ತೋಟಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ; ಸಿಗಲಿದೆ 1,750 ರೂಪಾಯಿ ಶಿಷ್ಯವೇತನ!
ದೇಶದಲ್ಲಿ ಕೃಷಿ (Agriculture) ಯನ್ನು ಉತ್ತೇಜಿಸುವ ಸಲುವಾಗಿ ಯುವಕ ಯುವತಿಯರನ್ನು ಕೃಷಿಕಡೆಗೆ ಆಕರ್ಷಿಸಲು ಕೃಷಿ ಇಲಾಖೆ (Agriculture department) ಕೆಲವು ಪ್ರಮುಖ ಸೌಲಭ್ಯಗಳನ್ನು ಮಾಡಿಕೊಟ್ಟಿದೆ.
ಅವುಗಳಲ್ಲಿ ಕೃಷಿಗೆ ಸಂಬಂಧಪಟ್ಟ ತರಬೇತಿಯನ್ನು ನೀಡುವುದು ಕೂಡ ಸೇರಿಕೊಂಡಿದೆ. ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿಯನ್ನು ವೈಜ್ಞಾನಿಕವಾಗಿ ಹಾಗೂ ಆರ್ಥಿಕವಾಗಿ ಉತ್ತಮ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ತಂತ್ರ! ಮಹಿಳೆಯರಿಗೆ ಬಿಗ್ ರಿಲೀಫ್
ಇದೀಗ ತೋಟಗಾರಿಕಾ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೋಟಗಾರಿಕಾ ತರಬೇತಿ ಕೇಂದ್ರಗಳಲ್ಲಿ 10 ತಿಂಗಳುಗಳ ಕಾಲ ತೋಟಗಾರಿಕಾ ತರಬೇತಿಯನ್ನು ನೀಡಲಾಗುತ್ತಿದೆ ಹಾಗೂ ಪ್ರತಿ ತಿಂಗಳು 1750ಗಳನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು.
ಯಾರಿಗೆ ತರಬೇತಿ ನೀಡಲಾಗುವುದು?
10ನೇ ತರಗತಿ ಉತ್ತೀರ್ಣರಾಗಿರಬೇಕು ಕನ್ನಡ ಭಾಷಾಜ್ಞಾನ ಇರಬೇಕು.
ವಯೋಮಿತಿ; ಸಾಮಾನ್ಯರಿಗೆ ವಯಸ್ಸಿನ ಮಿತಿ 18 ರಿಂದ 30 ವರ್ಷ ವಯಸ್ಸು. ಮಾಜಿ ಸೈನಿಕರಿಗೆ 33 ರಿಂದ 65 ಗರಿಷ್ಠ ವಯಸ್ಸು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 18ರಿಂದ 33 ವರ್ಷ ಗರಿಷ್ಠ ವಯಸ್ಸು.
ಗ್ರಾಮ ಪಂಚಾಯತ್ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಕೈ ತುಂಬಾ ಸಂಬಳ
ಅರ್ಜಿ ಸಲ್ಲಿಸುವುದು ಹೇಗೆ?
ಮಾನ್ಯ ಅಭ್ಯರ್ಥಿಗಳು 30 ರೂಪಾಯಿ ಶುಲ್ಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 15 ರೂಪಾಯಿಗಳ, ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್ ಅನ್ನು ತೋಟಗಾರಿಕಾ ಉಪ ನಿರ್ದೇಶಕರು ಈ ಹೆಸರಿನಲ್ಲಿ ಪಡೆದುಕೊಳ್ಳಬೇಕು. ಅರ್ಜಿಯನ್ನು ಹಿರಿಯ ತೋಟಗಾರಿಕಾ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಧಾರವಾಡ ಇಲ್ಲಿಗೆ ಸಲ್ಲಿಸಬೇಕು.
ಇಲ್ಲಿದೆ ಸಿಹಿ ಸುದ್ದಿ! ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಘೋಷಿಸಿದ ಸರ್ಕಾರ
https://horticulturedir.karnataka.gov.in/ ಈ ವೆಬ್ಸೈಟ್ ಮೂಲಕ ಮಾರ್ಚ್ ಒಂದನೇ ತಾರೀಖಿನಿಂದ 30ನೇ ತಾರೀಖಿನ ಒಳಗೆ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಬೇಕು. ಭರ್ತಿಯಾದ ಅರ್ಜಿಯನ್ನು ಏಪ್ರಿಲ್ ಒಂದು 2024ರ ಒಳಗೆ ಕಳುಹಿಸಬೇಕು.
ತರಬೇತಿ ಯಾವಾಗ ಆರಂಭ?
ಮೇ 2 2024ರಿಂದ, ಮೇ 8 2025ರ ವರೆಗೆ ತರಬೇತಿ ನಡೆಯಲಿದೆ.
Application Invitation for Horticultural Training
Our Whatsapp Channel is Live Now 👇