Karnataka NewsBangalore News

ರೇಷನ್ ಕಾರ್ಡ್ ಇದ್ರೂ ಇನ್ಮುಂದೆ ಇಂತಹವರಿಗೆ ಯಾವುದೇ ಯೋಜನೆಯ ಬೆನಿಫಿಟ್ ಇಲ್ಲ!

ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದರೆ, ಅದರ ಸಮರ್ಪಕ ಬಳಕೆ ಆಗಬೇಕು ಹಾಗೂ ಸಂಬಂಧಪಟ್ಟ ಸಾರ್ವಜನಿಕರಿಗೆ ಅದರ ಪ್ರಯೋಜನ ಸಿಗಬೇಕು. ಆದರೆ ಎಷ್ಟೋ ಬಾರಿ ಈ ಕೆಲಸದಲ್ಲಿ ಸರ್ಕಾರ ಎಡವುತ್ತದೆ ಎಂದು ಹೇಳಬಹುದು.

ಹೌದು, ಯಾವುದೇ ಯೋಜನೆಯ ಪ್ರಯೋಜನ (benefits of schemes) ಸಾರ್ವಜನಿಕರಿಗೆ ಸಿಗಬೇಕು ಅಂದ್ರೆ ಆ ಯೋಜನೆ ಸಮರ್ಪಕವಾಗಿ ಬಳಕೆ ಆಗಿರಬೇಕು. ಹಾಗೂ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸಲು ಸರ್ಕಾರ ಕೆಲವು ಪ್ರಮುಖ ಕ್ರಮವನ್ನು ಕೂಡ ಕೈಗೊಳ್ಳಬೇಕು

Order to cancel the BPL ration card of such people

ಉಚಿತ ವಿದ್ಯುತ್ ಕೊಟ್ಟ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ! ಇನ್ನಷ್ಟು ಬೆನಿಫಿಟ್

ಉದಾಹರಣೆಗೆ ಇಂದು ಸಾಕಷ್ಟು ಯೋಜನೆಗಳ ಲಾಭ ಪಡೆದುಕೊಳ್ಳುವುದಕ್ಕೆ ಜನರು ರೇಷನ್ ಕಾರ್ಡ್ (Ration card), ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದರೆ ಈ ದಾಖಲೆಗಳು ಎಷ್ಟರಮಟ್ಟಿಗೆ ಸರಿಯಾಗಿ ಇದೆ ಎಂದು ಪರಿಶೀಲಿಸುವುದು ಬಹಳ ಮುಖ್ಯ.

ನಕಲಿ ದಾಖಲೆಗಳನ್ನು ನೀಡಿ ಸರ್ಕಾರಿ ಪ್ರಯೋಜನ ಪಡೆದುಕೊಳ್ಳುತ್ತಿರುವವರಿಗೆ ಹೊಸ ನಿಯಮ!

ಇದೀಗ ಸರ್ಕಾರ ಕಟ್ಟು ನೆಟ್ಟಿನ ನಿಯಮವನ್ನು ಜಾರಿಗೆ ತರಲು ಮುಂದಾಗಿದ್ದು ಯಾರು ನಿಜವಾಗಿ ಫಲಾನುಭವಿಗಳು ಅಲ್ಲದೆ ಇದ್ದರೂ ಕೂಡ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಉದಾಹರಣೆಗೆ ಸಾಕಷ್ಟು ಜನ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಒಂದೇ ಒಂದು ಬಾರಿ ರೇಷನ್ ಪಡೆದುಕೊಂಡಿಲ್ಲ. ಬದಲಿಗೆ ಸರ್ಕಾರದ ಇತರ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಸುಮಾರು 3.26 ಲಕ್ಷ ಜನರ ರೇಷನ್ ಕಾರ್ಡ್ ಈ ಕಾರಣಕ್ಕಾಗಿ ರದ್ದಾಗಿದೆ.

BPL Ration Card

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!

ಗೃಹಲಕ್ಷ್ಮಿ ಯೋಜನೆಯ ಹಣ ಕೈ ಸೇರದೆ ಬೇಸರಗೊಂಡ ಮಹಿಳೆಯರು!

ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸಿದ್ದರು ಕೂಡ ಅಂತವರ ಖಾತೆಗೆ (Bank Account) ಹಣ ಜಮಾ ಆಗಿಲ್ಲ ಇದಕ್ಕೆ ಸರ್ಕಾರ ಕೊಡುವ ಕಾರಣಗಳು ಸಾಕಷ್ಟು. ನಿಮ್ಮ ಖಾತೆಗೆ ಕೆವೈಸಿ ಅಪ್ಡೇಟ್ (E-KYC update) ಆಗಿಲ್ಲ, ನಿಮ್ಮ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ, ಎನ್ ಪಿ ಸಿ ಐ ಮ್ಯಾಪಿಂಗ್ ಆಗಿಲ್ಲ, ತಾಂತ್ರಿಕ ದೋಷಗಳು ಮೊದಲಾದ ಕಾರಣಗಳಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಇದರಿಂದ ಲಕ್ಷಾಂತರ ಫಲಾನುಭವಿ ಮಹಿಳೆಯರು ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಸರ್ಕಾರ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಬೇರೆ ಬೇರೆ ಉಪಕ್ರಮ ಕೈಗೊಳ್ಳಲು ಮುಂದಾಗಿದೆ. ಕುಟುಂಬದಲ್ಲಿ ಯಾರ ಹೆಸರಿಗೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಬರಬೇಕು ಅವರ ಖಾತೆ ಸಮಸ್ಯೆ ಇದ್ದರೆ ಕುಟುಂಬದ ಎರಡನೇ ಮಹಿಳಾ ಸದಸ್ಯರ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ.

ರೇಷನ್ ಕಾರ್ಡ್ ಇರೋರಿಗೆ ಮತ್ತೊಂದು ಬೆನಿಫಿಟ್; ಸಿಗಲಿದೆ 5000 ರೂಪಾಯಿ!

ಇಷ್ಟೆಲ್ಲಾ ಸರ್ಕಸ್ ಮಾಡಿದರು ಕೂಡ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗುತ್ತಲೇ ಇವೆ. ಶೇಕಡ 20ರಷ್ಟು ಮಹಿಳೆಯರಿಗೆ ಅಂದ್ರೆ ಸುಮಾರು 8.20 ಲಕ್ಷ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ (DBT) ಆಗಿಲ್ಲ.

ನಮ್ಮ ಖಾತೆಯಲ್ಲಿ ಯಾವ ಸಮಸ್ಯೆ ಇಲ್ಲದೆ ಇದ್ದರೂ ಕೂಡ ಹಣ ಮಾತ್ರ ಬರ್ತಿಲ್ಲ ಅಂತ ಹಲವು ಮಹಿಳೆಯರು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಗ್ಯಾರಂಟಿ ಯೋಜನೆಗಳನ್ನು ಜನರ ಕೈ ಸೇರುವಂತೆ ಮಾಡಲು ಇರುವ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಎದುರು ಇರುವ ದೊಡ್ಡ ಸವಾಲಾಗಿದೆ.

Even if there is a ration card, there is no benefit of any scheme for such people

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories