ಕೃಷಿ ಯಂತ್ರೋಪಕರಣ ಖರೀದಿಗೆ ಅರ್ಜಿ ಸಲ್ಲಿಸಿ; ಸಿಗಲಿದೆ ಶೇ.90ರಷ್ಟು ಸಹಾಯಧನ
ಸಹಾಯಧನದಲ್ಲಿ ವಿವಿಧ ಬಗೆಯ ಕೃಷಿ ಯಂತ್ರೋಪಕರಣ (agriculture equipment's) ಖರೀದಿ ಮಾಡಲು ಸರ್ಕಾರ ಅರ್ಜಿ ಆಹ್ವಾನಿಸಿದೆ
ಕೋವಿಡ್ (Covid 19) ನಂತರ ಎಲ್ಲರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕೋವಿಡ್ ಸಂದರ್ಭದಲ್ಲಿ ನಗರದಲ್ಲಿ ಇದ್ದವರು ಉದ್ಯೋಗವನ್ನು ಬಿಟ್ಟು ಊರಿನ ಕಡೆ ಮುಖ ಮಾಡಿದರೆ ಇನ್ನು ಕೆಲವರನ್ನು ಕಂಪನಿಯೇ ಕೈ ಬಿಟ್ಟಿದ್ದರಿಂದ ಊರಿಗೆ ಬಂದು ನೆಲೆಸಿದ್ದಾರೆ.
ಹೀಗೆ ನೆಲೆಸಿದವರು ಇರುವ ಜಮೀನಿನಲ್ಲಿಯೇ ಕೃಷಿ (Agriculture) ಕಾಯಕ ಮಾಡಿಕೊಂಡು ನೆಮ್ಮದಿಯ ಜೀವನ ಕಟ್ಟಿಕೊಳ್ಳುವತ್ತ ದಾಪುಗಾಲು ಇಟ್ಟಿದ್ದಾರೆ. ರೈತರಿಗೆ ಸರ್ಕಾರವು ಸಹ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ. ಇದೀಗ ರೈತರು ಕೃಷಿ ಯಂತ್ರೋಪಕರಣ ಖರೀದಿಗೆ ಅರ್ಜಿಯನ್ನು ಆಹ್ವಾನಿಸಿದೆ.
ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ಶೇ. 50 ಹಾಗೂ ಶೇ.90 ರ ಸಹಾಯಧನದಲ್ಲಿ ವಿವಿಧ ಬಗೆಯ ಕೃಷಿ ಯಂತ್ರೋಪಕರಣ (agriculture equipment’s) ಖರೀದಿ ಮಾಡಲು ಸರ್ಕಾರ ಅರ್ಜಿ ಆಹ್ವಾನಿಸಿದೆ.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! ಮಹಿಳೆಯರಿಗೆ ಇನ್ನೊಂದು ಸಿಹಿ ಸುದ್ದಿ
ಹಾಗಾಗಿ ಆಸಕ್ತ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಹಾಗಾದರೆ ಯಾರೆಲ್ಲ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವ ಯಾವ ದಾಖಲೆ ನೀಡಬೇಕು ಎಂದು ಈಗ ನೋಡೋಣ.
ಎಲ್ಲ ವರ್ಗದ ರೈತರು ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ ಅಡಿಯಲ್ಲಿ ಶೇ.5೦ರ ಸಹಾಯಧನದಲ್ಲಿ ಯಂತ್ರೋಪಕರಣ ಖರೀದಿಸಬಹುದು. ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ಶೇ.9೦ರ ಸಹಾಯಧನ ನೀಡಲಾಗುತ್ತದೆ.
