ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಈ ದಿನ ಸಿಗಲಿದೆ ಹೊಸ ಕಾರ್ಡ್

Story Highlights

ರೇಷನ್ ಕಾರ್ಡ್ ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ಇಂದು ಮಹತ್ವದ ದಾಖಲೆಯಾಗಿ ಮಾರ್ಪಾಡುಗೊಂಡಿದೆ.

ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವುದು ಮಾತ್ರವಲ್ಲದೆ ಜನರಿಗೆ ಅನುಕೂಲವಾಗುವಂತಹ ಇನ್ನು ಕೆಲವು ಯೋಜನೆಗಳನ್ನು ಪರಿಚಯಿಸಿದೆ. ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಅಂದ್ರೆ ಕೆಲವು ಪ್ರಮುಖ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಅವುಗಳಲ್ಲಿ ರೇಷನ್ ಕಾರ್ಡ್ (Ration card) ಎನ್ನುವುದು ಪ್ರಮುಖ ದಾಖಲೆಯಾಗಿದೆ.

ರೇಷನ್ ಕಾರ್ಡ್ ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ಇಂದು ಮಹತ್ವದ ದಾಖಲೆಯಾಗಿ ಮಾರ್ಪಾಡುಗೊಂಡಿದೆ. ಯಾಕಂದ್ರೆ ಸರ್ಕಾರದ ಯೋಜನೆಗಳಿಗೆ ಆಧಾರವಾಗಿ ration card ಕೊಟ್ಟವರಿಗೆ ಸುಲಭವಾಗಿ ಪ್ರಯೋಜನ ಸಿಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರು ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ಹಾಗಾಗಿ ಯಾರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದಿಯೋ ಅವರು ಸುಲಭವಾಗಿ ಸರ್ಕಾರದ ಸಕಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ, ರೈತರಿಗೆ ಸಿಗಲಿದೆ 10,000 ಸಹಾಯಧನ!

ಇನ್ನೊಂದಿಷ್ಟು ಜನ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅಂತವರಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇಲ್ಲ. ಕಳೆದ ಮೂರು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ಈಗಲೂ ಕೂಡ ಬಕಪಕ್ಷಿಯಂತೆ ಹೊಸ ರೇಷನ್ ಕಾರ್ಡ್ ಆಗಿ ಕಾದು ಕುಳಿತಿದ್ದಾರೆ. ಸರ್ಕಾರ ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡುತ್ತಿಲ್ಲ.

BPL Ration Cardರೇಷನ್ ಕಾರ್ಡ್ ಬಗ್ಗೆ ಕಾಂಗ್ರೆಸ್ ಸಚಿವರೇ ಪ್ರಶ್ನೆ ಮಾಡಿದ್ದಾರೆ!

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರಿಗೆ ನಯನ ಮೊಟ್ಟಮ್ಮ ಅವರು ರೇಷನ್ ಕಾರ್ಡ್ ವಿತರಣೆ ಬಗ್ಗೆ ಕಲಾಪದ ದಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸಚಿವರು ಸದ್ಯದಲ್ಲೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಮಾಹಿತಿ ನೀಡಿದರು.

ತೋಟಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ; ಸಿಗಲಿದೆ 1,750 ರೂಪಾಯಿ ಶಿಷ್ಯವೇತನ!

ಸಚಿವರು ಹೇಳಿದ್ದೇನು?

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 2.95 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದೀಗ ಈ ಎಲ್ಲಾ ರೇಷನ್ ಕಾರ್ಡ್ ಅರ್ಜಿಗಳ ಪರಿಶೀಲನೆ ಆಗಬೇಕು. ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಎಂದು ಪ್ರತ್ಯೇಕಗೊಳಿಸಿ ಆಯಾ ಫಲಾನುಭವಿಗಳಿಗೆ ಅವರ ಆದಾಯಕ್ಕೆ ತಕ್ಕಂತೆ ರೇಷನ್ ಕಾರ್ಡ್ ವಿತರಣೆ ಮಾಡಬೇಕು.

ಇದೆಲ್ಲದಕ್ಕೂ ರಾಜ್ಯ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದ್ದು, ಮಾರ್ಚ್ 31ರ ಒಳಗೆ ಎಲ್ಲಾ ಸ್ವೀಕೃತ ಅರ್ಜಿಗಳ ಪರಿಶೀಲನೆ ನಡೆಸಿ ಏಪ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡ್ ವಿತರಣೆ ಆರಂಭವಾಗಲಿದೆ ಎಂದು ಗುಡ್ ನ್ಯೂಸ್ ನೀಡಿದೆ ಸರ್ಕಾರ. ಇಷ್ಟು ದಿನಗಳ ನಿಮ್ಮ ಕಾಯುವಿಕೆಗೆ ಈಗ ಒಂದು ಅರ್ಥ ಸಿಗುತ್ತದೆ. ಕೊನೆಗೂ ಸರ್ಕಾರ ರೇಷನ್ ಕಾರ್ಡ್ ವಿತರಣೆಗೆ ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ತಂತ್ರ! ಮಹಿಳೆಯರಿಗೆ ಬಿಗ್ ರಿಲೀಫ್

https://ahara.kar.nic.in/ ಈ ಅಧಿಕೃತ ವೆಬ್ಸೈಟ್ನಲ್ಲಿ ನೀವು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದರೆ ಸ್ಟೇಟಸ್ ಚೆಕ್ ಮಾಡಬಹುದು. ಒಟ್ಟಿನಲ್ಲಿ ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ಸಿಗಲಿದೆ. ಹಾಗಾಗಿ ಪಂಚವಾರ್ಷಿಕ ಯೋಜನೆಗಳ ಫಲಾನುಭವಿಗಳ ಲಿಸ್ಟ್ ಇನ್ನಷ್ಟು ದೊಡ್ಡದಾಗಿ, ರಾಜ್ಯದ ಬೊಕ್ಕಸಕ್ಕೆ ಇನ್ನೊಂದಷ್ಟು ಹಣ ಹೊರೆ ಆಗಲಿದೆ.

Big Update on New Ration Card, new card will be distributed Soon

Related Stories