ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!

ಮಾರ್ಚ್ 31ಕ್ಕೆ ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿಯಲಿದ್ದು ಏಪ್ರಿಲ್ ಒಂದರಿಂದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು.

ಅಂತೂ ಇಂತೂ ಕೊನೆಗೂ ಎರಡುವರೆ ವರ್ಷಗಳ ಕಾಯುವಿಕೆಗೆ ನಿರ್ಣಾಯಕ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು ನಾವು ಮಾತನಾಡುತ್ತಿರುವುದು ರೇಷನ್ ಕಾರ್ಡ್ ವಿತರಣೆ (Ration Card distribution) ಯ ಬಗ್ಗೆ. ಯಾವಾಗ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತು ಅಂದಿನಿಂದಲೂ ರೇಷನ್ ಕಾರ್ಡ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

ಇಷ್ಟು ದಿನ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಯಾರ ಬಳಿ ಇದೆಯೋ ಅವರಿಗೆ ಉಚಿತ ಪಡಿತರವನ್ನು ಕೊಡಲಾಗುತ್ತಿತ್ತು.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! ಮಹಿಳೆಯರಿಗೆ ಇನ್ನೊಂದು ಸಿಹಿ ಸುದ್ದಿ

ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ! - Kannada News

ಅದೇ ರೀತಿ ಎಪಿಎಲ್ ಕಾರ್ಡ್ (APL Card) ಹೊಂದಿರುವವರು ಕೂಡ ಸರ್ಕಾರದ ಕೆಲವು ಪ್ರಯೋಜನಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಆದರೆ ಗ್ಯಾರೆಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಇದನ್ನ ಪಡೆದುಕೊಳ್ಳುವುದಕ್ಕೆ ಜನ ಪ್ರಯತ್ನಿಸುತ್ತಿದ್ದಾರೆ.

ಎಲ್ಲಾ ಅರ್ಜಿಗಳ ಪರಿಶೀಲನೆ ಮತ್ತು ವಿತರಣೆ!

ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರೇಷನ್ ಕಾರ್ಡ್ ಹೊಸ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಈಗಾಗಲೇ ಸುಮಾರು 2.96 ಲಕ್ಷ ರೇಷನ್ ಕಾರ್ಡ್ ಅರ್ಜಿ ಸರ್ಕಾರಕ್ಕೆ ಸಂದಾಯವಾಗಿದೆ.

ಆದರೆ ಇದಕ್ಕಾಗಿ ನಿಮ್ಮ ಕಾಯುವಿಕೆ ಈಗ ಕೊನೆಯ ಹಂತವನ್ನು ತಲುಪಿದೆ. ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (food minister K.H Muniyappa) ತಿಳಿಸಿರುವ ಮಾಹಿತಿಯ ಪ್ರಕಾರ ಮಾರ್ಚ್ 31ಕ್ಕೆ ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿಯಲಿದ್ದು ಏಪ್ರಿಲ್ ಒಂದರಿಂದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು. ಈಗಾಗಲೇ ಸಂದಾಯವಾಗಿರುವ ಅರ್ಜಿಗಳಲ್ಲಿ ಎಪಿಎಲ್ ಮತ್ತು ಬಿಪಿಎಲ್ ಎಂದು ಸರ್ಕಾರವೇ ಪ್ರತ್ಯೇಕ ಗೊಳಿಸಿ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡುತ್ತದೆ.

ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಿದ್ಧಮಾಡಿಕೊಳ್ಳಿ! ಈ ದಾಖಲೆ ಕೂಡ ಇಟ್ಟುಕೊಳ್ಳಿ

BPL Ration Cardಹೊಸ ರೇಷನ್ ಕಾರ್ಡ್ ಸಲ್ಲಿಸಬಹುದು ಅರ್ಜಿ! (Apply to get new ration card)

ನೀವು ಇದುವರೆಗೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸದೆ ಇದ್ದರೆ ನಿರಾಸೆಗೊಳ್ಳುವುದು ಬೇಡ. ನೀವು ಕೂಡ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಯಾರು ಮದುವೆಯಾಗಿ ಹೊಸ ಸಂಸಾರ ಆರಂಭಿಸುತ್ತಾರೋ ಅಥವಾ ಹೀಗಿರುವ ಮನೆಯಿಂದ ಪ್ರತ್ಯೇಕವಾಗಿ ಬೇರೆ ಕಡೆ ವಾಸಿಸುತ್ತಾರೋ ಅಂತವರು ತಮಗಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.

ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ! ಈ ರೀತಿ ಚೆಕ್ ಮಾಡಿಕೊಳ್ಳಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ ಖಾತೆಯ ವಿವರ (ಈಕೆ ವೈ ಸಿ ಕಡ್ಡಾಯ), ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಕುಟುಂಬದ ಸದಸ್ಯರ ವಿವರಣೆ, ಪಾಸ್ಪೋರ್ಟ್ ಅಳತೆಯ ಫೋಟೋ ಮೊದಲಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿ ಅರ್ಜಿ ಸ್ವೀಕಾರ ಕಾರ್ಯ ಆರಂಭವಾಗಲಿದ್ದು, ಇದನ್ನು ನೀವು ಆನ್ಲೈನ್ ನಲ್ಲಿ ಮಾಡಲು ಸಾಧ್ಯ ಅವಕಾಶವಿಲ್ಲ. ಹಾಗಾಗಿ ಹತ್ತಿರದ ಸೇವಾ ಕೇಂದ್ರಗಳಾದ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳಲ್ಲಿ ಸರಿಯಾದ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.

Date fixed for issue of ration card, also Apply for new ration card

Follow us On

FaceBook Google News

Date fixed for issue of ration card, also Apply for new ration card