ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!

Story Highlights

ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳನ್ನು (Apply Ration Card) ಪರಿಶೀಲಿಸಿ ಅವುಗಳ ವಿತರಣೆ ಮಾಡಲಾಗುವುದು

ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಆದ್ಯತಾ ಪಡಿತರ ಚೀಟಿ ವಿತರಣೆ ಮಾಡುವ ಬಗ್ಗೆ ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ.

ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳನ್ನು (Apply Ration Card) ಪರಿಶೀಲಿಸಿ ಅವುಗಳ ವಿತರಣೆ ಮಾಡಲಾಗುವುದು ಜೊತೆಗೆ ಹೊಸ ಅರ್ಜಿಗಳನ್ನು ಕೂಡ ಸ್ವೀಕರಿಸಲಾಗುವುದು ಎಂದು ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಇನ್ಮುಂದೆ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಹಣ! ಇಲ್ಲಿದೆ ಡೀಟೇಲ್ಸ್

ಹೊಸ ಪಡಿತರ ಚೀಟಿ ವಿಲೇವಾರಿ ಆರಂಭ!

ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಮೂರು ಲಕ್ಷ ಪಡಿತರ ಚೀಟಿ ವಿಲೇವಾರಿ ಮಾಡುವುದು ಸರ್ಕಾರಕ್ಕೆ ಸುಲಭದ ಕೆಲಸವೇನು ಅಲ್ಲ. ಇವುಗಳಲ್ಲಿ ಅದೆಷ್ಟೋ ನಕಲಿ ಅರ್ಜಿಗಳು ಇರಬಹುದು.

ಹಾಗಾಗಿ ಪ್ರತಿಯೊಂದು ಅರ್ಜಿಯನ್ನು ಪರಿಶೀಲನೆ ಮಾಡಿ ಯಾರಿಗೆ ಬಿಪಿಎಲ್ ಕಾರ್ಡ್ (BPL card) ಸಲ್ಲಿಕೆ ಆಗಬೇಕು. ಯಾರಿಗೆ ಎಪಿಎಲ್ ಕಾರ್ಡ್ ಸಲ್ಲಿಕೆ ಆಗಬೇಕು ಎಂಬುದನ್ನು ಪ್ರತ್ಯೇಕಗೊಳಿಸಿ, ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಬೇಕು ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಬೇಕಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ.

ಜನರ ಬೇಡಿಕೆಯ ಮೇರೆಗೆ ಈಗ ರಾಜ್ಯ ಸರ್ಕಾರ ಮಾರ್ಚ್ 31ರ ಒಳಗೆ ಸಲ್ಲಿಕೆ ಆಗಿರುವ ಪ್ರತಿಯೊಂದು ಅರ್ಜಿಯನ್ನು ಪರಿಶೀಲನೆ ಮಾಡಿ ಏಪ್ರಿಲ್ ಒಂದರಿಂದ ಹೊಸ ಪಡಿತರ ವಿತರಣೆ ಕಾರ್ಯವನ್ನು ಪ್ರತಿ ಜಿಲ್ಲೆಯಲ್ಲಿಯೂ ಆರಂಭಿಸಲಿದ್ದೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಹೊಸ ಪಡಿತರ ಚೀಟಿ ಸಲ್ಲಿಕೆಗೂ ಅರ್ಜಿ ಆಹ್ವಾನ!

ಇಲ್ಲಿಯವರೆಗೆ ರಾಜ್ಯ ಸರ್ಕಾರಕ್ಕೆ ಬಂದಿರುವ ಆದ್ಯತಾ ಪಡಿತರ ಚೀಟಿ ಅರ್ಜಿಗಳು 2,95,986 ಈ ಅರ್ಜಿಗಳನ್ನು ಮಾರ್ಚ್ 31ರ ಒಳಗೆ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು. ಇನ್ನು ಇಲ್ಲಿಯವರೆಗೆ 57, 651 ಕಾರ್ಡ್ಗಳನ್ನು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ (emergency medical treatment) ಗಾಗಿ 744 ಕಾರ್ಡ್ಗಳನ್ನು ವಿತರಣೆ ಮಾಡಲಾಗಿದೆ.

ರೇಷನ್ ಕಾರ್ಡ್ ಇರೋರಿಗೆ ಮತ್ತೊಂದು ಬೆನಿಫಿಟ್; ಸಿಗಲಿದೆ 5000 ರೂಪಾಯಿ!

BPL Ration Cardಹೊಸ ಪಡಿತರ ಚೀಟಿ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಮತ್ತು ದಾಖಲೆಗಳು! (Eligibilities and documents to get new ration card)

*ಹೊಸ ಪಡಿತರ ಚೀಟಿ ಗಾಗಿ ನವ ದಂಪತಿಗಳು ಅರ್ಜಿ ಸಲ್ಲಿಸಬಹುದು.
*ತಮ್ಮ ಕುಟುಂಬದಿಂದ ಹೊರಗೆ ಉಳಿದು ಪ್ರತ್ಯೇಕವಾಗಿ ವಾಸಿಸುವವರು ಅರ್ಜಿ ಸಲ್ಲಿಸಬಹುದು. ಅಂತಹ ಸಂದರ್ಭದಲ್ಲಿ ಹಿಂದಿನ ರೇಷನ್ ಕಾರ್ಡ್ ನಲ್ಲಿ ಹೆಸರು ಇದ್ದರೆ ಅದನ್ನು ತೆಗೆಸಿ ಹಾಕಬೇಕು.
*ಕುಟುಂಬದ ಆದಾಯದ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಎಂದು ನಿರ್ಧರಿಸಲಾಗುತ್ತದೆ.

ಗೃಹಲಕ್ಷ್ಮಿ ಹಣ ಬಾರದೇ ಇರುವ ಮಹಿಳೆಯರಿಗೆ ಬಂಪರ್ ಸುದ್ದಿ ಕೊಟ್ಟ ಸರ್ಕಾರ!

ಬೇಕಾಗಿರುವ ದಾಖಲೆಗಳನ್ನು ನೋಡುವುದಾದರೆ,

ಆಧಾರ್ ಕಾರ್ಡ್
ಖಾಯಂ ನಿವಾಸದ ಪುರಾವೆ
ಮೊಬೈಲ್ ಸಂಖ್ಯೆ
ಚಾಲನಾ ಪರವಾನಿಗೆ
ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
ಮತದಾರರ ಗುರುತಿನ ಚೀಟಿ
ಆದಾಯ ಪ್ರಮಾಣ ಪತ್ರ
ಮನೆಯ ಸದಸ್ಯರ ಬಗ್ಗೆ ಮಾಹಿತಿ

ಇನ್ನು ಅರ್ಜಿ ಸಲ್ಲಿಸಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆದರೆ ಸದ್ಯಕ್ಕೆ ಅವಕಾಶ ನೀಡಲಾಗಿಲ್ಲ. ನೀವು ಏಪ್ರಿಲ್ ಒಂದರಿಂದ ಈ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಹತ್ತಿರದ ಸೇವಾ ಕೇಂದ್ರಗಳಲ್ಲಿ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಈ ದಿನ ಸಿಗಲಿದೆ ಹೊಸ ಕಾರ್ಡ್

apply for new ration card, Get these documents ready

Related Stories