ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಿದ್ಧಮಾಡಿಕೊಳ್ಳಿ! ಈ ದಾಖಲೆ ಕೂಡ ಇಟ್ಟುಕೊಳ್ಳಿ
ಯಾವುದೇ ವ್ಯಕ್ತಿಯಾದರೂ ಆತ ಒಂದು ದೇಶದ ಪ್ರಜೆ ಎಂದು ನಿರೂಪಿಸಿಕೊಳ್ಳಲು ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ನಮ್ಮ ದೇಶದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಪಾಸ್ಪೋರ್ಟ್ ಹೀಗೆ ಹಲವು ರೀತಿಯ ದಾಖಲೆಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ.
ಇವುಗಳ ಸಾಲಿಗೆ ಪಡಿತರ ಚೀಟಿಯೂ (ration card) ಸೇರುತ್ತದೆ. ಪಡಿತರ ಚೀಟಿಯು ಇದೀಗ ಕೇವಲ ದಾಖಲೆ ಪತ್ರವಾಗಿ ಉಳಿದಿಲ್ಲ. ಸರ್ಕಾರದ ಹಲವು ಯೋಜನೆಗಳಿಗೆ ಮಾನದಂಡವಾಗಿಯೂ ಬಳಕೆಯಾಗುತ್ತಿದೆ.

ಹಾಗಾಗಿ ಇಂದು ಪಡಿತರ ಚೀಟಿಯು (ration card) ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ರಾಜ್ಯ ಸರ್ಕಾರ (State government) ವು ಹೊಸ ಪಡಿತರ ಚೀಟಿ ನೀಡುವುದಾಗಿ ಘೋಷಣೆ ಮಾಡಿದೆ. ಹಾಗಾದರೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂದು ತಿಳಿದುಕೊಳ್ಳೊಣ.
ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ! ಈ ರೀತಿ ಚೆಕ್ ಮಾಡಿಕೊಳ್ಳಿ
ರಾಜ್ಯ ಸರ್ಕಾರವು ಪಡಿತರ ಚೀಟಿಯ ಕುರಿತು ಆಗಾಗ ಮಾಹಿತಿ ನೀಡುತ್ತಿರುತ್ತದೆ. ಇದೀಗ ಹಳೆಯ ಪಡಿತರ ಚೀಟಿ ವಿತರಣಾ ಕಾರ್ಯವನ್ನು ಮಾ.31 ರ ಒಳಗಾಗಿ ಮುಗಿಸಿ ಏ.1ರಿಂದ ಹೊಸ ಪಡಿತರ ಚೀಟಿ ನೀಡಲು ಅರ್ಜಿ ಆಹ್ವಾನಿಸಲಾಗುತ್ತದೆ.
ಈಗಾಗಲೇ ಹೊಸ ಪಡಿತರ ಚೀಟಿಗಾಗಿ 2,95,986 ಅರ್ಜಿಗಳು ಬಂದಿವೆ. ಈ ಅರ್ಜಿಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಮಾ.31 ರ ಒಳಗೆ ವಿಲೇ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಹಾಗೂ ನಾಗರೀಕ ಪೂರೈಕೆ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ (K.H muniyappa ) ಅವರು ತಿಳಿಸಿದ್ದಾರೆ.
ಹೀಗಾಗಿ ಹೊಸ ಪಡಿತರ ಚೀಟಿ ವಿತರಣಾ ಕಾರ್ಯವು ಪ್ರಗತಿಯಲ್ಲಿದೆ. ಮಾ.31 ರ ಒಳಗೆ ಎಲ್ಲ ಪಡಿತರ ಚೀಟಿ ನೀಡಲಾಗುತ್ತದೆ. ಏ.1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಚಿತ ವಿದ್ಯುತ್! ಗೃಹಜ್ಯೋತಿ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಿದ್ಧರಾಮಯ್ಯ ಸರ್ಕಾರ
ಹೊಸ ಪಡಿತರ ಚೀಟಿ ಪಡೆಯಲು ನೀಡಬೇಕಾದ ದಾಖಲೆಗಳು: (needed documents to get new ration card)
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಿಗೆ, ಸ್ವಯಂ ಘೋಷಿತ ಪ್ರಮಾಣ ಪತ್ರ, ಇತ್ತಿಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ಮೊಬೈಲ್ ನಂಬರ್, ಮನೆಯ ಸದಸ್ಯರ ಮಾಹಿತಿ ನೀಡಬೇಕಾಗುತ್ತದೆ.
ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಬೇಕು; ಆನ್ಲೈನ್ ನಲ್ಲೇ ಮಾಡಿಕೊಳ್ಳಿ
ಹೊಸ ಪಡಿತರ ಚೀಟಿಗೆ ಇರಬೇಕಾದ ಅರ್ಹತೆಗಳು: (eligibility to get new ration card)
* ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
* ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.
* ನೂತನವಾಗಿ ಮದುವೆ ಆದ ದಂಪತಿಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.
* ಕುಟುಂಬದ ಆದಾಯವನ್ನು ಪರಿಗಣಿಸಿ ಬಿಪಿಎಲ್ ಪಡಿತರ ಚೀಟಿ ನೀಡಬೇಕೋ ಅಥವಾ ಎಪಿಎಲ್ ಪಡಿತರ ಚೀಟಿ ನೀಡಬೇಕೋ ಎಂದು ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ.
ರೇಷನ್ ಕಾರ್ಡ್ ಇದ್ರೂ ಇನ್ಮುಂದೆ ಇಂತಹವರಿಗೆ ಯಾವುದೇ ಯೋಜನೆಯ ಬೆನಿಫಿಟ್ ಇಲ್ಲ!
ಹೆಚ್ಚಿನ ಮಾಹಿತಿಗಾಗಿ ನೀವು ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ಇನ್ನಷ್ಟು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
Get ready for new ration card application, Keep this Documents