ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ರಾಜ್ಯ ಸರ್ಕಾರವು ಚುನಾವಣಾ ಪೂರ್ವ ನೀಡಿದ ಮಾತಿನಂತೆ ಚುನಾವಣೆಯ ನಂತರ 5 ಗ್ಯಾರಂಟಿ ಯೋಜನೆಗಳನ್ನು ಆಡಳಿತಕ್ಕೆ ಬಂದ ಒಂದು ವರ್ಷದ ಒಳಗೆ ಜಾರಿಗೆ ತಂದಿದೆ. ಮಹಿಳೆಯರು ಸರ್ಕಾರಿ ಬಸ್ನಲ್ಲಿ ರಾಜ್ಯದೊಳಗೆ ಉಚಿತವಾಗಿ ಓಡಾಡಲು ಶಕ್ತಿ ಯೋಜನೆ, 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ, ವಿದ್ಯಾಭ್ಯಾಸ ಪೂರೈಸಿ ನಿರುದ್ಯೋಗಿಗಳಾಗಿರುವ ಯುವಕರಿಗೆ ಮಾಶಾಸನ ನೀಡುವ ಯುವನಿಧಿ ಯೋಜನೆ, ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಇದರಲ್ಲಿ ಮುಖ್ಯವಾಗಿ ಮನೆಯ ಯಜಮಾನಿಯ ಖಾತೆಗೆ (Bank Account) ಪ್ರತಿ ತಿಂಗಳು 2000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ (Gruha lakshmi scheme) ಸರ್ಕಾರ ಮಹತ್ವದ ಯೋಜನೆಯಾಗಿದೆ.

ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!
ಗೃಹ ಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಇದುವರೆಗೂ ಸರ್ಕಾರದ ಬಳಿ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ 6 ಕಂತುಗಳ ಹಣ ಬಿಡುಗಡೆಯಾಗಿದೆ.
ಇದೀಗ ಮಾರ್ಚ್ ತಿಂಗಳ ಹಣ ಮಾ.4ರಂದು ಸೋಮವಾರ ಬೆಳಿಗ್ಗೆ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎನ್ನುವ ಮಾಹಿತಿ ಬಂದಿದೆ. ಹಾಗಾದರೆ ಗೃಹ ಲಕ್ಷ್ಮಿ ಯೋಜನೆ ಹಣ ಬಂದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಹೇಗೆ ಎಂದು ಈಗ ನೋಡೋಣ.
ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ 6ನೇ ಕಂತಿನ ಹಣ ಜಮಾ ಮಾಡಲಾಗಿತ್ತು. ಆದರೂ ಎಲ್ಲ ಫಲಾನುಭವಿಗಳಿಗೂ ತಲುಪಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫೆಬ್ರವರಿ ತಿಂಗಳ ಹಣ ಬಾರದೆ ಇದ್ದವರಿಗೆ ಈ ತಿಂಗಳು ಎರಡೂ ತಿಂಗಳ ಹಣ ಅಂದರೆ 4,000 ರೂ. ಜಮಾ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಹೀಗಾಗಿ ಫೆಬ್ರವರಿ ತಿಂಗಳ ಹಣ ಬಂದಿಲ್ಲವಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ. ಅಕಸ್ಮಾತ್ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದಲ್ಲಿ ಕೂಡಲೇ ಅದನ್ನು ಸರಿಮಾಡಿಕೊಳ್ಳಿ.
ಸರ್ಕಾರಿ ಜಾಗ, ಜಮೀನು ಒತ್ತುವರಿ ತೆರವಿಗೆ ಸರ್ಕಾರದ ಮಾಸ್ಟರ್ ಪ್ಲಾನ್! ಇಲ್ಲಿದೆ ಮಾಹಿತಿ
ಒಂದು ವೇಳೆ ನೀವು ಗೃಹ ಲಕ್ಷ್ಮಿ ಯೋಜನೆಗೆ ನೀಡಿದ ಬ್ಯಾಂಕ್ ಖಾತೆ (bank account) ಬಂದ್ ಆಗಿದ್ದರೆ ಅದರ ಬದಲಾಗಿ ಅಂಚೆ ಕಚೇರಿ (post office) ಯಲ್ಲಿ ಖಾತೆ ತೆರೆದು ಅದನ್ನು ಗೃಹ ಲಕ್ಷ್ಮಿ ಯೋಜನೆಯೊಂದಿಗೆ ಜೋಡಣೆ ಮಾಡಿ.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ (Aadhar Card link) ಆಗದಿದ್ದರೂ ಗೃಹ ಲಕ್ಷ್ಮಿ ಯೋಜನೆ ಹಣ ಜಮಾ ಆಗುವುದು ಕಷ್ಟ. ಆದ್ದರಿಂದ ಯಾರು ಇದುವರೆಗೆ ಬ್ಯಾಂಕ್ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ ಮಾಡಿಲ್ಲವೋ ಅವರು ಕೂಡಲೇ ಮಾಡಿಕೊಳ್ಳಿ. ಇದುವರೆಗೆ ಯಾರು ಅರ್ಜಿ ಸಲ್ಲಿಸಿಲ್ಲ. ಅವರು ಸಹ ಅರ್ಜಿ ಸಲ್ಲಿಸಿ ಗೃಹ ಲಕ್ಷ್ಮಿ ಹಣ ಜಮಾ ಆಗುವಂತೆ ಮಾಡಬಹುದು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! ಮಹಿಳೆಯರಿಗೆ ಇನ್ನೊಂದು ಸಿಹಿ ಸುದ್ದಿ
ನಿಮ್ಮ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ ಅಲ್ಲಿ ಗೃಹ ಲಕ್ಷ್ಮಿ ಯೋಜನೆ ಆಯ್ಕೆ ಮಾಡಬೇಕು. ಅಲ್ಲಿ ನೀವು ಗೃಹ ಲಕ್ಷ್ಮಿ ಯೋಜನೆಯ ಖಾತೆ ಸಂಖ್ಯೆ ನಮೂದು ಮಾಡಿದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ತಿಳಿಯುತ್ತದೆ. ಇಲ್ಲದೆ ಇದ್ದಲ್ಲಿ ನೀವು ಬ್ಯಾಂಕ್ಗೆ ಸಹ ಹೋಗಿ ಪರಿಶೀಲನೆ ಮಾಡಿಕೊಳ್ಳಬಹುದು.
ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಿದ್ಧಮಾಡಿಕೊಳ್ಳಿ! ಈ ದಾಖಲೆ ಕೂಡ ಇಟ್ಟುಕೊಳ್ಳಿ
7th installment Gruha Lakshmi Yojana money to be deposited, Check your account