ಸರ್ಕಾರಿ ಜಾಗ, ಜಮೀನು ಒತ್ತುವರಿ ತೆರವಿಗೆ ಸರ್ಕಾರದ ಮಾಸ್ಟರ್ ಪ್ಲಾನ್! ಇಲ್ಲಿದೆ ಮಾಹಿತಿ
ಪ್ರಪಂಚದಲ್ಲಿ ತಂತ್ರಜ್ಞಾನ (technology ) ಸಿಕ್ಕಾಪಟ್ಟೆ ಮುಂದುವರಿದಿದೆ. ಈಗ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಬಳಕೆ ಮಾಡಿ ಕೆಲಸ ಮಾಡಲಾಗುತ್ತದೆ. ಹಾಗಾಗಿ ಸರ್ಕಾರಗಳು ಸಹ ಇದೇ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸರ್ಕಾರಿ ಜಮೀನುಗಳನ್ನು ಉಳಿಸಿಕೊಳ್ಳಲು ಮುಂದಾಗಿದೆ. ಅಲ್ಲದೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರಿಗೆ ಭಾರೀ ದಂಡ ವಿಧಿಸುವ ಆಲೋಚನೆಯನ್ನು ಮಾಡಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಜಮೀನು (Government land) ಒತ್ತುವರಿ ಮಾಡಿದರೂ ಯಾರೂ ಕೇಳುವವರಿಲ್ಲ ಎನ್ನುವ ಕಾಲವಿತ್ತು. ಹಾಗಾಗಿ ಆ ಕಾಲದಲ್ಲಿ ಹಣ ಬಲ, ರಾಜಕೀಯ ಬಲ ಉಳ್ಳವರು ಸರ್ಕಾರಿ ಜಮೀನುಗಳನ್ನು ಅತಿಕ್ರಮಿಸಿ ಮನೆ, ತೋಟಗಳನ್ನು ಮಾಡಿಕೊಂಡಿದ್ದಾರೆ. ಈಗ ಅದಕ್ಕೆ ದಂಡವನ್ನು ಪಾವತಿ ಮಾಡಿದ್ದಾರೆ. ಇದೀಗ ಸರ್ಕಾರಿ ಜಮೀನಿನ ಕಾವಲಿಗೆ ಲ್ಯಾಂಡ್ ಬೀಟ್ ವ್ಯವಸ್ಥೆ (land beat system) ಜಾರಿ ಮಾಡಲಾಗಿದೆ.

ಕೃಷಿ ಯಂತ್ರೋಪಕರಣ ಖರೀದಿಗೆ ಅರ್ಜಿ ಸಲ್ಲಿಸಿ; ಸಿಗಲಿದೆ ಶೇ.90ರಷ್ಟು ಸಹಾಯಧನ
ಮುಂದಿನ ದಿನದಲ್ಲಿ ಯಾರೂ ಸಹ ಸರ್ಕಾರಿ ಜಮೀನು ಒತ್ತುವರಿ ಮಾಡಲು ಸಾಧ್ಯವಿಲ್ಲ ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ. ತಿಳಿಸಿದ್ದಾರೆ.
ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಾಂಶ ಬಳಸಿಕೊಂಡು ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳು ಸರ್ಕಾರಿ ಜಮೀನಿಗೆ (Govt Property) ಜಿಯೋ ಫೆನ್ಸಿಂಗ್ ಮಾಡುತ್ತಾರೆ.
ಈ ಆಪ್ (application) ಮೂಲಕ ಜಿಯೋ ಪೆನ್ಸಿಂಗ್ ಮಾಡಿ ಒತ್ತುವರಿ ಮಾಡಿದರೆ ಅಂತಹ ಆಸ್ತಿ ವಿವರ ಕ್ಷಣ ಮಾತ್ರದಲ್ಲಿ ಲಭ್ಯವಾಗುತ್ತದೆ. ಈ ಸರ್ಕಾರಿ ಜಾಗಗಳಿಗೆ ಆಗಾಗ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದೇ ರೀತಿ ಈ ಆಪ್ನಲ್ಲಿ ಸಂರಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರದ ಈ ನೂತನ ಆಪ್ ಪ್ರಾಯೋಗಿಕ ಬಳಕೆಯನ್ನು ದಾವಣಗೆರೆ ಜಿಲ್ಲೆಯ ದೊಡ್ಡಬಾತಿ ಗ್ರಾಮದಲ್ಲಿ ಮಾಡಲಾಗಿದೆ. ಸ್ವತಃ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ತೆರಳಿ ಸ್ಮಶಾನ ಭೂಮಿ ಒತ್ತುವರಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! ಮಹಿಳೆಯರಿಗೆ ಇನ್ನೊಂದು ಸಿಹಿ ಸುದ್ದಿ
ಈ ವೇಳೆ ಸ್ಮಶಾನ ಭೂಮಿ ಒತ್ತುವರಿ ಆಗಿಲ್ಲ ಎನ್ನುವುದು ತಿಳಿದು ಬಂದಿದೆ. ಈ ಆಪ್ ಮೂಲಕ ರಾಜ್ಯದಾದ್ಯಂತ ಇರುವ ಸರ್ಕಾರಿ ಜಮೀನುಗಳಿಗೆ ಜಿಯೋ ಪೆನ್ಸಿಂಗ್ ಮಾಡಲಾಗುತ್ತದೆ.
ಈ ರೀತಿ ಜಿಯೋ ಪೆನ್ಸಿಂಗ್ ಆದ ಜಮೀನನ್ನು ಒತ್ತುವರಿ ಮಾಡಲು ಯತ್ನಿಸಿದರೆ ತಕ್ಷಣವೇ ಸರ್ಕಾರಕ್ಕೆ ತಿಳಿಯುತ್ತದೆ. ಸರ್ಕಾರವು ಅಂತಹ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ಯೋಜನೆ ರಾಜ್ಯದಾದ್ಯಂತ ಜಾರಿಗೆ ಬರಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಇಷ್ಟು ದಿನ ಸರ್ಕಾರಿ ಜಮೀನು ಎಂದರೆ ತಮ್ಮ ಸ್ವಂತ ಜಾಗ ಎಂದು ಭಾವಿಸಿದವರಿಗೆ ಇನ್ಮುಂದೆ ಶಾಕ್ ಕಾದಿದೆ. ಯಾರಾದರೂ ಸರ್ಕಾರಿ ಜಮೀನು ಒತ್ತುವರಿ ಮಾಡಿ ಮನೆ, ತೋಟ, ಹೊಲ ನಿರ್ಮಾಣ ಮಾಡಿಕೊಂಡಿದಲ್ಲಿ ಅಂತಹವರು ಅದನ್ನು ವಾಪಸ್ ನೀಡಬೇಕಾಗುತ್ತದೆ. ಜೊತೆಗೆ ಸರ್ಕಾರ ಹೇಳಿದಷ್ಟು ದಂಡ ಸಹ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಸರ್ಕಾರಿ ಜಮೀನು ಒತ್ತುವರಿ ತಪ್ಪುವುದರಲ್ಲಿ ಯಾವುದೇ ಸಂದೇಹವಿಲ್ಲ.
ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಿದ್ಧಮಾಡಿಕೊಳ್ಳಿ! ಈ ದಾಖಲೆ ಕೂಡ ಇಟ್ಟುಕೊಳ್ಳಿ
The government’s master plan to clear land encroachment