ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ, ರೈತರಿಗೆ ಸಿಗಲಿದೆ 10,000 ಸಹಾಯಧನ!

ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಮತ್ತೊಂದು ಉತ್ತಮ ಯೋಜನೆಯನ್ನು ಪರಿಚಯಿಸಿದೆ. ಅದುವೇ ರೈತ ಸಿರಿ ಯೋಜನೆ

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರಿಗೆ (farmers ) ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಬಿಡುಗಡೆ ಮಾಡುತ್ತವೆ, ಯಾಕೆಂದರೆ ಕೃಷಿಯನ್ನು ಬೆಂಬಲಿಸಿದರೆ ಮಾತ್ರ ದೇಶದ ಆರ್ಥಿಕತೆಯಲ್ಲಿ ಅಭಿವೃದ್ಧಿಯನ್ನು ಕಾಣಲು ಸಾಧ್ಯವಿದೆ.

ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತ ತನ್ನ ಕೃಷಿ ಚಟುವಟಿಕೆಗೆ ಬೇಕಾದ ಎಲ್ಲಾ ಪರಿಕರಗಳನ್ನು ಖರೀದಿಸಲು ಅಥವಾ ಕೃಷಿ ಚಟುವಟಿಕೆ (agriculture activity) ಗಳನ್ನು ನಡೆಸಲು ಬೇಕಾಗಿರುವ ಬಿತ್ತನೆ ಬೀಜ, ರಸ ಗೊಬ್ಬರ ಮೊದಲಾದವುಗಳನ್ನು ಖರೀದಿ ಮಾಡಲು ಕೂಡ ಸರ್ಕಾರ ಇದೀಗ ಅತ್ಯುತ್ತಮ ಸಬ್ಸಿಡಿ ನೀಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.

ತೋಟಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ; ಸಿಗಲಿದೆ 1,750 ರೂಪಾಯಿ ಶಿಷ್ಯವೇತನ!

ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ, ರೈತರಿಗೆ ಸಿಗಲಿದೆ 10,000 ಸಹಾಯಧನ! - Kannada News

ರೈತರು ತಮ್ಮ ಜಮೀನಿನಲ್ಲಿ (Agriculture Land) ಕೃಷಿ ಮಾಡುವಾಗ ಅದಕ್ಕೆ ಸಾಕಷ್ಟು ಕಷ್ಟ ಪಡಬೇಕು. ಅದರಲ್ಲೂ ಕೆಲವೊಮ್ಮೆ ಪ್ರಕೃತಿ ವಿಕೋಪದಿಂದಾಗಿ ಮಳೆ ಇಲ್ಲದೆ ಬೆಳೆ ಬೆಳೆಯುವುದು ಕಷ್ಟವಾಗಬಹುದು.

ಇಂತಹ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಸಹಾಯವನ್ನು ನೀಡುವ ಜವಾಬ್ದಾರಿ ಸರ್ಕಾರದ್ದು, ಹಾಗಾಗಿ ಯಾವುದೇ ರೀತಿಯ ಪರಿಸ್ಥಿತಿಯಲ್ಲಿಯೂ ಕೂಡ ರೈತರಿಗೆ ಆರ್ಥಿಕ ಸಹಾಯವನ್ನು ಸರ್ಕಾರ ಮಾಡಿಕೊಂಡು ಬಂದಿದೆ.

ರಾಜ್ಯ ಸರ್ಕಾರದಿಂದ ರೈತ ಸಿರಿ ಯೋಜನೆ!

ಇದೀಗ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಮತ್ತೊಂದು ಉತ್ತಮ ಯೋಜನೆಯನ್ನು ಪರಿಚಯಿಸಿದೆ. ಅದುವೇ ರೈತ ಸಿರಿ ಯೋಜನೆ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ, ಬದು ನಿರ್ಮಾಣ ಮೊದಲಾದ ಕೆಲಸಗಳಿಗಾಗಿ ಸರ್ಕಾರದಿಂದ 10,000ಗಳನ್ನು ರೈತ ಸಿರಿ ಯೋಜನೆಯ ಅಡಿಯಲ್ಲಿ ಪಡೆಯಬಹುದು.

ಗ್ರಾಮ ಪಂಚಾಯತ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಕೈ ತುಂಬಾ ಸಂಬಳ

Farmer Scheme2019 – 20ನೇ ಸಾಲಿನಲ್ಲಿ ಯೋಜನೆಯ ಜಾರಿಗೆ ತರಲಾಗಿತ್ತು. ನಂತರ ಅದು ಸ್ಥಗಿತಗೊಂಡಿತು. ಈಗ ಮತ್ತೆ ರೈತ ಸರಿ ಯೋಜನೆಯನ್ನು ಮುಂದುವರೆಸಲು ಸರ್ಕಾರ ತೀರ್ಮಾನಿಸಿದ್ದು, ಇಸ್ರೇಲ್ ಮಾದರಿಯ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಈ ಒಂದು ಯೋಜನೆಯ ಅಡಿಯಲ್ಲಿ ರೈತರಿಗೆ ಪರಿಚಯಿಸಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ತಂತ್ರ! ಮಹಿಳೆಯರಿಗೆ ಬಿಗ್ ರಿಲೀಫ್

ರೈತ ಸಿರಿ ಯೋಜನೆ ಪಡೆದುಕೊಳ್ಳಲು ಯಾರು ಅರ್ಹರು?

*ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
*ಕನಿಷ್ಠ ಒಂದು ಹೆಕ್ಟರ್ ಜಮೀನು ಹೊಂದಿರಬೇಕು.
*ತಮ್ಮ ಜಮೀನಿನಲ್ಲಿ ರಾಗಿ ಕೃಷಿ ಬೆಳೆಯುವ ರೈತರಿಗೆ ಮೊದಲ ಆದ್ಯತೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್ ಪ್ರತಿ
ಫಲಾನುಭವಿ ರೈತರ ಫೋಟೋ
ಭೂಮಿಯ ದಾಖಲೆಗಳನ್ನು ಒಳಗೊಂಡಿರುವ ಪಹಣಿ ಪತ್ರ
ಶಾಶ್ವತ ನಿವಾಸದ ದಾಖಲೆ

ಈ ಎಲ್ಲಾ ಮಾಹಿತಿಗಳನ್ನು ಕೃಷಿ ಕೇಂದ್ರದಲ್ಲಿ ನೀಡಿ ನೀವು ರೈತ ಸರಿ ಯೋಜನೆಯ ಅಡಿಯಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಸಹಾಯಧನವಾಗಿ ಪಡೆದುಕೊಳ್ಳಲು ಸಾಧ್ಯವಿದೆ.

ಇಲ್ಲಿದೆ ಸಿಹಿ ಸುದ್ದಿ! ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಘೋಷಿಸಿದ ಸರ್ಕಾರ

farmers will get 10,000 subsidy from the state government

Follow us On

FaceBook Google News

farmers will get 10,000 subsidy from the state government