ಯಾವ ಯಾವ ಯಂತ್ರಗಳ ಖರೀದಿಗೆ ಸಿಗುತ್ತೆ ಸಹಾಯಧನ?:
ಕಳೆ ಕತ್ತರಿಸುವ ಯಂತ್ರ
ಹುಲ್ಲು ಕತ್ತರಿಸುವ ಯಂತ್ರ
ರೋಟರಿ/ ಪವರ್ ವೀಡರ್
ಯಂತ್ರ ಚಾಲಿತ ಕೈಗಾಡಿಗಳು
ಔಷಧ ಸಿಂಪಡಣೆಗೆ ಎಚ್ಟಿಪಿ ಸ್ಪ್ರೇಯರ್ಸ್
ಕಾರ್ಬನ್ ಫೈಬರ್ ದೋಟಿ ಮತ್ತು ಏಣಿ
ಡಿಸೈಲ್ ಪಂಪ್ಸೆಟ್
ಗಂಡಿ ತೆಗೆಯುವ ಡಿಗ್ಗರ್
ರೋಟೋವೇಟರ್
ಭತ್ತ ನಾಟಿ ಮಾಡುವ ಯಂತ್ರ
ಭತ್ತ ಕಟಾವು ಮಾಡುವ ಯಂತ್ರ
ಪವರ್ ಟಿಲ್ಲರ್
ಹೊಸ ರೇಷನ್ ಕಾರ್ಡ್ ಅರ್ಜಿಗೆ ಸಿದ್ಧಮಾಡಿಕೊಳ್ಳಿ! ಈ ದಾಖಲೆ ಕೂಡ ಇಟ್ಟುಕೊಳ್ಳಿ
ಈ ಯೋಜನೆ ಸೌಲಭ್ಯ ಪಡೆಯಲು ಒದಗಿಸಬೇಕಾದ ದಾಖಲಾತಿಗಳು: (needed documents to get subsidy)
ಅರ್ಜಿದಾರರ ಇತ್ತೀಚಿನ ಭಾವಚಿತ್ರ
ಅರ್ಜಿದಾರರ ಆಧಾರ್ ಕಾರ್ಡ್
ಹಿಡುವಳಿ ಪ್ರಮಾಣ ಪತ್ರ
20 ರೂ.ನ ಬಾಂಡ್
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ಬುಕ್
ಈಗಾಗಲೇ ಸಹಾಯಧನ ಸೌಲಭ್ಯ ಪಡೆದು ಮತ್ತೆ ಅದೇ ಯಂತ್ರ ಖರೀದಿ ಮಾಡುವುದಾದರೆ ಸಹಾಯಧನ ನೀಡಲಾಗುವುದಿಲ್ಲ.
ನಿಮಗೆ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ! ಈ ರೀತಿ ಚೆಕ್ ಮಾಡಿಕೊಳ್ಳಿ
ಅನುದಾನದ ಲಭ್ಯತೆ ಹಾಗೂ ಜ್ಯೇಷ್ಠತೆ ಆಧರಿಸಿ ಸೌಲಭ್ಯ ನೀಡಲಾಗುತ್ತದೆ.
ಕಳೆದ ಮೂರು ವರ್ಷದಲ್ಲಿ ಇದೇ ಯೋಜನೆಯ ಸೌಲಭ್ಯ ಪಡೆದ ರೈತರಿಗೆ ಮತ್ತೆ ಇದೇ ಯೋಜನೆಯಲ್ಲಿ ಸೌಲಭ್ಯ ನೀಡಲಾಗುವುದಿಲ್ಲ.
ಸರ್ಕಾರವು ರೈತರನ್ನು ಸ್ವಾವಲಂಬಿ ಮಾಡಬೇಕು. ಆತ ನೆಮ್ಮದಿಯ ಜೀವನ ನಡೆಸಬೇಕು. ಅಂದಾಗ ಮಾತ್ರ ದೇಶ, ರಾಜ್ಯ ಸುಭಿಕ್ಷವಾಗಿರುತ್ತದೆ ಎನ್ನುವ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ರೈತರು ಈ ಯೋಜನೆಗಳ ಮಾಹಿತಿ ಪಡೆದುಕೊಂಡು ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು.
Apply for purchase of agricultural machinery, Will get 90 Percent subsidy