಾಕಷ್ಟು ಜನ ಸರ್ಕಾರಕ್ಕೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಸಲ್ಲಿಕೆಯಾಗಿರುವ ಸುಮಾರು 2.96 ಲಕ್ಷ ಅರ್ಜಿಗಳನ್ನು ಸರ್ಕಾರ ಇದುವರೆಗೆ ಪರಿಗಣಿಸಿ ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ ಎನ್ನುವುದು ಇಂದು ರಾಜ್ಯ ಸರ್ಕಾರದಲ್ಲಿ ಬಹಳ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಪಿಯುಸಿ ಪಾಸ್ ಆಗಿದ್ರೆ ಸಾಕು ಗ್ರಾಮ ಪಂಚಾಯತ್ ನೇಮಕಾತಿಗೆ ಅರ್ಜಿ ಸಲ್ಲಿಸಿ!

The government has given good news to all families with ration cards

ಇದೀಗ ರಾಜ್ಯ ಸರ್ಕಾರ ಪ್ರತಿಯೊಬ್ಬ ಫಲಾನುಭವಿಗಳಿಗೆ ಭರವಸೆಯನ್ನು ನೀಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಪಡಿತರ ಚೀಟಿ (Ration card) ವಿಲೇವಾರಿ ಮಾಡುವುದಾಗಿ ತಿಳಿಸಿದೆ.

ಭಾರತದಲ್ಲಿ ಆಯುಷ್ಮಾನ್ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಸಿಗುವ ವೈದ್ಯಕೀಯ ವೆಚ್ಚವನ್ನು ಬರಿಸುವುದಕ್ಕೆ ಬಿಪಿಎಲ್ ಕಾರ್ಡ್ ಮಾತ್ರವಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರೆಗೂ ಕೂಡ ಪ್ರಯೋಜನ ಸಿಗಲಿದೆ ಹಾಗಾಗಿ ಎಪಿಎಲ್ ಕಾರ್ಡ್ ಪಡೆದುಕೊಳ್ಳುವುದಕ್ಕೂ ಜನ ಕಾದು ಕುಳಿತಿದ್ದಾರೆ.

ಜನರ ನಿರೀಕ್ಷೆಗೆ ತಕ್ಕಂತೆ ಹೊಸ ಪಡಿತರ ವಿತರಣೆ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ (K.H muniyappa ) ಹೊಸ ಅಪ್ಡೇಟ್ ನೀಡಿದ್ದಾರೆ. ಇತ್ತೀಚಿಗೆ ವಿಧಾನಸಭಾ ಕಲಾಪದಲ್ಲಿ ಅವರನ್ನು ಪ್ರಶ್ನೆ ಮಾಡಲಾಗಿತ್ತು.

ಪಡಿತರ ಚೀಟಿಯನ್ನು ಫಲಾನುಭವಿಗಳಿಗೆ ಯಾವಾಗ ವಿತರಣೆ ಮಾಡುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರ ನೀಡಿರುವ ಕೆಎಚ್ ಮುನಿಯಪ್ಪ ಅವರು ಸದ್ಯದಲ್ಲಿ ಪಡಿತರ ಚೀಟಿ ವಿತರಣೆ ಆಗಲಿದೆ ಎಂದು ತಿಳಿಸಿದ್ದಾರೆ.

ಇನ್ನೂ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಆಗದೇ ಇರೋರಿಗೆ ಭರ್ಜರಿ ಸುದ್ದಿ!

BPL Ration Cardಏಪ್ರಿಲ್ 1ರಿಂದ ಫಲಾನುಭವಿಗಳ ಕೈಗೆ ಸಿಗಲಿದೆ ರೇಷನ್ ಕಾರ್ಡ್!

ರೇಷನ್ ಕಾರ್ಡ್ ಗಾಗಿ ಸಲ್ಲಿಕೆಯಾಗಿರುವ ಮೂರು ಕೋಟಿಯಷ್ಟು ಅರ್ಜಿಗಳನ್ನು ಪರಿಶೀಲಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಆದರೆ ಈಗಾಗಲೇ ಪರಿಶೀಲನೆ ಕೆಲಸ ಆರಂಭವಾಗಿದ್ದು ಅರ್ಜಿಗಳನ್ನು ಬಿಪಿಎಲ್ ಹಾಗೂ ಐಪಿಎಲ್ ಕಾರ್ಡ್ ಎಂದು ಪ್ರತ್ಯೇಕ ಮಾಡಿ, ಸಂಬಂಧಪಟ್ಟವರಿಗೆ ಇದೇ ಬರುವ ಏಪ್ರಿಲ್ ಒಂದರಿಂದ ವಿತರಣೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಮಾರ್ಚ್ 31ರವರೆಗೆ ಪರಿಶೀಲನೆ ನಡೆಸಿ, ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ ಕೆಲಸ ಆರಂಭವಾಗಲಿದೆ. ಇನ್ನು ಹೊಸದಾಗಿ ಅರ್ಜಿ ಸಲ್ಲಿಸುವ ಅವರಿಗೂ ಕೂಡ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.

ರದ್ದಾದ ರೇಷನ್ ಕಾರ್ಡ್ ಪಟ್ಟಿ ಪ್ರಕಟ! ನಿಮ್ಮ ಹೆಸರು ಸಹ ಇದಿಯಾ ಚೆಕ್ ಮಾಡಿ

ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಆಹ್ವಾನ!

ಈಗಾಗಲೇ ಸರ್ಕಾರಕ್ಕೆ ಸಂದಾಯ ಆಗಿರುವ ಪಡಿತರ ಚೀಟಿ ಅರ್ಜಿಗಳನ್ನು ವಿತರಣೆ ಮಾಡುವುದರ ಜೊತೆಗೆ ಹೊಸದಾಗಿ ವೈದ್ಯಕೀಯ ತುರ್ತು (medical treatment) ಪರಿಸ್ಥಿತಿಗಳಿಗೆ ಬೇಕಾಗಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಹೊಸ ಅರ್ಜಿಯನ್ನು ಕೂಡ ಸಲ್ಲಿಸಬಹುದು.

ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಹೊಸ ಪಡಿತರ ಚೀಟಿ ಪಡೆದಿಕೊಳ್ಳಲು April 1st ರಿಂದ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದರ ಜೊತೆಗೆ ಪಡಿತರ ಚೀಟಿಯಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಲು ಕೂಡ ಸಾಧ್ಯ.

6ನೇ ಕಂತಿನ ಗೃಹಲಕ್ಷ್ಮಿ ಹಣ ಇಂತಹವರ ಖಾತೆಗೆ ಜಮಾ ಆಗೋದಿಲ್ಲ! ಇಲ್ಲಿದೆ ಕಾರಣ

The government gave a big update about the distribution of new ration cards

Related Stories