ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಬೇಕು; ಆನ್ಲೈನ್ ನಲ್ಲೇ ಮಾಡಿಕೊಳ್ಳಿ
ಈಗ ಎಲ್ಲ ಕೆಲಸಗಳಿಗೂ ಆಧಾರ್ ಕಾರ್ಡ್ (Aadhaar card) ಕಡ್ಡಾಯವಾಗಿದೆ. ಸರ್ಕಾರದ ಯಾವುದೇ ಸೌಲಭ್ಯ ಪಡೆಯುವುದಿರಲಿ, ಬ್ಯಾಂಕ್ ಖಾತೆ (Bank Account) ತೆರೆಯುವುದಿರಲಿ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಇದೀಗ ಸರ್ಕಾರವು ರೈತರ ಜಮೀನಿನ ಪಹಣಿ ಜೊತೆಯು ಆಧಾರ್ ಲಿಂಕ್ (Aadhaar Card link) ಮಾಡುವಂತೆ ಸೂಚನೆ ನೀಡಿದೆ.
ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ದೃಷ್ಟಿಯಿಂದ ಆಧಾರ್ ಕಾರ್ಡ್ ಕಾಯ್ದೆಯ ಕಲಂ 4(4)(ಬಿ)(2)ರ ಅನ್ವಯ ರೈತರ ಪಹಣಿಗೆ ಆಧಾರ್ ಜೋಡಣೆ ಮಾಡುವಂತೆ ಸೂಚನೆ ನೀಡಿದೆ.
ಗೃಹಲಕ್ಷ್ಮಿ ಫಲಾನುಭವಿ ಗೃಹಿಣಿಯರಿಗೆ ಭರ್ಜರಿ ಸುದ್ದಿ; ಖಾತೆಗೆ ಒಟ್ಟಿಗೆ 6,000 ಜಮಾ!
ಹೀಗಾಗಿ ರೈತರು ಸ್ವ-ಪ್ರೇರಣೆಯಿಂದ ಸರ್ಕಾರಿ ವೆಬ್ ಸೈಟ್ ಓಪನ್ ಮಾಡಿಕೊಂಡು ತಮ್ಮ ಪಹಣಿ ಪತ್ರದೊಂದಿಗೆ ಆಧಾರ್ ಲಿಂಕ್ ಮಾಡಿಸಬಹುದು. ಅಥವಾ ಆಧಾರ್ ಕಾರ್ಡ್ ಹಾಗೂ ಜಮೀನಿನ ಪಹಣಿ ಪತ್ರಗಳೊಂದಿಗೆ ಹತ್ತಿರದ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಭೇಟಿಯಾಗಿ ಲಿಂಕ್ ಮಾಡಿಸಬಹುದಾಗಿದೆ.
ರೈತರು ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಪಡೆಯಬೇಕು ಎಂದರೂ ಪಹಣಿಗೆ ಆಧಾರ್ ಜೋಡಣೆ ಆಗಿರುವುದು ಕಡ್ಡಾಯ ಮಾಡಲಾಗಿದೆ. ಹಾಗಾಗಿ ಇದುವರೆಗೆ ಲಿಂಕ್ ಮಾಡಿಸದೆ ಇದ್ದಲ್ಲಿ ನೀವು ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಲಿಂಕ್ ಮಾಡಿಸಬಹುದು. ಇಲ್ಲದೆ ಇದ್ದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕವೇ ಮನೆಯಲ್ಲಿಯೇ ಕುಳಿತು ಲಿಂಕ್ ಮಾಡಬಹುದಾಗಿದೆ.
ರೇಷನ್ ಕಾರ್ಡ್ ಇದ್ರೂ ಇನ್ಮುಂದೆ ಇಂತಹವರಿಗೆ ಯಾವುದೇ ಯೋಜನೆಯ ಬೆನಿಫಿಟ್ ಇಲ್ಲ!
ಮೊದಲು ಸರ್ಕಾರದ ಕಂದಾಯ ಇಲಾಖೆ ವೆಬ್ಸೈಟ್ಗೆ https://landrecords.karnataka.gov.in/service4 ಭೇಟಿ ನೀಡಿ.
ಅಲ್ಲಿ ಭೂಮಿ ಎನ್ನುವ ನಾಗರೀಕ ಸೇವೆಗಳನ್ನು ಹುಡುಕಬೇಕು.
ಈ ಭೂಮಿ ನಾಗರೀಕ ಸೇವೆಗಳ ವೆಬ್ಸೈಟ್ನಲ್ಲಿ ಮೊದಲು ಮೊಬೈಲ್ ನಂಬರ್ ಎಂಟ್ರಿ ಮಾಡಬೇಕು.
ನಂತರ ಕೆಳಗಡೆ ಕಾಣುವ ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಬೇಕು. ನಂತರ ಓಟಿಪಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಈಗ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಸಂಖ್ಯೆ ಬರುತ್ತದೆ. ಅದನ್ನು ವೆಬ್ಸೈಟ್ನಲ್ಲಿ ಎಂಟ್ರಿ ಮಾಡಿ ಲಾಗಿನ್ ಮಾಡಬೇಕು.
ಈಗ ನಿಮಗೆ ಆಪ್ಷನ್ ಕಾಣಿಸುತ್ತದೆ. ಈಗ ನಿಮ್ಮ ಪಹಣಿಯೊಂದಿಗೆ ಆಧಾರ್ ಲಿಂಕ್ ಮಾಡಲು ಮತ್ತೊಂದು ಇಂಟರ್ ಫೇಸ್ ಆರಂಭಗೊಳ್ಳುತ್ತದೆ.
ಅಲ್ಲಿ ಪಹಣಿ ಪತ್ರ ಯಾರ ಹೆಸರಿನಲ್ಲಿದೆ ಎನ್ನುವುದನ್ನು ನಮೂದು ಮಾಡಬೇಕು.
ಇನ್ಮುಂದೆ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಹಣ! ಇಲ್ಲಿದೆ ಡೀಟೇಲ್ಸ್
ಆಧಾರ್ ಕಾರ್ಡ್ನಲ್ಲಿ ಯಾವ ರೀತಿ ಹೆಸರಿದೆ ಅದೇ ರೀತಿ ಮತ್ತೊಂದು ಬಾಕ್ಸ್ನಲ್ಲಿ ಕೇಳಲಾಗುತ್ತದೆ. ಅಲ್ಲಿ ಎಂಟ್ರಿ ಮಾಡಬೇಕು.
ನಂತರ ನೀಡಲಾಗಿರುವ ಚೆಕ್ ಬಾಕ್ಸ್ನಿಂದ ರೈಟ್ ಕ್ಲಿಕ್ ಮಾಡಿದರೆ ವೆರಿಫೈ ಎನ್ನುವ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಬೇಕು.
ನೀವು ಸಲ್ಲಿಸಿರುವ ಮಾಹಿತಿಗಳು ಸರಿಯಾಗಿದ್ದಲ್ಲಿ ವೆರಿಫೈಡ್ ಎನ್ನುವ ಸಂದೇಶ ಬರುತ್ತದೆ. ಈಗ ಇ-ಕೆವೈಸಿ ಓಪನ್ ಆಗುತ್ತದೆ.
ಇಲ್ಲಿ ಮತ್ತೊಮ್ಮೆ ಆಧಾರ್ ಸಂಖ್ಯೆ ಕೇಳಲಾಗುತ್ತದೆ. ಅದನ್ನು ಎಂಟ್ರಿ ಮಾಡಬೇಕು. ನಂತರ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಒಟಿಪಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ನಂತರ ಜನರೇಟ್ ಒಟಿಪಿ ಕ್ಲಿಕ್ ಮಾಡಬೇಕು.
ಈಗ ಮತ್ತೊಮ್ಮೆ ನಿಮ್ಮ ಮೊಬೈಲ್ಗೆ ಒಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಿ ಸಬ್ಮಿಟ್ ಮಾಡಬೇಕು.
ಇಲ್ಲಿ ಎಲ್ಲವೂ ಸರಿಯಾಗಿದ್ದರೆ ನಿಮ್ಮ ಪ್ರೊಫೈಲ್ ಓಪನ್ ಆಗುತ್ತದೆ. ಪಕ್ಕದಲ್ಲಿ 3 ಡೋಟ್ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿ, ಲಿಂಕ್ ಆಧಾರ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಮುಂದಿನ ಪೇಜ್ನಲ್ಲಿ ನಿಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೇಳಲಾಗುತ್ತದೆ. ಅದನ್ನು ಭರ್ತಿ ಮಾಡುತ್ತ ಸಾಗಬೇಕು.
ಎಲ್ಲವು ಸರಿಯಾಗಿದ್ದಲ್ಲಿ ಯಶಸ್ವಿಯಾಗಿ ಆಧಾರ್ ಗೆ ಪಹಣಿ ಲಿಂಕ್ ಆಗಿರುವುದಕ್ಕೆ ಡನ್ ಎಂದು ತೋರಿಸುತ್ತದೆ.
ರೇಷನ್ ಕಾರ್ಡ್ ಇರೋರಿಗೆ ಮತ್ತೊಂದು ಬೆನಿಫಿಟ್; ಸಿಗಲಿದೆ 5000 ರೂಪಾಯಿ!
Aadhaar should be linked to your land Documents, Do it online
Our Whatsapp Channel is Live Now 👇